ಕೂಡಲೇ ರೆನೊ ಡಸ್ಟರ್ ನಿಮ್ಮದಾಗಿಸಿ, ಇಲ್ಲಂದ್ರೆ?

Written By:

ಹಾಗೊಂದು ವೇಳೆ ನೀವು ರೆನೊ ಡಸ್ಟರ್ ಖರೀದಿಸಲು ಯೋಜನೆ ಹಾಕಿದ್ದರೆ ಇನ್ನು ತಡ ಮಾಡಬೇಡಿರಿ. ಈ ಕೂಡಲೇ ನಿಮ್ಮ ಹತ್ತಿರದ ಡೀಲರ್‌ಶಿಪ್‌ಗೆ ತೆರಳಿ ನಿಮ್ಮ ಅಚ್ಚುಮೆಚ್ಚಿನ ಕಾರನ್ನು ಬುಕ್ ಮಾಡಿಸಿಕೊಳ್ಳಿರಿ!

ಯಾಕೆಂದರೆ ಹೊಸ ವರ್ಷದಿಂದ ರೆನೊ ಇಂಡಿಯಾಕ್ಕೂ ದರ ಏರಿಕೆ ಬಿಸಿ ತಟ್ಟುತ್ತದೆ. ಇತರ ವಾಹನ ಕಂಪನಿಗಳ ಬೆನ್ನಲ್ಲೇ ರೆನೊ ಇಂಡಿಯಾ ಕೂಡಾ ದರ ಏರಿಕೆ ಘೋಷಿಸಿದೆ.

2013 ಜನವರಿ 1ರಿಂದ ಚಾಲ್ತಿಗೆ ಬರುವಂತೆಯೇ ರೆನೊ ಆವೃತ್ತಿಗಳ ಕಾರು ದರದಲ್ಲಿ ಶೇಕಡಾ 1.5ರಷ್ಟು ಏರಿಕೆ ಮಾಡಲಾಗುತ್ತಿದೆ ಎಂದು ಆಟೋ ದೈತ್ಯ ರೆನೊ ಇಂಡಿಯಾ ಘೋಷಿಸಿದೆ.

ಇತರ ವಾಹನ ಕಂಪನಿಗಳು ನೀಡಿರುವ ಕಾರಣವನ್ನೇ ಮುಂದಿಟ್ಟಿರುವ ರೆನೊ ಕೂಡಾ ಆಮದು ಶುಲ್ಕ ಗಣನೀಯವಾಗಿ ವರ್ಧಿಸಿರುವುದರಿಂದ ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕಾರು ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದಿದೆ.

ಈ ಮೂಲಕ ಫ್ರಾನ್ಸ್‌ನ ಈ ಕಾರು ತಯಾರಕ ಕಂಪನಿಯ ಹ್ಯಾಚ್‌ಬ್ಯಾಕ್ ಆವೃತ್ತಿಗಳಾದ ರೆನೊ ಪಲ್ಸ್, ಮಿಡ್ ಸೈಜ್ ಸೆಡಾನ್ ಸ್ಕಾಲಾ, ಎಸ್‌ಯುವಿ ಡಸ್ಟರ್, ಪ್ರೀಮಿಯಂ ಸೆಡಾನ್ ಫ್ಯೂಯೆನ್ಸ್ ಹಾಗೂ ಪ್ರೀಮಿಯಂ ಎಸ್‌ಯುವಿ ಕೊಲೊಸ್ ಕಾರು ದರದಲ್ಲಿ ಏರಿಕೆ ಕಂಡುಬರಲಿದೆ.

ಪ್ರಸ್ತುತ ದೇಶದ್ಯಾಂತ ರೆನೊ ಇಂಡಿಯಾಗೆ 75 ಡೀಲರ್‌ಶಿಪ್‌ಗಳಿವೆ. ಹಾಗೆಯೇ ಪ್ರಸ್ತಕ ಆರ್ಥಿಕ ಸಾಲಿನ ಅಂತ್ಯದ ವೇಳೆ ಈ ಸಂಖ್ಯೆಯನ್ನು 100ಕ್ಕೆ ಏರಿಸುವ ಇರಾದೆಯನ್ನು ಹೊಂದಿದೆ.

ರೆನೊ ಪಲ್ಸ್

mid-size sedan Scala

SUV-Duster

premium sedan Fluence

premium SUV Koleos

English summary
French car maker Renault India has announced the price hike of 1.5 per cent across its models from January 2013. This price hike was announced by Renault, following higher input costs which is putting a burden on company profits.
Please Wait while comments are loading...

Latest Photos