ಲಗ್ಷುರಿ ಸೆಗ್ಮೆಂಟ್‌; ಬಿಎಂಡಬ್ಲ್ಯು ಹಿಂದಿಕ್ಕಿತೇ ಆಡಿ?

By Nagaraja

ದೇಶದ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವನ್ನು ಕಾಯ್ದುಕೊಂಡಿರುವ ಆಡಿ, ಲಗ್ಷುರಿ ಕಾರು ಸೆಗ್ಮೆಂಟ್‌ನಲ್ಲಿ ನಂ.1 ಎನಿಸಿಕೊಂಡಿದೆ. ಈ ಮೂಲಕ ಕಳೆದ ಮೂರು ವರ್ಷಗಳಲ್ಲಿ ಅಗ್ರಸ್ಥಾನ ಆಲಂಕರಿಸಿಕೊಂಡಿದೆ.

ಮರ್ಸಿಡಿಸ್ ಬೆಂಝ್‌ ಸೇರಿದಂತೆ ಐಷಾರಾಮಿ ಕಾರುಗಳನ್ನು ಹಿಂದಿಕ್ಕಿದ ಆಡಿ ದೇಶದ ಶ್ರೀಮಂತ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯತೆಗೆ ಕಾರಣವಾಗಿದೆ. ಮತ್ತೊಂದೆಡೆ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಫೇವರಿಟ್ ಎನಿಸಿಕೊಂಡಿರುವ ಬಿಎಂಡಬ್ಲ್ಯು ತನ್ನ ಮಾರಾಟ ಅಂಕಿಅಂಶವನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ.

ತನ್ನ ಫೇಸ್‌ಬುಕ್ ಫ್ಯಾನ್ ಪೇಜ್‌ನಲ್ಲಿ ಈ ಬಗ್ಗೆ ಬರೆದಿಕೊಂಡಿರುವ ಆಡಿ ಇಂಡಿಯಾ ಅಭಿಮಾನಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದ್ದು, ಹೊಸ ವರ್ಷದ ಶುಭ ಹಾರೈಸಿದೆ.

2012ನೇ ಸಾಲಿನಲ್ಲಿ 7,138 ಕಾರುಗಳನ್ನು ಮಾರಾಟ ಮಾಡಿರುವುದಾಗಿ ಮರ್ಸಿಡಿಸ್ ಬೆಂಝ್ ಹೇಳಿಕೊಂಡಿತ್ತು. ಮತ್ತೊಂದೆಡೆ ಜನವರಿಯಿಂದ ಅಕ್ಟೋಬರ್ ಅವಧಿಯಲ್ಲಿ ಬಿಎಂಡಬ್ಲ್ಯು 7389 ಕಾರುಗಳನ್ನು ಮಾರಾಟ ಮಾಡಿವೆ. ಆದರೆ ಕೇವಲ ಒಂಬತ್ತು ತಿಂಗಳುಗಳಾಗುವ ವೇಳೆಯಲ್ಲಿ ಮಾರಾಟದಲ್ಲಿ ಆಡಿ 122 ಯುನಿಟ್‌ಗಳಷ್ಟು ಮಾತ್ರ ಹಿಂದಿತ್ತು. ಆಡಿ ಕೂಡಾ ಈ ಸಾಲಿನಲ್ಲಿ ಮಾರಾಟವಾದ ಒಟ್ಟು ಕಾರುಗಳ ಸಂಖ್ಯೆಯನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ.

ಆಡಿ ಮಾರಾಟವು ಗಣನೀಯ ವರ್ಧಿಸಿರುತ್ತವಂತೆಯೇ ದೇಶದ ಲಗ್ಷುರಿ ಸೆಗ್ಮೆಂಟ್‌ನಲ್ಲಿ ಮೂರು ಜರ್ಮನಿಯ ಕಾರು ತಯಾರಕ ಕಂಪನಿಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಮರ್ಸಿಡಿಸ್ ಬೆಂಝ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ ಆಡಿ ಹಾಗೂ ಬಿಎಂಡಬ್ಲ್ಯು ನಡುವೆ ಪ್ರಥಮ ಸ್ಥಾನಕ್ಕಾಗಿ ನಿಕಟ ಸ್ಪರ್ಧೆ ಏರ್ಪಟ್ಟಿತ್ತು.

Most Read Articles

Kannada
English summary
Audi India has thanked its fans and customers in a Facebook update for making it No.1 luxury car brand in India. The German premium carmaker which has been eyeing for the top spot since the past three years after overtaking Mercedes-Benz
Story first published: Friday, January 4, 2013, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X