ಆರ್‌ಸಿಬಿ-ಡೆಲ್ಲಿ ಗೇಮ್ ಮುನ್ನ ಟ್ರಾಫಿಕ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿರಿ

By Nagaraja

ಪೊಲೀಸ್ ಇಲಾಖೆ-ಪತ್ರಿಕಾ ಪ್ರಕಟಣೆ:
ಬೆಂಗಳೂರು ನಗರದ ಶ್ರೀ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದಿನಾಂಕ 16/04/2013 ರಂದು ಐಪಿಎಲ್ 20-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಈ ಕ್ರಿಕೆಟ್ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ವಾಹನಗಳಲ್ಲಿ ಬರವುದರಿಂದ ಈ ಕೆಳಕಂಡಂತೆ ಸಂಚಾರ ನಿರ್ಬಂಧನೆ ಮಾಡಲಾಗಿರುತ್ತದೆ.

ಈ ಕೆಳಕಂಡ ರಸ್ತೆಗಳಲ್ಲಿ ಬೆಳಗ್ಗೆ 11-00 ಗಂಟೆಯಿಂದ ರಾತ್ರಿ 10-30 ಗಂಟೆಯ ವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
1. ಕ್ವೀನ್ಸ್ ರಸ್ತೆಯಲ್ಲಿ ಸಿ.ಟಿ.ಓ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
2. ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
3. ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆಯ ವರೆಗೆ.

Bangalore IPL Match Traffic Arrangements

4. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ.
5. ಕ್ರಿಕೆಟ್ ಮೈದಾನದ ಕಾಂಪೈಂಡಿಗೆ ಹೊಂದಿಕೊಂಡಂತೆ ರಸ್ತೆಯ ಎರಡೂ ಕಡೆ.
6. ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ.
7. ಕಬ್ಬನ್ ರಸ್ತೆಯಲ್ಲಿ- ಬಿ.ಆರ್. ವಿ ವೃತ್ತದಿಂದ ಡಿಕೆನ್ಸ್‌ನ್ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ. ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕೆನ್ಸ್‌ನ್ ರಸ್ತೆ ಜಂಕ್ಷನ್ ವರೆಗೆ ಬಿ.ಎಂ.ಟಿಸಿ. ಬಸ್‌ಗಳನ್ನು ಹೊರತುಪಡಿಸಿ ಇತರೆ ಎಲ್ಲ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
8. ಮದ್ರಾಸ್ ಬ್ಯಾಂಕ್ ರಸ್ತೆಯಲ್ಲಿ ಎಸ್.‌ಬಿ.ಐ ವೃತ್ತದಿಂದ ಆಶೀರ್ವಾದಂ ವೃತ್ತದ ವರೆಗೆ.
9. ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಮದ್ರಾಸ್ ಬ್ಯಾಂಕ್ ರಸ್ತೆ ವರೆಗೆ ಹಾಗೂ ರೆಸಿಡೆನ್ಸಿ ರಸ್ತೆ ವರೆಗೆ.
10. ಕಸ್ತೂರಬಾ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಹಾಗೂ ಗ್ರ್ಯಾಂಡ್ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ವೃತ್ತದ ವರೆಗೆ.
11. ಕಬ್ಬನ್ ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಪೌಂಟೇನ್ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.
12. ಕ್ವೀನ್ಸ್‌ವೃತ್ತದಿಂದ ಲ್ಯಾವೆಲ್ಲಿ ರಸ್ತೆಯಲ್ಲಿ ಗ್ರಾಂಟ್ ಜಂಕ್ಷನ್‌‌ವರೆಗೆ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.
13. ಸಿದ್ದಲಿಂಗಯ್ಯ ವೃತ್ತದಿಂದ ವಿಠಲ್ ಮಲ್ಯ ರಸ್ತೆಯಲ್ಲಿ ಬಿಷಪ್ ಕಾಟನ್ ಬಾಲಕಿಯ ಶಾಲೆಯವರೆಗೆ ರಸ್ತೆಗಳಲ್ಲಿ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಈ ಕೆಳಕಂಡ ರಸ್ತೆಗಳಲ್ಲಿ ರಸ್ತೆಗಳಲ್ಲಿ ಬೆಳಗ್ಗೆ 11-00 ಗಂಟೆಯಿಂದ ರಾತ್ರಿ 10-30 ಗಂಟೆಯ ವರೆಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ.
1. ಸದಸ್ಯರು ಹಾಗೂ ಪಂದ್ಯ ವೀಕ್ಷಣೆ ಮಾಡಲು ಬರುವವರು ತಮ್ಮ ವಾಹನಗಳನ್ನು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
2. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
3. ಬಿ.ಆರ್.ವಿ. ಮೈದಾನದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಹಾಗೂ ಎಂ.ಜಿ ರಸ್ತೆ ಸಿಟಿಒ ವೃತ್ತದ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ತಪ್ಪಿಸಲು ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರೇಕ್ಷಕರು ಸಾರ್ವಜನಿಕ ಸಾರಿಗೆ (ಬಿಎಂಟಿಸಿ) ವಾಹನಗಳನ್ನು ಬಳಸಲು ಕೋರಿದೆ. ಪಂದ್ಯ ಮುಗಿದ ನಂತರ ಬಿಎಂಟಿಸಿ ವತಿಯಿಂದ ನಗರದ ಎಲ್ಲಾ ಭಾಗಗಳಿಗೂ ಬಿಗ್-10 ಬಸ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ವಾಹನಗಳನ್ನು ಕಬ್ಬನ್ ಪಾರ್ಕ್ ಒಳಭಾಗದ ಕೆಜಿಐಡಿ ಬಿಲ್ಡಿಂಗ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಒಳ ಮತ್ತು ಹೊರ ಹೋಗಲು ಪ್ರೇಕ್ಷಕರುಗಳಿಗೆ (ಪಾದಚಾರಿಗಳಿಗೆ) ಅನುವು ಮಾಡಿರುವ ಬಗ್ಗೆ:
1. ಗೇಟ್ ನಂ-1ರಿಂದ ಗೇಟ್ ನಂ-8 ಕ್ವೀನ್ಸ್ ರಸ್ತೆಯಲ್ಲಿ ಪಾದಚಾರಿಗಳಿಗೆ/ವೀಕ್ಷಕರುಗಳಿಗೆ ಹೋಗಲು ಅವಕಾಶ ಕಲ್ಪಿಸಿದೆ.
2. ಗೇಟ್ ನಂ.17 ಮತ್ತು ಗೇಟ್ ನಂ.20ರ ವರೆಗೆ ಲಿಂಕ್ ರಸ್ತೆಯಲ್ಲಿದ್ದು ಅನಿಲ್ ಕುಂಬ್ಳೆ ವೃತ್ತದಿಂದ ಬರುವ ಪ್ರೇಕ್ಷಕರುಗಳಿಗಳು/ಪಾದಚಾರಿಗಳೂ ಹೋಗಬಹುದಾಗಿರುತ್ತದೆ.

ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

Most Read Articles

Kannada
English summary
Below are the details of the traffic arrangements made for the IPL 20-20 Cricket Match on 16-04-2013 at Sri Chinnaswamy Cricket Stadium
Story first published: Monday, April 15, 2013, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X