ಪರಿಸರ ಸ್ನೇಹಿ ಜಗತ್ತಿನ ಟಾಪ್ 10 ಎಲೆಕ್ಟ್ರಿಕ್ ಕಾರುಗಳು!

ಇಂಧನ ಬೆಲೆಯು ದಿನದಿಂದ ದಿನಕ್ಕೆ ವರ್ಧಿಸುತ್ತಿರುವ ಹಿನ್ನಲೆಯಲ್ಲಿ ಕಾರು ಖರೀದಿ ಗ್ರಾಹಕರು ಹೊಸ ಚಿಂತನೆಗೆ ಮುಂದಾಗಿದ್ದಾರೆ. ಇದು ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಹೆಸರಿನಲ್ಲಿ ನಮೂದಿಸಿರುವಂತೆಯೇ ಇದು ವಿದ್ಯುತ್ ಚಾಲಿತ ಕಾರುಗಳಾಗಿದ್ದು, ಪರಿಸರ ಸ್ನೇಹಿ ಆಗಿದ್ದರಿಂದ ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ನೆರವಾಗಿದೆ.

ತಮ್ಮ ಮಾರಾಟವನ್ನು ಕಳೆದುಕೊಳ್ಳಲು ಬಯಸದ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಗ್ರಾಹಕರಿಗಾಗಿ ಪರಿಚಯಿಸುತ್ತಿದೆ. ದುಬಾರಿ ಕಾರುಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳು ಅಗ್ಗದ ದರದಲ್ಲಿ ಗ್ರಾಹಕರ ಕೈ ಸೇರುತ್ತಿದೆ.

ಎಲೆಕ್ಟ್ರಿಕ್ ಕಾರುಗಳು ನಿಮ್ಮ ದೈನಂದಿನ ಜೇಬಿಗೆ ಬೀಳಲಿರುವ ಕತ್ತರಿಗೆ ಬ್ರೇಕ್ ಹಾಕಲಿದೆ. ಅಲ್ಲದೆ ಒಂದು ಸಾಮಾನ್ಯ ಕಾರು ಹೊಂದಿರುವ ಎಲ್ಲ ಫೀಚರ್‌ಗಳನ್ನು ಎಲೆಕ್ಟ್ರಿಕ್ ಕಾರಿನಲ್ಲಿರಲಿದೆ. ಕೆಲವೊಂದು ಎಲೆಕ್ಟ್ರಿಕ್ ಕಾರುಗಳಲ್ಲಂತೂ ಅತ್ಯಾರ್ಷಕ ಆಧುನಿಕ ಫೀಚರ್‌ಗಳನ್ನು ಆಳವಡಿಸಲಾಗಿದ್ದು, ಅವುಗಳನ್ನು ನಿಮ್ಮಿಂದ ಊಹಿಸಲಸಾಧ್ಯ! ನಾವಿಂದು ಇತಂಹುದೇ ಜಗತ್ತಿನ ಟಾಪ್ 10 ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡಲಿದ್ದೇವೆ. ಡ್ರೈವ್ ಸ್ಪಾರ್ಕ್ ತಂಡದ ಈ ಪ್ರಯತ್ನವು ನಿಮ್ಮ ಮೆಚ್ಚುಗೆಗೆ ಪಾತ್ರವಾಗುವ ನಿರೀಕ್ಷೆಯಿದೆ.

ಬಿಎಂಡಬ್ಲ್ಯು ಐ3 ಮೆಗಾಸಿಟಿ ವೆಹಿಕಲ್

ಬಿಎಂಡಬ್ಲ್ಯು ಐ3 ಮೆಗಾಸಿಟಿ ವೆಹಿಕಲ್

ಜರ್ಮನ್ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯುನ ಈ ಐ3 ಮೆಗಾಸಿಟಿ ವೆಹಿಕಲ್ ಎಲೆಕ್ಟ್ರಿಕ್ ಕಾರು ತುಂಬಾನೇ ಆಕರ್ಷಕವಾಗಿದೆ. ಇದು ಬಿಎಂಡಬ್ಲ್ಯುನಿಂದ ನೀರ್ಮಾಣವಾಗಿರುವ ಮೊದಲ ಎಲೆಕ್ಟ್ರಿಕ್ ಕಾರು ಆಗಿದ್ದು, ಮಿನಿ ದರ್ಜೆಯಲ್ಲಿ ತಯಾರಿಯಾಗಿದೆ. ಅಲ್ಲದೆ ಪರಿಸರ ಸ್ನೇಹಿ ಕಾರು ಕೂಡಾ ಆಗಿದೆ.

ಷೆವರ್ಲೆ ವೋಲ್ಟ್

ಷೆವರ್ಲೆ ವೋಲ್ಟ್

ಜಗತ್ತಿನ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾಗಿರುವ ಜನರಲ್ ಮೋಟಾರ್ಸ್, ತನ್ನ ಜನಪ್ರಿಯ ಬ್ರಾಂಡ್ ಷೆವರ್ಲೆ ಮುಖಾಂತರ ಅದ್ಭುತ ಎಲೆಕ್ಟ್ರಿಕ್ ಕಾರಿನ ಅವಿಷ್ಕಾರ ಮಾಡಿದೆ. ಷೆವರ್ಲೆ ವೋಲ್ಟ್ ಆಕರ್ಷಕ ಪ್ಲಗ್ ಇನ್ ಹೈಬ್ರಿಡ್ ಕಾರು ಆಗಿದ್ದು, ದರ ಸುಮಾರು 41,000 ಅಮೆರಿಕನ್ ಡಾಲರ್ ಆಗಿದೆ. ಅಂದರೆ 2,235,623 ಲಕ್ಷ ರುಪಾಯಿಗಳಾಗಿವೆ. ಷೆವರ್ಲೆ ವೋಲ್ಟ್ ಕಾರಿಗೆ ಭಾರಿ ಬೇಡಿಕೆಯಿದ್ದರೂ ಅದನ್ನು ಪೂರೈಸಲು ಕಂಪನಿಗೆ ಸಾಧ್ಯವಾಗದಿರುವುದು ಗ್ರಾಹಕರಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಫಿಸ್ಕರ್ ಕರ್ಮ

ಫಿಸ್ಕರ್ ಕರ್ಮ

ಅಮೆರಿಕ ವಾಹನ ತಯಾರಕ ಕಂಪನಿಯಾಗಿರುವ ಫಿಸ್ಕರ್ ಮಾರುಕಟ್ಟೆಗೆ ಅತ್ಯಾಕರ್ಷಕ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಪರಿಚಯ ಮಾಡಿಕೊಟ್ಟಿದೆ. ಈ ಬಹುನಿರೀಕ್ಷಿತ ಕಾರು ಆಕರ್ಷಕ ಲುಕ್ ಹಾಗೂ ಅತ್ಯುತ್ತಮ ಇಂಧನ ಕ್ಷಮತೆಯನ್ನು ಹೊಂದಿದೆ. ಅಮೆರಿಕ ಮಾರುಕಟ್ಟೆಯಲ್ಲಿ ಇದರ ಬೆಲೆ ಒಂದು ಲಕ್ಷ ಡಾಲರ್ ಆಗಿದೆ.

ಫೋರ್ಡ್ ಸಿ-ಮ್ಯಾಕ್ಸ್ ಎನರ್ಜಿ ಪ್ಲಗ್ ಇನ್ ಹೈಬ್ರಿಡ್

ಫೋರ್ಡ್ ಸಿ-ಮ್ಯಾಕ್ಸ್ ಎನರ್ಜಿ ಪ್ಲಗ್ ಇನ್ ಹೈಬ್ರಿಡ್

ಅಮೆರಿಕದ ಜನಪ್ರಿಯ ವಾಹನ ತಯಾರಕ ಕಂಪನಿ ಫೋರ್ಡ್ ಅದ್ಭುತ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ. ಈ ಕಾರಿನಲ್ಲಿ ಒಟ್ಟು ಐದು ಜನರಿಗೆ ಸಿಟ್ಟಿಂಗ್ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ಕಾರಿನಲ್ಲಿ 2.0 ಲೀಟರ್ ಇಂಧನ ಕ್ಷಮತೆಯ ಅಕ್ಟಿನ್ಸನ್ ಸೈಕಲ್ ಎಲ್-4 ಗ್ಯಾಸೋಲೈನ್ ಎಂಜಿನ್ (Atkinson-cycle I-4 gasoline engine) ಆಳಡವಿಡಸಲಾಗಿದೆ. ಅಲ್ಲದೆ ಇದರ ಎಲೆಕ್ಟ್ರಿಕ್ ಮೋಟಾರ್‌ನಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಬಳಸಲಾಗಿದೆ.

ನಿಸ್ಸಾನ್‌ನ ಲೀಫ್

ನಿಸ್ಸಾನ್‌ನ ಲೀಫ್

ಜಪಾನ್ ಕಾರು ತಯಾರಕ ಕಂಪನಿ ನಿಸ್ಸಾನ್ ಕಳೆದ ದೆಹಲಿ ಆಟೋ ಎಕ್ಸ್‌ಪೋ ವಾಹನ ಮೇಳದಲ್ಲಿ ಎಲೆಕ್ಟ್ರಿಕ್ ಲೀಫ್ ಕಾರನ್ನು ಪ್ರದರ್ಶನ ಮಾಡಿತ್ತಲ್ಲದೆ ಭಾರಿ ಜನಮನ್ನಣೆ ಗಿಟ್ಟಿಸಿಕೊಂಡಿತ್ತು. ನಿಸ್ಸಾನ್ ಕಂಪನಿಯು ಸದ್ಯದಲ್ಲೇ ಭಾರತದ ಮಾರುಕಟ್ಟೆಗೂ ಪರಿಚಯಿಸುವ ಇರಾದೆಯನ್ನು ಹೊಂದಿದೆ. ಪ್ರಸ್ತುತ ಅಮೆರಿಕದಲ್ಲಿ ಈ ಕಾರಿನ ಬೆಲೆ 38 ಸಾವಿರ ಅಮೆರಿಕನ್ ಡಾಲರ್‌ಗಳಾಗಿವೆ.

ಪೋರ್ಷೆ 918 ಸ್ಪೈಡರ್

ಪೋರ್ಷೆ 918 ಸ್ಪೈಡರ್

ಪೋರ್ಷೆಯ ಈ 918 ಸ್ಪೈಡರ್ ಎಲೆಕ್ಟ್ರಿಕ್ ಕಾರು ಮತ್ತೊಂದು ಅದ್ಭುತ ಅನಾವರಣವಾಗಿದೆ. ಪೋರ್ಷೆ ಅತ್ಯುತ್ತಮ ಗುಣಮಟ್ಟದ ಈ ಕಾರು ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಕಾರಿನ ದರ ಸುಮಾರು 845,000 ಅಮೆರಿಕನ್ ಡಾಲರ್ ಆಗಿದೆ.

ಟೆಸ್ಲಾ ಮಾಡೆಲ್ ಎಸ್

ಟೆಸ್ಲಾ ಮಾಡೆಲ್ ಎಸ್

ಅಮೆರಿಕ ವಾಹನ ತಯಾರಕ ಕಂಪನಿ ಟೆಸ್ಲಾ ಎಸ್ ಕಾರು ಆಕರ್ಷಕ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಆಗಿದೆ. ಚಿತ್ರದಲ್ಲಿ ತೋರಿಸಿರುವಂತೆಯೇ ಈ ಸಿಡಾನ್ ಮಾಡೆಲ್ ಜತೆಗೆ ಟೆಸ್ಲಾ ಎಕ್ಸ್ ಕ್ರಾಸೋವರ್ ವೆರಿಯಂಟ್‌ಗಳಲ್ಲೂ ಲಭ್ಯವಿದೆ. ಅಮೆರಿಕ ಮಾರುಕಟ್ಟೆಯಲ್ಲಿ ಇದರ ದರ ಸರಿ ಸುಮಾರು 49,990 ಡಾಲರ್ ಆಗಿದೆ.

ಟೊಯೊಟಾ ಪ್ರಿಯಸ್ ಪ್ಲಗ್ ಇನ್ ಹೈಬ್ರಿಡ್

ಟೊಯೊಟಾ ಪ್ರಿಯಸ್ ಪ್ಲಗ್ ಇನ್ ಹೈಬ್ರಿಡ್

ಜಪಾನ್ ಕಾರು ತಯಾರಕ ಕಂಪನಿ ಟೊಯೊಟಾದ ಅದ್ಭುತ ಎಲೆಕ್ಟ್ರಿಕ್ ಕಾರು ಆಗಿದೆ. ಈ ಕಾರಿನ ಜಗತ್ತಿನೆಲ್ಲಡೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಭಾರತ ಮಾರುಕಟ್ಟೆಯಲ್ಲೂ ಈ ಕಾರಿ ದರ 28 ಲಕ್ಷ ರುಪಾಯಿಗಳಾಗಿವೆ. ಈ ಕಾರನ್ನು ನೀವು ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ಆವೃತ್ತಿಯಲ್ಲೂ ಚಲಾಯಿಸಬಹುದಾಗಿದೆ.

ಟೊಯೊಟಾ ಐ-ಕ್ಯೂ ಸಿಟಿ ಎಲೆಕ್ಟ್ರಿಕ್

ಟೊಯೊಟಾ ಐ-ಕ್ಯೂ ಸಿಟಿ ಎಲೆಕ್ಟ್ರಿಕ್

ಟೊಯೊಟಾ ಹಾಗೂ ಹೊಂಡಾ ಕಂಪನಿಯ ಜಂಟಿ ನೀರ್ಮಾಣವಾಗಿರುವ ಈ ಎಲೆಕ್ಟ್ರಿಕ್ ಕಾರು ಉತ್ತಮ ಫೀಚರ್‌ಗಳನ್ನು ಒಳಗೊಂಡಿದೆ. ಮಾರುಕಟ್ಟೆಯಲ್ಲಿ ಹೊಂಡಾ ಫಿಟ್ ಎಂಬ ನಾಮಕರಣದೊಂದಿಗೆ ಹೊಂಡಾ ಮಾರಾಟ ಮಾಡುತ್ತಿವೆ. ಟೊಯೊಟಾದ ಈ ಕಾರು ಆದರ್ಶ ಕಾರು ಎಂದೇ ಲೋಕಪ್ರಿಯವಾಗಿದೆ.

ಟೊಯೊಟಾ ಆರ್‌ಎವಿ4 ಎಲೆಕ್ಟ್ರಿಕ್

ಟೊಯೊಟಾ ಆರ್‌ಎವಿ4 ಎಲೆಕ್ಟ್ರಿಕ್

ಈ ಕಾರಿನ ನೀರ್ಮಾಣವನ್ನು ಟೊಯೊಟಾ ಹಾಗೂ ಫೋರ್ಡ್ ಜಂಟಿಯಾಗಿ ಮಾಡಿವೆ. ಟೊಯೊಟಾ ಆರ್‌ಎವಿ4 ಒಂದು ಅದ್ಭುತ ಎಲೆಕ್ಟ್ರಿಕ್ ಕ್ರಾಸೋವರ್ ಕಾರು ಆಗಿದೆ.

Most Read Articles

Kannada
English summary
Electric cars are the new rage in the car industry. Several new car companies have started developing electric cars that have higher range, better speeds and performance. Have a look at the world's top 10 electric cars in this photo feature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X