ಸಿಡಿಯಾ ಕಾರು ರಸ್ತೆಗೆ, ಯಾರಿವಳು ಕೆಂಪು ಸುಂದ್ರಿ?

Posted by:

ಮಿಟ್ಸುಬಿಸಿ ಫ್ಯಾಕ್ಟರಿಯಿಂದ ಮಧ್ಯಮ ಗಾತ್ರದ ನೂತನ ಸಿಡಿಯಾ ಸೆಡಾನ್ ಕಾರೊಂದು ಹೊರಬಂದಿದೆ. ಈ ಆವೃತ್ತಿಗೆ ಕಂಪನಿಯು ಸಿಡಿಯಾ ಸೆಲೆಕ್ಟ್ 2012 ಎಂದು ಹೆಸರಿಟ್ಟಿದೆ. ಹತ್ತು ಹಲವು ವಿಶೇಷ ಫೀಚರುಗಳ ಈ ಕಾರಿನ ದರ 8.9 ಲಕ್ಷ ರುಪಾಯಿ. ಇದು ದೆಹಲಿ ಎಕ್ಸ್ ಶೋರೂಂ ದರ. ಇದರಲ್ಲಿರುವ ಅತಿ ಪ್ರಮುಖ ಫೀಚರೆಂದರೆ ಇದರಲ್ಲಿ ಜಿಪಿಎಸ್ ಮತ್ತು ಆಂತರಿಕ ಎಂಟರ್ ಟೈನ್ ಮೆಂಟ್ ಸಿಸ್ಟಮ್ ಗಳಲ್ಲಿ ಕಾರ್ಯನಿರ್ವಹಿಸುವ 3ಜಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಇದೆ. ಸೂಪರ್ ಅಲ್ವಾ?

ನೂತನ ಸಿಡಿಯಾ ಸೆಲೆಕ್ಟ್ ಕಾರಿನಲ್ಲಿರುವ ಆಂಡ್ರಾಯ್ಡ್ ಟ್ಯಾಬ್ಲೆಟನ್ನು ಬೇಕಾದ ಬದಿಗೆ ತಿರುಗಿಸಿಟ್ಟುಕೊಳ್ಳಬಹುದು. ಮುಂಭಾಗ ಅಥವಾ ಹಿಂಭಾಗದ ಸೀಟಿನ ಹೆಡ್ ರೆಸ್ಟಿಗೆ ಜೋಡಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ ನೂತನ ಸಿಡಿಯಾ ಕಾರಿನಲ್ಲಿ 6.1 ಇಂಚಿನ ಟಚ್ ಸ್ಕ್ರೀನ್ ಇಂಟರ್ ಫೇಸ್ ಇರುವ ಕೆನ್ ವುಡ್ ಡಿವಿಡಿ ಪ್ಲೇಯರ್ ಕೂಡ ಇದೆ.

ಹೀಗೆ ನೂತನ ಸಿಡಿಯಾ ಕಾರಿಗೆ ಮಿಟ್ಸುಬಿಟಿ ಹಲವು ವಿನೂತನ ಫೀಚರುಗಳನ್ನು ಅಳವಡಿಸಿದೆ. ನೂತನ ಸಿಡಿಯಾ ಸೆಲೆಕ್ಟ್ ಕಾರಿನಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟಿಲ್ಟ್ ಸ್ಟಿಯರಿಂಗ್, ಕಿಲೆಸ್ ಎಂಟ್ರಿ, ಪವರ್ ವಿಂಡೋಸ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಪವರ್ ಅಸಿಸ್ಟ್ ಇರುವ ಮುಂಭಾಗದ ಸೀಟು, ಅವಳಿ ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಇತ್ಯಾದಿ ಸ್ಟಾಂಡರ್ಡ್ ಫೀಚರುಗಳಿವೆ.

ನೂತನ ಸಿಡಿಯಾ ಸೆಲೆಕ್ಟ್ ಆವೃತ್ತಿಯು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ. ಎರಡು ಲೀಟರಿನ ನಾಲ್ಕು ಸಿಲಿಂಡರಿನ ಎಂಜಿನ್ 113 ಅಶ್ವಶಕ್ತಿ ಮತ್ತು 175 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.

ಹಳೆಯ ಸಿಡಿಯಾ ಆವೃತ್ತಿಗಿಂತ ನೂತನ ಸಿಡಿಯಾ ಕಾರಿನ ದರ 90 ಸಾವಿರ ರು. ಹೆಚ್ಚಾಗಿದೆ. ಮಧ್ಯಮ ಗಾತ್ರದ ಸೆಡಾನ್ ಸೆಗ್ಮೆಂಟಿನಲ್ಲಿ ಅಂತಹ ಹೇಳಿಕೊಳ್ಳವಂತಹ ಪ್ರತಿಸ್ಪರ್ಧಿಗಳು ಸಿಡಿಯಾ ಕಾರಿಗಿಲ್ಲ. ಯಾಕೆಂದರೆ ಸಿಡಿಯಾ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿಲ್ಲ. ಅತ್ಯುತ್ತಮ ಡ್ರೈವಿಂಗ್ ಅನುಭವ ಪಡೆಯಲು ಬಯಸುವ ಪೆಟ್ರೋಲ್ ಕಾರು ಪ್ರೇಮಿಗಳನ್ನು ನೂತನ ಸಿಡಿಯಾ ಸೆಲೆಕ್ಟ್ ಸೆಳೆಯುವ ನಿರೀಕ್ಷೆಯಿದೆ.

Click to compare, buy, and renew Car Insurance online

Buy InsuranceBuy Now

Story first published: Thursday, July 12, 2012, 16:00 [IST]
English summary
Mitsubishi India has updated its Cedia mid size sedan by launching a new variant called the Cedia Select 2012. The new sedan boasts of several new features and has been priced at Rs.8.9 lakhs (ex showroom price - Delhi).
Please Wait while comments are loading...

Latest Photos