ಲಂಬೊರ್ಗಿನಿ ಗಲರ್ಡೊ ಉತ್ತರಾಧಿಕಾರಿ 'ಹ್ಯುರಕೇನ್'

By Nagaraja

ಇಟಲಿ ಮೂಲದ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೊರ್ಗಿನಿ, ತನ್ನ ಜನಪ್ರಿಯ ಗಲರ್ಡೊ ಆವೃತ್ತಿಯ ಉತ್ತರಾಧಿಕಾರಿಯನ್ನು ಸಿದ್ಧಪಡಿಸುವುದರಲ್ಲಿ ಮಗ್ನವಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದೀಗ ಇನ್ನಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಲಂಬೊರ್ಗಿನಿ ಹೊಸ ಕಾರು ಹ್ಯುರಕೇನ್ (Huracan) ಎಂದೆಸಿಕೊಳ್ಳಲಿದೆ. ಈ ಬಗ್ಗೆ ಲಂಬೊರ್ಗನಿಯಿಂದ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಹೊಸ ವರ್ಷದ ವೇಳೆ ಇನ್ನಷ್ಟು ಮಾಹಿತಿಗಳು ಬರಲಿದೆ.

Lamborghini Huracan

ನಿಮ್ಮ ಮಾಹಿತಿಗಾಗಿ, ಲಂಬೊರ್ಗಿನಿ ಗಲರ್ಡೊ ಸೂಪರ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಲಂಬೊರ್ಗಿನಿ ಹೊಸ ಕಾರನ್ನು ಸಿದ್ಧಗೊಳಿಸುತ್ತಿದೆ. ಮೂಲತ: ಸ್ಪಾನಿಷ್ ಭಾಷೆಯಿಂದ ಹ್ಯುರಕೇನ್ ಎಂಬ ಪದವನ್ನು ಬಳಸಲಾಗಿದ್ದು, ಬೆಂಕಿಯ ಮಾಯಾ ದೇವತೆ ಅಥವಾ ಗಾಳಿ ಹಾಗೂ ಬಿರುಗಾಳಿಯೆಂಬ ಅರ್ಥವನ್ನು ನೀಡುತ್ತದೆ.

ನೂತನ ಲಂಬೊರ್ಗಿನಿ ಹ್ಯುರಕೇನ್ 5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 600 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರುವ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.

Most Read Articles

Kannada
English summary
The successor to the Lamborghini Gallardo will be called Huracan. While Lamborghini is yet to officially come out with the name, which will most likely be before the end of this year
Story first published: Monday, December 16, 2013, 12:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X