ಹೋಂಡಾ ಸಿಟಿ ಕಾಯುವಿಕೆ ಅವಧಿ ಕಡಿತಗೊಳಿಸಲು ಯೋಜನೆ

By Nagaraja

ಬಹುನಿರೀಕ್ಷಿತ ಹೋಂಡಾ ಸಿಟಿ ಸೆಡಾನ್ ಕಾರು ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವಂತೆಯೇ ಈ ನಿರ್ದಿಷ್ಟ ಕಾರಿನ ಕಾಯುವಿಕೆ ಅವಧಿ ಬಗ್ಗೆ ಎದ್ದಿರುವ ಆತಂಕಗಳು ಇನ್ನೂ ಕೊನೆಗೊಂಡಿಲ್ಲ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಇದಕ್ಕೆಲ್ಲ ಕಾರಣ ಇದಕ್ಕೂ ಮೊದಲು ಬಿಡುಗಡೆಗೊಂಡಿದ್ದ ಹೋಂಡಾ ಅಮೇಜ್ ಕಾಯುವಿಕೆ ಅವಧಿ. ಅತಿ ಹೆಚ್ಚು ವೇಟಿಂಗ್ ಪಿರೇಡ್ ಹೊಂದಿದ್ದ ಹೋಂಡಾ ಅಮೇಜ್‌ ಗ್ರಾಹಕರನ್ನು ಸತಾಯಿಸಲು ಕಾರಣವಾಗಿತ್ತು.

New Honda City

ಇನ್ನೊಂದೆಡೆ ಈಗಷ್ಟೇ ಅನಾವರಣಗೊಂಡಿರುವ ಹೋಂಡಾ ಸಿಟಿ ಕಾರಿಗೂ ಭಾರಿ ಬೇಡಿಕೆ ಕಂಡುಬರಲಿರುವುದು ಬಹುತೇಕ ಖಚಿತವಾಗಿದೆ. ಹಾಗಿರುವಾಗ ಕಾಯುವಿಕೆ ಅವಧಿ ಬಗ್ಗೆ ಗ್ರಾಹಕರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಸದ್ಯ ಬಂದಿರುವ ಮಾಹಿತಿ ಪ್ರಕಾರ ನಾಲ್ಕನೇ ತಲೆಮಾರಿನ ಸಿಟಿ ಕಾಯುವಿಕೆ ಅವಧಿ ಕಡಿತಗೊಳಿಸುವತ್ತ ಯೋಜನೆ ಹಾಕಿಕೊಂಡಿರುವ ಹೋಂಡಾ, ನೋಯ್ಡಾದ ಈ ಘಟಕದಲ್ಲಿ ಮೂರನೇ ಶಿಫ್ಟ್‌ಗೂ ಕೆಲಸ ವರ್ಗಾಯಿಸಲು ನಿರ್ಧರಿಸಿದೆ.

ಹೋಂಡಾದ ನೂತನ ಎಚ್ ಡಿಸೈನ್ ಕಾನ್ಸೆಪ್ಟ್ ತಲಹದಿಯಲ್ಲಿ ನೂತನ ಸಿಟಿ ಕಾರನ್ನು ತಯಾರಿಸಲಾಗಿದೆ. ಇದು 1.5 ಲೀಟರ್ 4 ಸಿಲಿಂಡರ್ ಡಿಒಎಚ್‌ಸಿ ಡೀಸೆಲ್ ಹಾಗೂ 1.5 ಲೀಟರ್ 4 ಸಿಲಿಂಡರ್ ಎಸ್‌ಒಎಚ್‌ಸ್ ಐ-ವಿಟೆಕ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

Most Read Articles

Kannada
Story first published: Wednesday, November 27, 2013, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X