ರುಪಾಯಿ ಕುಸಿತ, ಕಾರು ದರ ದುಬಾರಿಯಾಗುತ್ತ?

Posted by:

ರೂಪಾಯಿ ಮೌಲ್ಯ ಕುಸಿತವು ಕಾರು ಖರೀದಿದಾರರಿಗೆ ಎಚ್ಚರಿಕೆಯ ಗಂಟೆಯಾಗಿದೆಯೇ? ಹೆಚ್ಚಿನ ಕಾರು ಕಂಪನಿಗಳು ಬಿಡಿಭಾಗಗಳಿಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ಕರೆನ್ಸಿ ಏರುಪೇರು ವಾಹನ ಉತ್ಪಾದನೆ ವೆಚ್ಚವನ್ನು ಹೆಚ್ಚಿಸುತ್ತಿದೆ. ಇದರಿಂದ ಕಾರು ದರಗಳನ್ನು ಹೆಚ್ಚಿಸುವ ಅನಿವಾರ್ಯತೆಗೂ ಕಂಪನಿಗಳು ಸಿಲುಕಿವೆ.

ಬಿಡಿಭಾಗ ಆಮದು ವೆಚ್ಚ ಹೆಚ್ಚಳವು ಕಾರು ಕಂಪನಿಗಳ ಲಾಭಕ್ಕೆ ಹೊಡೆತ ನೀಡುತ್ತಿದೆ. ಮಾರುತಿ ಸುಜುಕಿ, ಟಾಟಾ ಮೋಟರ್ಸ್ ಮತ್ತು ಹ್ಯುಂಡೈನಂತಹ ಹೆಚ್ಚಿನ ಕಾರು ಕಂಪನಿಗಳು ಹೆಚ್ಚಿನ ಬಿಡಿಭಾಗಗಳನ್ನು ಸ್ಥಳೀಯ ಮಾರುಕಟ್ಟೆಯಿಂದ ಪೂರೈಸಿಕೊಳ್ಳುತ್ತದೆ. ಆದರೆ ಕೆಲವು ಕಂಪನಿಗಳು ಈಗಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನೇ ಅವಲಂಬಿಸಿಕೊಂಡಿವೆ.

ಕೆಲವು ಅಂತಾರಾಷ್ಟ್ರೀಯ ಕಾರು ಕಂಪನಿಗಳು ದೇಶಕ್ಕೆ ಕಾರುಗಳನ್ನೇ ರಫ್ತು ಮಾಡುತ್ತಿವೆ. ಇವುಗಳಿಗೆ ರುಪಾಯಿ ಮೌಲ್ಯ ಕುಸಿತವು ಭಾರಿ ಹೊಡೆತ ನೀಡುತ್ತಿದೆ. ಆದರೆ ಕಾರು ದರ ಹೆಚ್ಚಿಸಿದರೆ ಬೇಡಿಕೆ ಕಡಿಮೆಯಾಗುವ ಭೀತಿಯೂ ಈ ಕಂಪನಿಗಳಿಗಿದೆ.

ಕೆಲವು ಸೆಗ್ಮೆಂಟಿನ ಕಾರುಗಳ ಮಾರಾಟ ಈಗಾಗಲೇ ಕುಸಿದಿದೆ. ಇದರೆಡೆಯಲ್ಲಿ ದರ ಹೆಚ್ಚಳ ಮಾಡಿದರೆ ಯಾರು ಖರೀದಿಸ್ತಾರೆ ಎಂಬ ಅಳುಕೂ ಕೆಲವು ಕಾರು ಕಂಪನಿಗಳಿಗಿವೆ. ಆದರೆ ಕಾರು ಕಂಪನಿಗಳು ನಷ್ಟದ ಹೊರೆಯನ್ನು ಹೆಚ್ಚು ಹೊತ್ತು ಹೊರಲು ಸಿದ್ಧವಿಲ್ಲ. ಈ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ಹೊರೆಸುವುದು ಕಂಪನಿಗಳಿಗೆ ಅನಿವಾರ್ಯವಾಗಿದೆ.

ಪ್ರಸಕ್ತ ವರ್ಷದ ಬಜೆಟಿನಲ್ಲಿ ಅಬಕಾರಿ ಸುಂಕ ಮತ್ತು ತೆರಿಗೆಗಳು ಹೆಚ್ಚಾದ ಹಿನ್ನಲೆಯಲ್ಲಿ ಕಾರುಗಳು ಈಗಾಗಲೇ ದುಬಾರಿಯಾಗಿ ಪರಿಣಮಿಸಿವೆ. ರುಪಾಯಿ ಮೌಲ್ಯ ಕುಸಿತ ಕಾರು ಖರೀದಿದಾರರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಕೆಲವು ಮೂಲಗಳ ಪ್ರಕಾರ ಈ ತಿಂಗಳೇ ಕಾರು ದರಗಳು ದುಬಾರಿಯಾಗುತ್ತಂತೆ!

Click to compare, buy, and renew Car Insurance online

Buy InsuranceBuy Now

Story first published: Thursday, July 12, 2012, 14:25 [IST]
English summary
The drop in value of the India Rupee in the market has the potential to strike alarm bells for car buyers. Car prices in India are determined by not only local costs but also by the price of parts and components that are imported by carmakers. With several major carmakers importing parts, the manufacturing cost of cars are set to increase further.
Please Wait while comments are loading...

Latest Photos