ವೋಲ್ವೋದಲ್ಲಿ ತುರ್ತಾಗಿ ತುರ್ತು ನಿರ್ಗಮನ ಆಳವಡಿಸುವಂತೆ ಆದೇಶ

ಸಾಮತ್ಯೆ ಪಡೆದುಕೊಂಡಿರುವ ಎರಡು ವಿಭಿನ್ನ ವೋಲ್ವೋ ಬಸ್ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರವು, ಸ್ವೀಡನ್‌ನ ಈ ದೈತ್ಯ ಬಸ್ ತಯಾರಕ ಸಂಸ್ಥೆಯ ಎಲ್ಲ ಬಸ್ಸುಗಳಿಗೂ ತುರ್ತಾಗಿ ತುರ್ತು ನಿರ್ಗಮನ ಬಾಗಿಲು ಆಳವಡಿಸುವಂತೆ ಆದೇಶ ಹೊರಡಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಾಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಮುಂದಿನ ಮೂರು ತಿಂಗಳೊಳಗೆ ಎಮರ್ಜನ್ಸಿ ಎಕ್ಸಿಟ್ ವೋಲ್ವೋ ಬಸ್ಸುಗಳಲ್ಲಿ ಆಳವಡಿಸುವಂತೆ ಆದೇಶಿಸಲಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಹೈದರಾಬಾದ್‌ನ ಮೆಹಬೂಬ್‌ನಗರ ಹಾಗೂ ಹಾವೇರಿಯಲ್ಲಿ ನಡೆದ ಎರಡು ವಿಭಿನ್ನ ಬಸ್ ದುರಂತ ಪ್ರಕರಣದಲ್ಲಿ 52 ಮಂದಿ ಸಾವಿಗೀಡಾಗಿದ್ದರು.

ಈ ಎರಡೂ ಘಟನೆಗಳಲ್ಲೂ ಡೀಸೆಲ್ ಟ್ಯಾಂಕ್ ಸ್ಫೋಟಿಸಿದ ಪರಿಣಾಮ ಬಸ್ ಬೆಂಕಿಗಾಹುತಿಯಾಗಿತ್ತು. ಅಮಿತ ವೇಗದಲ್ಲಿ ಸಂಚರಿಸುತ್ತಿದ್ದ ವೋಲ್ವೋ ಬಸ್ ಡಿವೈಡರ್‌‌ಗೆ ಢಿಕ್ಕಿ ಹೊಡೆದ ರಭಸಕ್ಕೆ ಡೀಸೆಲ್ ಟ್ಯಾಂಕ್ ಸ್ಫೋಟಿಸರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು.
ಇವನ್ನೂ ಓದಿ: ವೋಲ್ವೋ ಇಂಧನ ಟ್ಯಾಂಕ್ ಸ್ಫೋಟಗೊಳ್ಳಲು ಸಾಧ್ಯವಿಲ್ಲ?
ಬಸ್ಸಿನಲ್ಲಿ ಪಯಣಿಸುವಾಗ ಅನುಸರಿಬೇಕಾದ ಸುರಕ್ಷಾ ಕ್ರಮಗಳು
ವೋಲ್ವೋ ಬಸ್ ನಿರ್ವಾಹಕರಿಂದ ಭದ್ರತಾ ಲೋಪ..?

ವೋಲ್ವೋದಲ್ಲಿ ತುರ್ತಾಗಿ ತುರ್ತು ನಿರ್ಗಮನ ಆಳವಡಿಸುವಂತೆ ಆದೇಶ

ನಿಮ್ಮ ಮಾಹಿತಿಗಾಗಿ, ವೋಲ್ವೋ ಪಾಲಿಗೆ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿದೆ. ಇದೀಗ ಈ ಸ್ವೀಡನ್ ಸಂಸ್ಥೆ ವಿರುದ್ಧ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಸರಕಾರ ಮುಂದಾಗುತ್ತಿದೆ.

ವೋಲ್ವೋದಲ್ಲಿ ತುರ್ತಾಗಿ ತುರ್ತು ನಿರ್ಗಮನ ಆಳವಡಿಸುವಂತೆ ಆದೇಶ

ಅಷ್ಟೇ ಅಲ್ಲದೆ ಕಡ್ಡಾಯವಾಗಿ ತುರ್ತು ನಿರ್ಗಮನ ಬಾಗಿಲುಗಳನ್ನು ಲಗತ್ತಿಸದಿದ್ದಲ್ಲಿ ಮುಂದಕ್ಕೆ ವೋಲ್ವೋ ಬಸ್ಸುಗಳನ್ನು ಖರೀದಿಸದಿರಲು ಕರ್ನಾಟಕ ಸರಕಾರ ನಿರ್ಧರಿಸಿದೆ. ಹಾಗೆಯೇ ಸರಿಯಾದ ಎತ್ತರದಲ್ಲಿ ಎಮರ್ಜನ್ಸಿ ಬಾಗಿಲು ಲಗತ್ತಿಸುವಂತೆ ಸಲಹೆ ಮಾಡಲಾಗಿದೆ.

ವೋಲ್ವೋದಲ್ಲಿ ತುರ್ತಾಗಿ ತುರ್ತು ನಿರ್ಗಮನ ಆಳವಡಿಸುವಂತೆ ಆದೇಶ

ದೇಶದಲ್ಲಿರುವ ಒಟ್ಟು 5000 ವೋಲ್ವೋ ಬಸ್ಸುಗಳ ಪೈಕಿ ಅತಿ ಹೆಚ್ಚು ಮಾರುಕಟ್ಟೆಯನ್ನು ಹೊಂದಿರುವ ಕರ್ನಾಟಕದಲ್ಲಿ ಮಾತ್ರವಾಗಿ 1,000ದಷ್ಟು ಬಸ್ಸುಗಳು ದಿನನಿತ್ಯ ಓಡಾಡುತ್ತಿರುತ್ತವೆ. ಈ ಪೈಕಿ ಕರ್ನಾಟಕ ರಾಜ್ಯ ರಸ್ತೆ ನಿಗಮವು ಅತಿ ಹೆಚ್ಚು ವೋಲ್ವೋ ಬಸ್ಸುಗಳನ್ನು ಹೊಂದಿದೆ.

ವೋಲ್ವೋದಲ್ಲಿ ತುರ್ತಾಗಿ ತುರ್ತು ನಿರ್ಗಮನ ಆಳವಡಿಸುವಂತೆ ಆದೇಶ

ಪ್ರಸ್ತುತ ವೋಲ್ವೋ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಸ್ವತ: ಸ್ವೀಡನ್ ಕಂಪನಿ ಕೂಡಾ ತನಿಖೆ ಹಮ್ಮಿಕೊಂಡಿದೆ. ವೋಲ್ವೋ ಬಸ್ ಅಪಘಾತದ ಕುರಿತು ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ವೋಲ್ವೋ ಇಂಡಿಯಾ ವಕ್ತಾರ ತಿಳಿಸಿದ್ದಾರೆ.

ವೋಲ್ವೋದಲ್ಲಿ ತುರ್ತಾಗಿ ತುರ್ತು ನಿರ್ಗಮನ ಆಳವಡಿಸುವಂತೆ ಆದೇಶ

ಈ ಎಲ್ಲ ವಿಚಾರಗಳು ವೋಲ್ವೋಗೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಇನ್ನೊಂದೆಡೆ ಮರ್ಸಿಡಿಸ್ ಬೆಂಝ್ ಮತ್ತು ಸ್ಕಾನಿಯಾದಂತಹ ಐಷಾರಾಮಿ ಕಂಪನಿಗಳು ಈ ಅವಕಾಶವನ್ನು ಸದುಪಯೋಗಪಡಿಸುವ ತವಕದಲ್ಲಿದೆ.

Most Read Articles

Kannada
English summary
After two separate incidents of Volvo buses catching fire, the Swedish busmaker has been directed by the Karnatake government to fit all buses with emergency exits within a period of three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X