ಹ್ಯುಂಡೈ ಸ್ಯಾಂಟ್ರೊಗೆ ಬದಲಿಯಾಗಿ ಕಿಯಾ ರೇ ಸಣ್ಣ ಕಾರು

By Nagaraja

ದೇಶದ ವಾಹನೋದ್ಯಮದ ಪಾಲಿಗೆ ಐಕಾನಿಕ್ ಕಾರೆನಿಸಿಕೊಂಡಿರುವ ಹ್ಯುಂಡೈ ಸ್ಯಾಂಟ್ರೋ ಇದೀಗ ಔಟ್ ಡೇಟಡ್ ಮಾಡೆಲ್ ಎನಿಸಿಕೊಳ್ಳುತ್ತಿದೆ. ಇದನ್ನು ಚೆನ್ನಾಗಿ ಅರಿತುಕೊಂಡಿರುವ ದಕ್ಷಿಣ ಕೊರಿಯಾ ಮೂಲದ ಈ ವಾಹನ ತಯಾರಕ ಸಂಸ್ಥೆಯು ಸ್ಯಾಂಟ್ರೋ ಸ್ಥಾನದಲ್ಲಿ ಹೊಸತೊಂದು ಕಾರನ್ನು ಲಾಂಚ್ ಮಾಡುವ ಇರಾದೆ ಹೊಂದಿದೆ.

ಹ್ಯುಂಡೈ ಪಾಲಿಗೆ ದೇಶದಲ್ಲಿ ಸರ್ವಕಾಲಿಕ ಶ್ರೇಷ್ಠ ಕಾರೆನಿಸಿಕೊಂಡಿರುವ ಸ್ಯಾಂಟ್ರೋಗೆ ಬದಲಿ ಕಾರು ಹುಡುಕುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇದು ಭಾರತದ ರಸ್ತೆ ಪರಿಸ್ಥಿತಿಯಲ್ಲಿ ಎಷ್ಟೊಂದು ಯಶ ಸಾಧಿಸಲಿದೆ ಎಂಬುದನ್ನು ತುಲನೆ ಮಾಡುವುದು ಕಷ್ಟ.

Hyundai Santro

ಹಾಗಿದ್ದರೂ ಸ್ಯಾಂಟ್ರೋ ಬದಲಿಯಾಗಿ ಹೊಸತೊಂದು ಕಾರನ್ನು ಸಿದ್ಧಪಡಿಸಲು ಹ್ಯುಂಡೈ ಸಜ್ಜಾಗಿ ನಿಂತಿದೆ. ಹೌದು, ನೋಡಲು ಮಾರುತಿ ವ್ಯಾಗನಾರ್ ಶೈಲಿಯನ್ನು ಹೊಂದಿರುವ ಸಣ್ಣ ಹ್ಯಾಚ್‌ಬ್ಯಾಕ್ ಕಾರಾಗಿರುವ ಕಿಯಾ ರೇ ಮಾದರಿಯನ್ನು ಹ್ಯುಂಡೈ ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.

ನಿಮ್ಮ ಮಾಹಿತಿಗಾಗಿ, ದಕ್ಷಿಣ ಕೊರಿಯಾದ ಕಾರು ಬ್ರಾಂಡ್ ಆಗಿರುವ ಕಿಯಾ ಮಾಲಿಕತ್ವನ್ನು ಹ್ಯುಂಡೈ ಹೊಂದಿದೆ. ಹಾಗಿದ್ದರೂ ಕಿಯಾ ವಿಭಿನ್ನ ಇರುವನ್ನು ಹೊಂದಿದ್ದು, ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆ.

ಪ್ರಸ್ತುತ 998ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಕಿಯಾ ರೇ, 105 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ದೇಶದಲ್ಲಿ ಹ್ಯುಂಡೈ ಗುರುತನ್ನು ಪಡೆದುಕೊಳ್ಳಲಿದೆ.

Most Read Articles

Kannada
English summary
According to sources, Santro's place will be the Kia Ray, a boxy hatchback, with a tall boy design that's not sold anywhere outside South Korea.
Story first published: Saturday, December 28, 2013, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X