2012 ನೂತನ ಕ್ಯಾಮ್ರಿ ಕಾರ್ ಪರಿಚಯಿದ ಟೊಯೊಟಾ ಕಿರ್ಲೊಸ್ಕರ್

ಬೆಂಗಳೂರು, ಆ 24: ಬಹುನಿರೀಕ್ಷಿತ ನೂತನ ಕ್ಯಾಮ್ರಿ ಅದ್ದೂರಿ ಸೆಡಾನ್ ಕಾರನ್ನು ಇಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ "ದ ತಾಜ್ ವೆಸ್ಟ್ ಎಂಡ್" ಲಗ್ಷುರಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಟೊಯೊಟಾ ಕಿರ್ಲೊಸ್ಕರ್ ಪರಿಚಯಿಸಿದೆ. ಇದರ ಬೆಂಗಳೂರು ಎಕ್ಸ್ ಶೋರೂಂ ದರ 23.80 ಲಕ್ಷ ರುಪಾಯಿ. ಈ ಕಾರಿನ ಮೈಲೇಜ್ ಪ್ರತಿಲೀಟರ್ ಪೆಟ್ರೋಲಿಗೆ 12.98 ಕಿ.ಮೀ.

ಮಾರುಕಟ್ಟೆಗೆ "2012 ನೂತನ ಕ್ಯಾಮ್ರಿ" ಬಿಡುಗಡೆ ಕಾರ್ಯಕ್ರಮದಲ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ವ್ಯವಸ್ಥಾಪಕ ನಿರ್ದೇಶಕರಾದ ಶೇಖರ್ ವಿಶ್ವನಾಥನ್, ಟಿಕೆಎಂ ಮಾರಾಟ ವಿಭಾಗದ ಉಪಾಧ್ಯಕ್ಷರಾದ ಶೈಲೇಶ್ ಶೆಟ್ಟಿ ಮತ್ತು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ನೊಡುಯಕಿ ಟಕೆಮುರಾ ಉಪಸ್ಥಿತರಿದ್ದರು.

ಹಳೆಯ ಕ್ಯಾಮ್ರಿಗೆ ಹೋಲಿಸಿದರೆ ನೂತನ ಕ್ಯಾಮ್ರಿ ಸಾಕಷ್ಟು ಪರಿಷ್ಕೃತವಾಗಿದೆ. ಇದಕ್ಕೆ ಹೊಸದಾಗಿ 16 ಕವಾಟದ ಡಿಒಎಚ್ಸಿ, 2,494ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6 ಸಾವಿರ ಆವರ್ತನಕ್ಕೆ 178 ಹಾರ್ಸ್ ಪವರ್ ಮತ್ತು 4,100 ಆವರ್ತನಕ್ಕೆ 233 ಟಾರ್ಕ್ ಪವರ್ ನೀಡುತ್ತದೆ.

ಕ್ರಾಮ್ರಿ ಕಾರಿನೊಳಗೆಯೂ ಸಾಕಷ್ಟು ಬದಲಾವಣೆಗಳು ಎದ್ದು ಕಾಣುತ್ತವೆ. ಇಂಟಿರಿಯರನ್ನು ಮರುರೂಪರಿಸಲಾಗಿದ್ದು, ಅದ್ದೂರಿ ಮತ್ತು ಅಂದ ಹೆಚ್ಚಾಗಿದೆ. ಹೊಸ ಕ್ರೋಮ್ ರೇಡಿಯೇಟರ್ ಗ್ರಿಲ್, ಆಟೋಮ್ಯಾಟಿಕ್ ಎಚ್ಐಡಿ ಹೆಡ್ ಲ್ಯಾಂಪ್, 10 ಸ್ಪೋಕ್, 16 ಇಂಚಿನ ಅಲಾಯವ್ ವೀಲ್, ಕ್ರೋಮ್ ಡೋರ್ ಹ್ಯಾಂಡಲ್, ಎಲೆಕ್ಟ್ರಿಕ್ ಹೊಂದಾಣಿಕೆ ಫೀಚರಿನ ಸೈಡ್ ಮಿರರ್(ಒಆರ್ ವಿಎಂ)ಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ.

ಹೊಸ ವಿನ್ಯಾಸದ ಮಿಣುಕು ದೀಪ(ಟೇಲ್ ಲೈಟ್), ಲ್ಯಾಂಪ್ ಇರುವ ಎಲ್ ಇಡಿ ಬ್ರೇಕ್ ಲೈಟ್ಸ್ ಆಕರ್ಷಕವಾಗಿವೆ. ಕಾರಿನ ಒಳಭಾಗದಲ್ಲಿ ಎಫ್ಎಂ/ಎಎಂ ಜೊತೆಗಿರುವ ಸ್ಪರ್ಷ ಸಂವೇದಿ(ಟಚ್ ಸ್ಕ್ರೀನ್) ಡಿಸ್ ಪ್ಲೇ ಆಡಿಯೊ, ನಿಸ್ತಂತು(ಬ್ಲೂಟೂಥ್) ಸಂಪರ್ಕ, ಇನ್ ಬಿಲ್ಟ್ ಮೈಕ್ ಮತ್ತು ಆಂಬ್ಲಿಫಿಯರ್, ಮೆತ್ತನೆಯ ಚರ್ಮದ ಹಾಸಿನ ಹೊದಿಕೆಯ ಟ್ರಿಮ್ಮಿಂಗ್ ಮುಂತಾದ ಪ್ರಮುಖ ಫೀಚರುಗಳು ಇಷ್ಟವಾಗುತ್ತವೆ.

ಹಿಂಭಾಗದ ಏರ್ ಕಂಡಿಷನ್ ವೆಂಟುಗಳು, ಮಳೆ ಗ್ರಹಿಸಿ ಕಾರ್ಯನಿರ್ವಹಿಸುವ ವೈಪರುಗಳು, ಡ್ಯೂಯಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿಗಳು ನೂತನ ಕ್ಯಾಮ್ರಿಯ ಆರಾಮದಾಯಕತೆಯನ್ನು ಹೆಚ್ಚಿಸಿವೆ.

Most Read Articles

Kannada
English summary
Toyota Kirloskar Motor Launched All New Camry Premium Sedan Car At The Taj West End, Race course Road, Bangalore on August 24. New Camry Bangalore Ex-showroom Price INR 23.80 lakh. 2012 All New Camry Live Updates. 2012 Camry Price, Features.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X