ರಾಜ್ಯದ ಸೇವೆ ನಿರಾಕರಿಸಿದ್ದ ಜಯಲಲಿತಾ

By Nagaraja

ದೇಶದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್ ಸಲಹೆಯಂತೆ ಕಾವೇರಿ ನೀರು ಹಂಚಿಕೆ ವಿವಾದ ಕುರಿತು ಚರ್ಚಿಸಲು ಕರ್ನಾಟಕಕ್ಕೆ ಬಂದಿಳಿದಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಹಾಗೂ ರಾಜ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಡುವಣ ನವೆಂಬರ್ 29 ಗುರುವಾರದಂದು ನಡೆದ ಸಂಧಾನ ಮಾತುಕತೆ ಮುರಿದು ಬಿದ್ದಿರುವುದು ನಮೆಗೆಲ್ಲ ತಿಳಿದ ವಿಚಾರ.

ಆದರೆ ಕರ್ನಾಟಕಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದ ಜಯಲಲಿತಾ ರಾಜ್ಯ ಸರಕಾರದ ಯಾವುದೇ ಸೇವೆ ಬಳಸದಿರುವುದು ಅಚ್ಚರಿಗೆ ಕಾರಣವಾಗಿದೆ. ತಮ್ಮದೇ ಆದ ವಿಶೇಷವಾಗಿ ಸಜ್ಜೀಕರಿಸಲಾಗಿದ್ದ ಬುಲೆಟ್ ಪ್ರೂಪ್ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಜಯಲಲಿತಾ ಪಯಣಿಸಿದ್ದರು.

ತಮಿಳುನಾಡಿನಿಂದಲೇ ತರಲಾಗಿದ್ದ ಗುಂಡು ನಿರೋಧಕ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಪಯಣಿಸಿದ್ದ ಜಯಲಲಿತಾಗೆ ಬ್ಲ್ಯಾಕ್ ಕಮಾಂಡೋಗಳು ಬಿಗು ಭದ್ರತೆ ನೀಡಿದ್ದರು. ತಮ್ಮ ಭದ್ರತಾ ಸಿಬ್ಬಂದಿಗಳನ್ನು ಜಯಲಲಿತಾ ತಮಿಳುನಾಡಿನಿಂದಲೇ ಕರೆಸಿಕೊಂಡಿದ್ದರು. ಚೆನ್ನೈನಿಂದ ಬಂದಿಳಿದ್ದ 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಅಮ್ಮನವರಿಗೆ ಸರ್ಪಗಾವಲು ಏರ್ಪಡಿಸಿದ್ದರು.

ಇನ್ನೂ ವಿಶೇಷತೆಯೆಂದರೆ ಜಯಾ ಅವರಿಗಾಗಿ ಐಷಾರಾಮಿ ಕುರ್ಚಿಗಳನ್ನು ಸಹ ತಮಿಳುನಾಡಿನಿಂದಲೇ ಪ್ರತ್ಯೇಕ ವಾಹನದಲ್ಲಿ ತರಲಾಗಿತ್ತು. ಕರ್ನಾಟಕ ನೀಡಿದ ಯಾವುದೇ ಅಂಕಿಅಂಶಗಳನ್ನು ಒಪ್ಪಲು ಜಯಲಲಿತಾ ಮುಂದಾಗದಿರುವುದರಿಂದ ಮಾತುಕತೆ ಮುರಿದು ಬಿದ್ದಿದೆ. ರಾಜ್ಯ ಮುಂದಿಟ್ಟಿದ್ದ ಮೂರು ಸೂತ್ರಗಳನ್ನು ಜಯಾ ಗಾಳಿಗೆ ತೂರಿದ್ದರು.

ಜಪಾನ್ ಕಾರು ತಯಾರಕ ಕಂಪನಿಯಾದ ಟೊಯೊಟಾದ ದುಬಾರಿ ಲ್ಯಾಂಡ್ ಕ್ರೂಸರ್ ಬಗ್ಗೆ ಒಂದಿಷ್ಟು ತಿಳಿಯೋಣ...

ಜಯಲಲಿತಾ ಲ್ಯಾಂಡ್ ಕ್ರೂಸರ್ ಪಯಣ

ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಆಗಿರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಟಾಪ್ ಆಂಡ್ ವೆರಿಯಂಟ್ ಆಗಿದೆ. ಇದು ಬರೋಬ್ಬರಿ ಕೋಟಿ ಬೆಳೆಬಾಳುವುದಾಗಿದೆ.

ಜಯಲಲಿತಾ ಲ್ಯಾಂಡ್ ಕ್ರೂಸರ್ ಪಯಣ

ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಹೈಟೆಕ್ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ. ಇದು ಆಫ್ ರೋಡ್ ಸವಾರಿಗೂ ಸೂಕ್ತವಾಗಿದೆ. ಸ್ಯಾಟಲೈಟ್ ನ್ಯಾವಿಗೇಷನ್, ಕೀಲೆಸ್ ಎಂಟ್ರಿ, ಎಂಜಿನ್ ಇಮೊಬಿಲೈಝರ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಕ್ರೂಸ್ ಕಂಟ್ರೋಲ್ ಇದೆ. ಮನರಂಜನೆಗಾಗಿ 9 ಸ್ಪೀಕರ್, ಸಿಡಿ ಪ್ಲೇಯರ್, ಯುಎಸ್ ಬಿ ಪೋರ್ಟ್, ಐಪ್ಯಾಡ್ ಪ್ಲಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಗಳಿವೆ.

ಜಯಲಲಿತಾ ಲ್ಯಾಂಡ್ ಕ್ರೂಸರ್ ಪಯಣ

ಲ್ಯಾಂಡ್ ಕ್ರೂಷರ್ 200 ಕಾರಿನ ಎರಡೂ ಬದಿಯಲ್ಲೂ ಸೈಡ್ ಸ್ಟೆಪ್ ಇವೆ. ಇದರಿಂದ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಭದ್ರತೆ ಒದಗಿಸಲು ನೆರವಾಗಲಿದೆ. ಅಲ್ಲದೆ ಕಾರಿನೊಳಗೂ ವಿಶಾಲ ಸ್ಥಳಾವಕಾಶವಿದೆ.

ಜಯಲಲಿತಾ ಲ್ಯಾಂಡ್ ಕ್ರೂಸರ್ ಪಯಣ

ಲ್ಯಾಂಡ್ ಕ್ರೂಷರ್ ಎಲ್ ಸಿ 200 ಕಾರು ಸುರಕ್ಷಿತ ಸವಾರಿಗೂ ಪೂರಕವಾಗಿದೆ. ಅಂದರೆ ಇದರಲ್ಲಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಆಕ್ಟಿವ್ ಟ್ರಾಕ್ಷನ್ ಕಂಟ್ರೋಲ್, ಮಲ್ಟಿ ಟೆರ್ರಿಯನ್ ಆಂಟಿ ಸ್ಕಿಡ್ ಬ್ರೇಕಿಂಗ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಬ್ರೇಕ್ ಅಸಿಸ್ಟ್, ಆರು ಏರ್ ಬ್ಯಾಗುಗಳು ಇವೆ.

ಜಯಲಲಿತಾ ಲ್ಯಾಂಡ್ ಕ್ರೂಸರ್ ಪಯಣ

ಟೊಯೊಟಾ ಲ್ಯಾಂಡ್ ಕ್ರೂಸರ್ ಇಂಟಿರಿಯರ್ ವಿನ್ಯಾಸ ಅದ್ಭುತವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ.

ಜಯಲಲಿತಾ ಲ್ಯಾಂಡ್ ಕ್ರೂಸರ್ ಪಯಣ

ತಾಯ್ನಾಡಿನಿಂದ ಉಡುಗೊರೆಯಾಗಿ ನೀರು ತಗೊಂಡು ಹೋಗಲು ರಾಜ್ಯಕ್ಕೆ ಬಂದಿಳಿದಿದ್ದ ಜಯಲಲಿತಾ ಬರಿಗೈಯಲ್ಲಿ ವಾಪಾಸಾಗುವಂತಾಗಿದೆ.

Most Read Articles

Kannada
English summary
Tamil Nadu chief minister J Jayalalithaa is so fond of her Toyota Land Cruiser LC 200 that she had the car brought to Bangalore when she came to the city. It is another matter that Jayalalithaa's Land Cruiser is bullet proof and has been custom built for her.
Story first published: Saturday, December 1, 2012, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X