ಪೊಲೊ, ವೆಂಟೊ ನೆರವಿನಿಂದ ಫೋಕ್ಸ್‌ವ್ಯಾಗನ್ ಪ್ರಗತಿ

Volkswagen Records 3 Percent Sales Growth In March 2012
ಕಳೆದ ತಿಂಗಳು ಪೊಲೊ ಮತ್ತು ವೆಂಟೊ ಕಾರುಗಳ ನೆರವಿನಿಂದ ಫೋಕ್ಸ್‌ವ್ಯಾಗನ್ ಮಾರಾಟ ಗಮನಾರ್ಹ ಪ್ರಗತಿ ದಾಖಲಿಸಿದೆ. ಮಾರ್ಚ್ ತಿಂಗಳಲ್ಲಿ ಕಂಪನಿಯು 8,326 ಯುನಿಟ್ ವಾಹನ ಮಾರಾಟ ಮಾಡಿದ್ದು, 2011ರ ಮಾರ್ಚ್ ತಿಂಗಳ 8,095 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 3ರಷ್ಟು ಏರಿಕೆ ದಾಖಲಿಸಿದೆ.

ಕಂಪನಿಯ ಮಾರಾಟ ಹೆಚ್ಚಳಕ್ಕೆ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಪೊಲೊ ಮತ್ತು ಸೆಡಾನ್ ಕಾರು ವೆಂಟೊ ನೆರವು ಗಣನೀಯವಾಗಿದೆ. ಜರ್ಮನಿಯ ಕಾರು ತಯಾರಿಕಾ ಕಂಪನಿ ಇತ್ತೀಚೆಗೆ ಐಪಿಎಲ್-2 ಅಡಿಷನ್ ಪೊಲೊ ಮತ್ತು ವೆಂಟೊ ಆವೃತ್ತಿಗಳನ್ನು ಪರಿಚಯಿಸಿತ್ತು. ಹೊಸ ಆವೃತ್ತಿಗಳಿಗೂ ಹಳೆ ಆವೃತ್ತಿ ಪೊಲೊ ವೆಂಟೊ ಕಾರುಗಳಿಗೂ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

"ಫೋಕ್ಸ್‌ವ್ಯಾಗನ್ ಬ್ರಾಂಡ್‌ಗೆ ಮಾರ್ಚ್ ಅತ್ಯುತ್ತಮ ಮಾರಾಟ ಹೆಚ್ಚಳದ ತಿಂಗಳಾಗಿದೆ. ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿಯಿದ್ದರೂ ಪೊಲೊ ಮತ್ತು ವೆಂಟೊ ನೆರವಿನಿಂದ ನಾವು ಯಶ ಕಂಡಿದ್ದೇವೆ. ಮುಂದಿನ ದಿನಗಳಲ್ಲೂ ಪ್ರಗತಿ ಮುಂದುವರೆಸುವ ಅತುಲ ಭರವಸೆ ನಮಗಿದೆ" ಎಂದು ಫೋಕ್ಸ್‌ವ್ಯಾಗನ್ ಗ್ರೂಪಿನ ಪ್ರಯಾಣಿಕ ಕಾರುಗಳ ಮಾರಾಟ ವಿಭಾಗದ ಮುಖ್ಯಸ್ಥ ನೀರಜ್ ಗಾರ್ಗ್ ಹೇಳಿದ್ದಾರೆ.

ಫೋಕ್ಸ್‌ವ್ಯಾಗನ್ ಕಂಪನಿಯ ವೆಂಟೊ ಕಾರಿಗೆ ದೆಹಲಿ ಎಕ್ಸ್‌ಶೋರೂಂನಲ್ಲಿ ಸುಮಾರು 4.7 ಲಕ್ಷ ರುಪಾಯಿ ದರವಿದೆ. ಸೆಡಾನ್ ವೆಂಟೊ ಕಾರಿನ ದರ ಸುಮಾರು 7.1 ಲಕ್ಷ ರುಪಾಯಿ ಇದೆ. ಜೆಡಿ ಪವರ್ ಏಷ್ಯಾ ಪೆಸಿಫಿಕ್ ಇತ್ತೀಚೆಗೆ ಪೊಲೊ ಕಾರಿಗೆ ಬೆಸ್ಟ್ ಕಾಂಪ್ಯಾಕ್ಟ್ ಕಾರೆಂಬ ಪ್ರಶಸ್ತಿ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
Volkswagen India has recorded 3 per cent growth in its March sales. The carmaker sold 8,326 units in March 2012 against 8,095 units last year.
Story first published: Wednesday, April 4, 2012, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X