ತೆಲುಗು ಚಿತ್ರರಂಗದ ಉದಯೋನ್ಮುಖ ನಟ ರಾಮ್ ಚರಣ್ ತೇಜಾ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸಂದರ್ಭದಲ್ಲಿ ಅತ್ತೆ ಮನೆಯಿಂದ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ಪಡೆದಿದ್ದರು.
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಹಾಗೂ ರಾಜಕೀಯ ರಂಗದಲ್ಲಿ ಸಕ್ರಿಯವಾಗಿರುವ ಚೀರಂಜೀವಿ ಅವರ ಹೆಮ್ಮೆಯ ಸುಪುತ್ರರಾಗಿರುವ ರಾಮ್ ಚರಣ್ ತೇಜಾ ಸೂಪರ್ ಹಿಟ್ 'ಮಗಧಿರ' ಚಿತ್ರದ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಪ್ರಖ್ಯಾತವೆನಿಸಿದ್ದರು.
27ರ ಹರೆಯದ ರಾಮ್ ಚರಣ್ ತೇಜಾ ಅವರು ಉಪಾಸನಾ ಕಾಮಿನೇನಿ ಅವರನ್ನು ಬಾಳಸಂಗಾತಿಯಾಗಿ ವರಿಸಿಕೊಂಡಿದ್ದರು. ಇದರಂತೆ ಮದುವೆ ಸಂದರ್ಭದಲ್ಲಿ ಅತಿ ದುಬಾರಿ ಆಸ್ಟನ್ ಮಾರ್ಟಿನ್ ವಿ8 ವ್ಯಾಂಟೆಜ್ ಕಾರನ್ನು ಮದುವೆ ಉಡುಗೊರೆಯಾಗಿ ನೀಡಿದ್ದರು.
ದಶಕಗಳಿಂದಲೂ ತನ್ನ ಬ್ರಾಂಡ್ ಹೆಸರಿಗೆ ಕಾರಣವಾಗಿರುವ ಆಸ್ಟನ್ ಮಾರ್ಟಿನ್ ಕಾರು ಉತ್ತಮ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಅಂದ ಹಾಗೆ ವಿ8 ವ್ಯಾಂಟೆಜ್ ಕಾರಿನ ಬೆಲೆ ಭಾರತದಲ್ಲಿ ಎರಡು ಕೋಟಿ ರುಪಾಯಿಗಳಿಗೂ ಹೆಚ್ಚಿದೆ.






































