ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಕಾರಿಗೆ ಸ್ವಲ್ಪ ಮೇಕಪ್ಪು

ಅಮೆರಿಕದ ಕಾರು ಕಂಪನಿ ಫೋರ್ಡ್ ಭಾರತಕ್ಕೆ ಪರಿಚಯಿಸಿದ್ದ ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಕಾರಿನ ಹೊಸ ಪರಿಷ್ಕೃತ ಆವೃತ್ತಿಯೊಂದು ಶೀಘ್ರದಲ್ಲಿ ರಸ್ತೆಗಿಳಿಯಲಿದೆ. ನೂತನ ಪರಿಷ್ಕೃತ ಫಿಗೊ ಆವೃತ್ತಿಯನ್ನು ಇತ್ತೀಚೆಗೆ ಚೆನ್ನೈ ರಸ್ತೆಯಲ್ಲಿ ಕಂಪನಿಯು ಟೆಸ್ಟ್ ಮಾಡುತ್ತಿತ್ತು.

ಹೊಸ ಪರಿಷ್ಕೃತ ಫಿಗೊ ಆವೃತ್ತಿಯ ಹೆಡ್ ಲ್ಯಾಂಪ್ ಮರುವಿನ್ಯಾಸ ಮಾಡಲಾಗಿದೆ. ಜೊತೆಗೆ ಇಲ್ಲಿವರೆಗೆ ಫಿಗೊ ಆವೃತ್ತಿಯಲ್ಲಿ ಲಭ್ಯವಿರದ ಹಳದಿ ಬಣ್ಣದಲ್ಲಿದೆ. ವಿನ್ಯಾಸ ಹೊರತು ಪಡಿಸಿ ಹೊಸ ಕಾರಿನ ಟೆಕ್ ಬದಲಾವಣೆಗಳ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ಈಗ ಫೋರ್ಡ್ ಫಿಗೊ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯಲ್ಲಿ ಒಟ್ಟು 8 ಆವೃತ್ತಿಗಳಲ್ಲಿ ದೊರಕುತ್ತದೆ. ಪೆಟ್ರೋಲ್ ಫೋರ್ಡ್ ಫಿಗೊ ಆರಂಭಿಕ ದರ ಸುಮಾರು 3.9 ಲಕ್ಷ ರುಪಾಯಿ ಇದೆ. ಡೀಸೆಲ್ ಫಿಗೊ ಆರಂಭಿಕ ದರ ಸುಮಾರು 4.8 ಲಕ್ಷ ರುಪಾಯಿ ಇದೆ.

ವರ್ಷದ ಅತ್ಯುತ್ತಮ ಕಾರು ಸೇರಿದಂತೆ ಫೋರ್ಡ್ ಫಿಗೊ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಫೋರ್ಡ್ ಫಿಗೊ ಮಾರಾಟ ಈಗಾಗಲೇ ಲಕ್ಷ ಸಂಖ್ಯೆಯನ್ನು ದಾಟಿದ್ದು, ಈಗಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಫೋರ್ಡ್ ಫಿಗೊ ಕಾರು 1.5 ಲೀಟರಿನ ಎಂಜಿನ್ ಹೊಂದಿದೆ. ಇದು 90 ಹಾರ್ಸ್ ಪವರ್ ಮತ್ತು 200 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಡೀಸೆಲ್ ಆವೃತ್ತಿಯು ಫಿಯೆಸ್ಟಾ ಸೆಡಾನಿನಲ್ಲಿರುವ ಎಂಜಿನ್ ಹೊಂದಿದೆ. ಕಂಪನಿಯು ಇತ್ತೀಚೆಗೆ ಫೋರ್ಡ್ ಫಿಯೆಸ್ಟಾ ಆ್ಯಂಬಿಯೆಂಟ್ ಎಂಬ ನೂತನ ಕಾರನ್ನು ಹೊರತಂದಿದೆ. ಇದು ಹಳೆಯ ಫಿಯೆಸ್ಟಾ ಕಾರಿಗಿಂತ 1.45 ಲಕ್ಷ ರುಪಾಯಿ ಅಗ್ಗವಾಗಿದೆ. ಫಿಯೆಸ್ಟಾ ಆ್ಯಂಬಿಯೆಂಟ್ ದರ 7.23 ಲಕ್ಷ ರುಪಾಯಿ.

Most Read Articles

Kannada
English summary
Ford Figo hatchback, the largest selling car for the American carmaker was launched in 2010. Now, the carmaker has decided to give the car a mid-career refresh in order to catch up with the new Maruti Suzuki Swift and the Hyundai i10. The carmaker was recently found testing the facelifted Figo hatchback on the highways of Chennai.
Story first published: Friday, June 1, 2012, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X