ಮಾರುತಿ ಜಿಪ್ಸಿ ತಮ್ಮ ಜಿಮ್ನಿ ಬಂದನಪ್ಪೋ!

ಮಾರುತಿ ಸುಜುಕಿ ಜಿಪ್ಸಿಗಿಂತಲೂ ಚಿಕ್ಕದಾಗಿ ಕಾಣುವ ಜಿಮ್ನಿ ಎಸ್‌ಯುವಿಕಾರಿನ ಸಣ್ಣ ಆವೃತ್ತಿಯೊಂದನ್ನು ಚೀನಾ ವಾಹನ ಮಾರುಕಟ್ಟೆಗೆ ಸುಜುಕಿ ಪರಿಚಯಿಸಿದೆ. ಪ್ರಾಯಶಃ ಕೆಲವು ಸಮಯ ಕಳೆದು ಈ ಮಿನಿ ಜಿಮ್ನಿ ದೇಶದ ರಸ್ತೆಗೂ ಆಗಮಿಸುವ ನಿರೀಕ್ಷೆಯಿದೆ.

ನೂತನ ಪರಿಷ್ಕೃತ ಮಿನಿ ಜಿಮ್ನಿ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿದೆ. ಇದರ ದರ 12.2 ಲಕ್ಷ ರು.ನಿಂದ 13.6 ಲಕ್ಷ ರು. ಆಸುಪಾಸಿನಲ್ಲಿದೆ. ಆಮದು ಸುಂಕ, ತೆರಿಗೆಗಳೆಲ್ಲ ಸೇರಿ ಸುಜುಕಿ ಜಿಮ್ನಿ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿದೆ.

ನೂತನ ಸುಜುಕಿ ಜಿಮ್ನಿ ಕಾರು 1.3 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದ್ದು, 85 ಅಶ್ವಶಕ್ತಿ ಮತ್ತು 110 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಗ್ರಾಹಕರು ಮಿನಿ ಜಿಮ್ನಿಯನ್ನು ಐದು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಅಥವಾ ನಾಲ್ಕು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಖರೀದಿಸಬಹುದು. ಇದು ಫೋರ್ ವೀಲ್ ಡ್ರೈವ್ ಎಸ್ ಯುವಿಯಾಗಿದೆ.

ಹಳೆಯ ಜಿಮ್ನಿ ಕಾರಿಗೆ ಹೋಲಿಸಿದರೆ ನೂತನ ಮಿನಿ ಜಿಮ್ನಿ ಹೊರವಿನ್ಯಾಸ ಕೊಂಚ ಬದಲಾಗಿದೆ. ಮರುವಿನ್ಯಾಸ ಮಾಡಿದ ಗ್ರಿಲ್, ಹೆಡ್ ಲೈಟ್ ಮತ್ತು ನೂತನ ಬಂಪರುಗಳಿಂದ ಮಿನಿ ಜಿಮ್ನಿ ಆಕರ್ಷಕವಾಗಿ ಕಾಣುತ್ತದೆ. ಇಂಟಿರಿಯರ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಜಿಮ್ನಿ ಎಸ್ ಯುವಿಯ ದೇಶದ ಆವೃತ್ತಿ ಮಾರುತಿ ಜಿಪ್ಸಿಯಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಜಿಪ್ಸಿ ಪರಿಷ್ಕೃತ ಆವೃತ್ತಿ ಆಗಮಿಸಿಲ್ಲ. ಇದರಿಂದಾಗಿ ಮಾರುತಿ ಜಿಪ್ಸಿ ಮಾರಾಟವೂ ಇಳಿಕೆ ಕಂಡಿದೆ. ಆದರೂ ಸ್ಪೋರ್ಟ್ ಯುಲಿಟಿಲಿ ಪ್ರೇಮಿಗಳಿಗೆ ಈಗಲೂ ಜಿಪ್ಸಿ ಅಚ್ಚುಮೆಚ್ಚು. ಆಫ್ ರೋಡ್ ಸವಾರಿಗೆ ಸೂಕ್ತವಾದ ಜಿಪ್ಸಿಗೆ ಈಗಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ವಿಶೇಷವೆಂದರೆ ಭಾರತದ ಸೇನೆಯು ಜಿಪ್ಸಿಯನ್ನು ಅತ್ಯಧಿಕ ಸಂಖ್ಯೆಯಲ್ಲಿ ಖರೀದಿಸುತ್ತಿದೆ.

ಚೀನಾದಲ್ಲಿ ನೂತನ ಮಿನಿ ಜಿಮ್ನಿ ಬಿಡುಗಡೆ ಮಾಡಿರುವುದು ದೇಶದ ಜಿಪ್ಸಿ ಪ್ರೇಮಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ. ಜಿಮ್ನಿ ಅಪ್ ಡೇಟ್ ಆಗಿರೋದಿಂದ್ರ ಜಿಪ್ಸಿಯೂ ಅಪ್ ಡೇಟ್ ಆಗುವ ನಿರೀಕ್ಷೆಯಿದೆ. ಹದಿನೈದು ವರ್ಷದ ಹಳೆಯದಾದ ಜಿಮ್ನಿಗೆ ಸದ್ಯ ಯಾವುದೇ ಪ್ರತಿಸ್ಪರ್ಧಿಗಳಿಲ್ಲ. ಆದರೆ ಮಿನಿ ಕ್ಷೈಲೊ ಮತ್ತು ಫೋರ್ಡ್ ಎಕೊಸ್ಪೋರ್ಟ್ ಭವಿಷ್ಯದಲ್ಲಿ ಜಿಪ್ಸಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಕಂಪನಿಯು ಈಗ ಎಕ್ಸ್ ಎ ಆಲ್ಪಾ ಎಂಬ ಕಾನ್ಸೆಪ್ಟ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು. ನೂತನ ಎಕ್ಸ್ ಎ ಆಲ್ಪಾ ಪ್ರಸಕ್ತ ಮಾರುತಿ ಜಿಪ್ಸಿ ಸ್ಥಾನಕ್ಕೆ ಆಗಮಿಸುವ ನಿರೀಕ್ಷೆಯಿದೆ.

Most Read Articles

Kannada
English summary
Suzuki has launched the face-lifted version of its mini SUV the Jimny in China. The Jimny looks very much similar to the Maruti Suzuki Gypsy. While the launch of the new Jimny in China could indicate a possibility of the Gypsy also getting an update, it is highly unlikely. The face-lifted Jimny is available in four variants and is priced between Rs.12.2 lakhs and 13.6 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X