ಹೊಸ ವಿನ್ಯಾಸದೊಂದಿಗೆ ಅಮೆರಿಕ ಪ್ರವೇಶಿಸಲಿರುವ ಟಾಟಾ ನ್ಯಾನೊ

By Nagaraja

ಇನ್ನು ಕೆಲವೇ ವರ್ಷಗಳಲ್ಲಿ ಹೊಸ ವಿನ್ಯಾಸಗಳೊಂದಿಗೆ ಟಾಟಾ ನ್ಯಾನೊ ಅಮೆರಿಕ ಪ್ರವೇಶ ಮಾಡಲಿದೆ. ಅಮೆರಿಕ ಮಾರುಕಟ್ಟೆಗೆ ಹೊಂದಿಕೆಯಾಗುವ ರೀತಿಯಲ್ಲಿ ಭಾರತದ ಈ ಸಣ್ಣ ಬಜೆಟ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಕಂಪನಿ ತಿಳಿಸಿದೆ.

ಭಾರತದ ಮಾದರಿಗೆ ಹೋಲಿಸಿದರೆ ಹೆಚ್ಚು ಆಧುನಿಕತೆಯನ್ನು ಅಮೆರಿಕ ಮಾಡೆಲ್ ನ್ಯಾನೊ ಕಾರು ಹೊಂದಿದೆ. ಆದರೆ ದರ ಮಾತ್ರ ಸ್ವಲ್ಪ ದುಬಾರಿಯಾಗಿದೆ. ಹೋಗ್ಲಿ ಬಿಡಿ; ದರ ಬಗ್ಗೆ ಚಿಂತೆ ಯಾಕೆ. ಕಾರು ಚೆನ್ನಾಗಿದ್ದರೆ ಎಷ್ಟೇ ದುಡ್ಡು ಕೊಟ್ಟಾದರೂ ಅಲ್ಲಿನ ಜನ ಕಾರು ಖರೀದಿಸುತ್ತಾರೆ ಬಿಡಿ!

600 ಸಿಸಿ, 2 ಸಿಲಿಂಡರ್ ಪೆಟ್ರೋಲ್ ಎಂಜಿನ್ ನೂತನ ನ್ಯಾನೊ ಫೀಚರ್ಸ್‌ಗಳಾಗಿದ್ದು, ಗಂಟೆಗೆ ಗರಿಷ್ಠ ವೇಗದಲ್ಲಿ 105 ಕೀ. ಮೀ. ಮೈಲೇಜ್ ದೊರಕಲಿದೆ. ಹಾಗೆಯೇ ಅಮೆರಿಕ ವೇಗತೆಯ ಅವಶ್ಯಕತೆಗಳಿಗೆ ಅನುಸಾರವಾಗಿ ಒಂದು ಹೆಚ್ಚುವರಿ ಸಿಲಿಂಡರ್ ಜತೆ 800ಸಿಸಿ-1000ಸಿಸಿ ಎಂಜಿನ್ ಜೋಡಿಸಲಾಗಿದೆ. ಎಮಿಷನ್ ನಾರ್ಮ್ಸ್, ವಿನ್ಯಾಸ ಬದಲಾವಣೆ, ಪವರ್ ಸ್ಟೀರಿಂಗ್, ಏರ್‌ಬ್ಯಾಗ್ಸ್, ಟ್ರಾಕ್ಷನ್ ಕಂಟ್ರೋಲ್ ಸಹಿತ ಇತ್ಯಾದಿ ಫೀಚರ್‌ಗಳನ್ನು ನ್ಯಾನೊ ಕಾರು ಹೊಂದಿದೆ.

ಆದರೆ ನ್ಯಾನೊ ಮಾರಾಟ ಪ್ರಕ್ರಿಯೆ ಹೇಗೆ ನಿಯಂತ್ರಿಸಲಿದೆ ಎಂಬುದು ತಿಳಿದು ಬಂದಿಲ್ಲ. ಯಾಕೆಂದರೆ ಕಂಪೆನಿಗೆ ಅಮೆರಿಕದಲ್ಲಿ ಯಾವುದೇ ಮಾರಾಟ ಜಾಲವಿಲ್ಲ. ಹಾಗಿದ್ದರೂ ಈ ಬಗ್ಗೆ ವಿಸ್ತಾರವಾದ ಮಾತುಕತೆ ಸಾಗುತ್ತಿದ್ದು, ಸದ್ಯದಲ್ಲೇ ಸಮಸ್ಯೆ ಇತ್ಯರ್ಥವಾಗುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ ಜಾಗ್ವಾರ್ ಲ್ಯಾಂಡ್ ರೋವರ್ ಡೀಲರ್ಸ್‌ಗಳನ್ನು ಟಾಟಾ ನ್ಯಾನೊ ಬಳಸುವ ಸಾಧ್ಯತೆಯಿದೆ.

Most Read Articles

Kannada
English summary
Tata Motors plans to introduce the Nano in the American market in the next few years. The small car from Tata will be redesigned to an upmarket phase for the Americans and will feature more sophistication as compared to its Indian counterpart.
Story first published: Tuesday, October 16, 2012, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X