ರಾಜಕಾರಣಿಗಳ ಹೈಟೆಕ್ ಪ್ರಚಾರಕ್ಕೆ ಹೆಲಿಕಾಪ್ಟರ್ 'ಖದರ್'

ಕರ್ನಾಟಕ ವಿಧಾನಸಭಾ ಚುನಾವಣಾ ಹತ್ತಿರವಾಗಿರುವಂತೆಯೇ ಪ್ರಮುಖ ಪಕ್ಷಗಳು ಮತ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡುತ್ತಿವೆ. ಆದರೆ ಚುನಾವಣಾ ಪ್ರಚಾರಕ್ಕಾಗಿ ಲೋಹದ ಹಕ್ಕಿ ಬಳಸಬೇಕಾದರೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕಾಗಿರುವುದು ಕಡ್ಡಾಯವಾಗಿದೆ.

ಆಡಳಿತಾರೂಢ ಬಿಜೆಪಿ ಹಾಗೂ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮತ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಬಳಕೆ ಮಾಡುತ್ತಿದೆ. ಇನ್ನು ಇತ್ತೀಚೆಗಷ್ಟೇ ರಚನೆಗೊಂಡಿದ್ದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಕೆಜಿಪಿ ಹಾಗೂ ಶ್ರೀರಾಮುಲು ಅವರ ಬಿಎಸ್‌ಆರ್ ಪಕ್ಷಗಳು ಸಹ ಹೆಲಿಕಾಪ್ಟರ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿವೆ ಎಂಬ ಮಾಹಿತಿಯಿದೆ.

ವೈಯಕ್ತಿಕವಾಗಿ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಬಳಕೆ ಮಾಡುತ್ತಿದ್ದಾರೆ. ಹಾಗಾಗಿ ಇದು ಅಭ್ಯರ್ಥಿಗೆ ನಿಗದಿಪಡಿಸಲಾದ ವೆಚ್ಚಕ್ಕೆ ಸೇರಿಸಲಾಗುತ್ತದೆ. ಈ ಬಗ್ಗೆ ಪ್ರಚಾರ ಮಾಡುವ ದಿನ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣ ವರದಿ ಚುನಾವಣಾ ಆಯೋಗಕ್ಕೆ ನೀಡಬೇಕಾಗುತ್ತದೆ.

ಮೇ 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿರುವುದರಿಂದ ಲೋಹದ ಹಕ್ಕಿಗೆ ಭಾರಿ ಡಿಮ್ಯಾಂಡ್ ವ್ಯಕ್ತವಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಪ್ರತಿ ಗಂಟೆಗೆ 1ರಿಂದ 1.5 ಲಕ್ಷ ರು.ಗಳ ವರೆಗೂ ಬಾಡಿಗೆ ವಸೂಲಿ ಮಾಡಲಾಗುತ್ತಿದೆ.

ಪ್ರತಿಯೊಂದು ತಾಸು ಅಭ್ಯರ್ಥಿಗಳ ಪಾಲಿಗೆ ನಿರ್ಣಾಯಕವೆನಿಸಲಿದ್ದು, ಇದರಂತೆ ಕಂಪನಿಗಳು ವಿವಿಧ ರೀತಿಯ ಪ್ಯಾಕೇಜ್‌ಗಳನ್ನು ಮುಂದಿರಿಸುತ್ತಿವೆ. ಇವುಗಳಲ್ಲಿ ಡೆಕ್ಕನ್ ಚಾರ್ಟರ್, ಏವಿಯೇಟರ್ ಇಂಡಿಯಾ ಲಿಮಿಟೆಡ್ ಪ್ರಮುಖವಾಗಿದೆ.

ಇನ್ನು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳುವ ಸಂದರ್ಭದಲ್ಲಿ ರಾಜಕಾರಣಿಗಳ 'ಖದರ್' ತೋರಿಸಲು ಪುಷ್ಪವೃಷ್ಟಿ ಮಾಡಲಾಗುತ್ತಿದೆ. ಅಷ್ಟಕ್ಕೂ ಕೋಟಿ ಕೋಟಿ ರುಪಾಯಿ ಖರ್ಚು ಮಾಡಿ ಹೈಟೆಕ್ ಪ್ರಚಾರದ ಅಗತ್ಯವಾದರೂ ಏನಿದೆ ಎಂಬುದಕ್ಕೆ ರಾಜಕೀಯ ಪಕ್ಷಗಳೇ ಉತ್ತರಿಸಬೇಕಿದೆ..?

Most Read Articles

Kannada
English summary
Karnataka Political parties and leaders spending crores for upcoming assembly election. According to sources party candidates using Helicopters for flying campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X