ಹ್ಯುಂಡೈ ಕಾರುಗಳಿಗೆ ಆಫರುಗಳ ಮುಂಗಾರು ಮಳೆ

Posted by:

ಕಾರು ಗ್ರಾಹಕರನ್ನು ಕಂಪನಿಯ ಶೋರೂಂನತ್ತ ಸೆಳೆಯಲು ಹ್ಯುಂಡೈ ಮೋಟರ್ಸ್ ಇಂಡಿಯಾ ಕಂಪನಿಯು ಆಫರುಗಳ ಸುರಿಮಳೆಯನ್ನೇ ಸುರಿಸಲು ಆರಂಭಿಸಿದೆ. ಈ ಆಫರುಗಳ ಸ್ಕೀಮಿಗೆ "ನೆವರ್ ಬಿಫೋರ್ ನೆವರ್ ಅಗೈನ್" ಎಂದು ಹೆಸರಿಟ್ಟಿದೆ. ಈ ಆಫರು ಜುಲೈ 25ರ ತನಕ ಮಾತ್ರ.

ಈ ಆಫರಿನಿಂದಾಗಿ ಗ್ರಾಹಕರು ಸುಮಾರು 20 ಸಾವಿರ ರು.ನಿಂದ 40 ಸಾವಿರ ರು.ವರೆಗೆ ದರ ವಿನಾಯಿತಿ ಪಡೆಯಬಹುದಾಗಿದೆ. ಐ10, ಸ್ಯಾಂಟ್ರೊ ಕ್ಷಿಂಗ್ ಮತ್ತು ಇಯಾನ್ ಕಾರು ಸೇರಿದಂತೆ ಸಣ್ಣಕಾರು ಸೆಗ್ಮೆಂಟಿಗೆ ಮಾತ್ರ ಈ ಡಿಸ್ಕೌಂಟ್ ಆಫರು ಇರಲಿದೆ.

ವಿನಿಮಯ ಬೋನಸ್ ಸೇರಿದಂತೆ ನೆಕ್ಸ್ಟ್ ಜೆನ್ ಐ10 ಕಾರು 3.54 ಲಕ್ಷ ರುಪಾಯಿಗೆ ದೊರಕಲಿದೆ. ಕಂಪನಿಯು ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್ಮೆಂಟಿನಲ್ಲೂ ದರ ವಿನಾಯಿತಿ ನೀಡಿದೆ. ಐ20 ಕಾರಿಗೆ ಕಂಪನಿಯು ಸುಮಾರು 32 ಸಾವಿರ ರುಪಾಯಿಯಷ್ಟು ಡಿಸ್ಕೌಂಟ್ ಮಾಡಿದೆ.

ಹ್ಯುಂಡೈ ಕಂಪನಿಯ ಸೆಡಾನ್ ಕಾರುಗಳಾದ ಅಸೆಂಟ್ ಮತ್ತು ವೆರ್ನಾ ಕಾರುಗಳಿಗೂ ದರ ವಿನಾಯಿತಿ ನೀಡಲಾಗಿದೆ. ಇವೆರಡು ಕಾರುಗಳಿಗೆ ದರ ವಿನಾಯಿತಿ 20 ಸಾವಿರ ರು.ನಿಂದ 30 ಸಾವಿರ ರು.ವರೆಗಿದೆ. ಹ್ಯುಂಡೈ ಸಾಂತಾ ಫೆ ಕಾರಿಗೂ ಸುಮಾರು 30 ಸಾವಿರ ರುಪಾಯಿ ದರ ವಿನಾಯಿತಿ ಮಾಡಲಾಗಿದೆ.

ಹ್ಯುಂಡೈ ಕಾರು ಖರೀದಿಸಲು ಬಯಸುವರು ತ್ವರೆ ಮಾಡಬಹುದು.

ಓದಿ: ನೂತನ ಹ್ಯುಂಡೈ ವೆರ್ನಾ ಸೌಂದರ್ಯ ಲಹರಿ

Click to compare, buy, and renew Car Insurance online

Buy InsuranceBuy Now

Story first published: Friday, July 13, 2012, 10:18 [IST]
English summary
When car sales have hit a slowdown, South Korean carmaker Hyundai has launched an exciting offer on its existing range of cars to attract customers towards their showrooms. The scheme - "Never Before Never Again" is offered till 25th of July.
Please Wait while comments are loading...

Latest Photos