ಮಲ್ಯಗೆ ಮುಗಿಯದ ಸಂಕಷ್ಟ, ಹತ್ತು ಲಕ್ಷ ಡಾಲರ್ ದಂಡ

ಕ್ಯಾಥರ್‌ಹ್ಯಾಮ್ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಮೈಕ್ ಗ್ಯಾಸೊಯೆನ್ ಅವರಿಗೆ ಮಧ್ಯಂತರ ಕಾನೂನು ವೆಚ್ಚ ಸುಮಾರು ಹತ್ತು ಲಕ್ಷ ಡಾಲರ್(6,50,000 ಪೌಂಡ್) ಪರಿಹಾರವನ್ನು ನೀಡುವಂತೆ ಬ್ರಿಟನ್ ನ್ಯಾಯಾಲಯವು ವಿಜಯ್ ಮಲ್ಯ ಮಾಲಿಕತ್ವದ ಫೋರ್ಸ್ ಇಂಡಿಯಾಕ್ಕೆ ಆದೇಶಿಸಿದೆ. ಕಾನೂನು ವೆಚ್ಚವನ್ನು ಮುಂದಿನ ಹದಿನಾಲ್ಕು ದಿನಗಳೊಳಗೆ ಪಾವತಿಸುವಂತೆ ಕೋರ್ಟ್ ಸೂಚಿಸಿದೆ.

ಟೀಮ್ ಲೊಟಸ್ ಟಿ127 ವಿನ್ಯಾಸಕ್ಕೆ ಫಾರ್ಮುಲಾ ಒನ್ ಕಾರನ್ನು ನಕಲು ಮಾಡಿರುವ ಆರೋಪದಡಿ ಕೋರ್ಟ್ ವಿಚಾರಣೆ ನಡೆಸಿದೆ. ಆದರೆ ಮಲ್ಯ ಮಾಲಿಕತ್ವದ ಫೋರ್ಸ್ ಇಂಡಿಯಾವು ನಕಲು ಆರೋಪವನ್ನು ಸಾಬೀತು ಪಡಿಸಲು ವಿಫಲವಾಗಿದೆ. ಪರಿಣಾಮವಾಗಿ ಎದುರು ಪಾರ್ಟಿಯವರ ಕಾನೂನು ವೆಚ್ಚ ಭರಿಸುವ ಹೊಣೆಯೀಗ ಮಲ್ಯ ಹೆಗಲೇರಿದೆ.

ಏರೊಲ್ಯಾಬ್ ಮತ್ತು ಮೈಕ್ ಮೈಕ್ ಗ್ಯಾಸೊಯೆನ್ ಮೇಲೆ ತಂಡದ ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸಿರುವ ಕುರಿತು ಫೋರ್ಸ್ ಇಂಡಿಯಾ ಆರೋಪ ಮಾಡಿತ್ತು. ಏರೊಲ್ಯಾಬ್ ಕಂಪನಿಯು ಫೋರ್ಸ್ ಇಂಡಿಯಾದ ಮಾಜಿ ಪಾಲುದಾರ ಕಂಪನಿಯಾಗಿದೆ.

ಫೋರ್ಸ್ ಇಂಡಿಯಾದ ಏರೋಡೈನಾಮಿಕ್ ವಿನ್ಯಾಸವನ್ನು ಲೊಟಸ್ ನಕಲು ಮಾಡಿರುವ ಕುರಿತಾದ ಪ್ರಕರಣವನ್ನು ನ್ಯಾಯಾಲಯವು ಮುಂದೂಡಿದೆ ಎಂದು ಫೋರ್ಸ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ವಿಚಾರಣೆ ಯಾವ ದಿಕ್ಕಿಗೆ ಸಾಗುವುದೋ ಕಾದು ನೋಡಬೇಕಿದೆ. ಒಟ್ಟಾರೆ ವಿಜಯ್ ಮಲ್ಯಗೆ ಸಂಕಷ್ಟದ ಮೇಲೆ ಸಂಕಷ್ಟದ ದಿನಗಳು ಆರಂಭವಾಗಿವೆ.

Most Read Articles

Kannada
English summary
Force India Formula One racing team, owned by Indian business tycoon Vijay Mallya, has been ordered by a British High Court to pay 6,50,000 pounds ($1 million) to rival Formula One team Caterham and their chief technical officer Mike Gascoyne.
Story first published: Saturday, May 5, 2012, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X