ಲೂ ಲೂ ಶಾಪಿಂಗ್ ಮಾಲ್‌ನಲ್ಲಿ 3,000 ಕಾರು ಪಾರ್ಕಿಂಗ್!

By Nagaraja

ದೇಶದ ಅತಿ ದೊಡ್ಡ ಶಾಂಪಿಂಗ್ ಮಾಲ್ ಎಂಬ ಖ್ಯಾತಿಗೆ ಮಾತ್ರವಾಗಿರುವ ಕೊಚ್ಚಿಯ ಲೂ ಲೂ ವ್ಯಾಪಾರ ಮಳಿಗೆ ಬಗ್ಗೆ ನಾವೀಗಲೇ ಕೇಳಿರುತ್ತೇವೆ. ಅಂದ ಹಾಗೆ ದೇಶದ ಈ ಅತಿ ದೊಡ್ಡ ವ್ಯಾಪಾರ ಮಳಿಗೆಯಲ್ಲಿ ಏಕಕಾಲಕ್ಕೆ 3000 ಕಾರುಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.

ಖಂಡಿತವಾಗಿಯೂ ಇದು ಗ್ರಾಹಕರನ್ನು ಅತ್ಯಂತ ಹೆಚ್ಚು ಖುಷಿಪಡಿಸುವಂತಾಗಿದೆ. ದೇಶದಲ್ಲಿ ವಾಹನ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವಂತೆಯೇ ಗ್ರಾಹಕರು ಶಾಪಿಂಗ್ ಮಾಡುವ ವೇಳೆ ಕಾರು ಪಾರ್ಕಿಂಗ್‌ಗಾಗಿ ಇಷ್ಟೊಂದು ದೊಡ್ಡ ವ್ಯವಸ್ಥೆ ಕಲ್ಪಿಸಿರುವುದನ್ನು ಉತ್ತಮ ಪೂರ್ವ ಯೋಜನೆ ಎಂದೇ ಬಿಂಬಿಸಬಹುದಾಗಿದೆ.


ಒಟ್ಟು 1,600 ಕೋಟಿ ರೂಪಾಯಿ ಖರ್ಚು ಮಾಡಿ ಲೂ ಲೂ ಶಾಪಿಂಗ್ ನಿರ್ಮಿಸಲಾಗಿದ್ದು, ಗಲ್ಫ್ ದೇಶಗಳಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಇಎಂಕೆಇ ಗ್ರೂಪ್ ಉದ್ಯಮಿ ಕೇರಳ ಮೂಲದ ಎಂ. ಎ. ಯೂಸುಫ್ ಅಲಿ ಒಡೆತನದಲ್ಲಿದೆ.

ಸಾಮಾನ್ಯವಾಗಿ ಮಾಲ್‌ಗಳ ಮುಂದೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುತ್ತಾರೆ. ಇದು ವಾಹರ ಸವಾರರ ಜತೆ ಅತ್ತ ಕಡೆಯಿಂದ ತೆರಳುವ ಇತರ ವಾಹನಗಳಿಗೂ ತೊಂದರೆ ಕೊಡುತ್ತಿದೆ. ಇದರಿಂದಾಗಿ ಶಾಪಿಂಗ್ ಮಾಲ್‌ಗೆ ತೆರಳುವ ಬಹುತೇಕರು ತಮ್ಮ ವಾಹನಗಳನ್ನು ಮನೆಯಲ್ಲಿ ಬಿಟ್ಟು ತೆರಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಆದರೆ ಲೂ ಲೂ ವ್ಯಾಪಾರ ಮಳಿಗೆಗೆ ತೆರಳುವ ಗ್ರಾಹಕರ ಕಾರು ಪಾರ್ಕಿಂಗ್‌ಗಾಗಿ ವಿಶಾಲವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಲಿಕನ ಇಂತಹ ನಡೆ ಗ್ರಾಹಕರ ಪ್ರೀತಿ ಪಾತ್ರವಾಗುವಂತಾಗಿದೆ.

Most Read Articles

Kannada
Read more on ಕಾರು car
English summary
India’s biggest shopping mall, the Lulu Shopping Mall has parking for 3,000 cars. Hence lulu mall owned by EMKE group of United Arab Emirates (UAE) businessman M.A. Yousuf Ali, who hails from Kerala.
Story first published: Tuesday, March 12, 2013, 16:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X