ಕ್ವಾಡ್ರಾಸೈಕಲ್‌ ವಿಭಾಗದತ್ತ ಕಣ್ಣಾಯಿಸಿದ ಮಹೀಂದ್ರ

ಕೇಂದ್ರ ಸರಕಾರವು ಕ್ವಾಡ್ರಾಸೈಕಲ್ ವಿಭಾಗಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಬೆನ್ನಲ್ಲೇ ಹಲವು ವಾಹನ ತಯಾರಕ ಸಂಸ್ಥೆಗಳು ಇದರತ್ತ ಆಕರ್ಷಿತವಾಗಿದೆ.

ಪ್ರಸ್ತುತ ಕ್ವಾಡ್ರಾಸೈಕಲ್ ವಿಭಾಗಕ್ಕೆ ಏಕೈಕ ಮಾಡೆಲ್ ಮಾತ್ರ ಸೇರಿಕೊಂಡಿದೆ. ಅದುವೇ ಬಜಾಜ್ ಆಟೋ ನಿರ್ಮಿಸಿರುವ ಆರ್‌ಇ60. ಆಟೋಗಳಿಗೆ ಬದಲಿ ವ್ಯವಸ್ಥೆ ಎನ್ನಲಾಗುತ್ತಿರುವ ಆರ್‌ಇ60 ನಗರ ಪ್ರದೇಶದ ಸಂಚಾರಕ್ಕೆ ಉತ್ತಮವಾಗಿರಲಿದೆ.

ಅಂದ ಹಾಗೆ ಮಹೀಂದ್ರ ಕೂಡಾ ನಾಲ್ಕು ಚಕ್ರದ ಸಣ್ಣ ವಾಹನ ತಯಾರಿಸುವ ಕುರಿತು ಚಿಂತನೆಯಲ್ಲಿ ತೊಡಗಿದೆ. ಇದು ವೈಯಕ್ತಿಕ ಪ್ರಯಾಣ ವಿಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ಹಗುರ ವಾಣಿಜ್ಯ ವಾಹನವಾಗಿ ಪರಿಗಣಿಸಬಹುದಾಗಿದೆ.

ಒಟ್ಟಿನಲ್ಲಿ ಕ್ವಾಡ್ರಾಸೈಕಲ್ ವಿಭಾಗಕ್ಕೆ ಮಾನ್ಯತೆ ಲಭಿಸಿರುವುದರಿಂದ ನಿಕಟ ಭವಿಷ್ಯದಲ್ಲಿ ಈ ವಿಭಾಗಕ್ಕೆ ಹೆಚ್ಚಿನ ವಾಹನಗಳು ಸೇರ್ಪಡೆಯಾದ್ದಲ್ಲಿ ಅಚ್ಚರಿಯೇನಿಲ್ಲ. ಇದು ಸ್ಮರ್ದಾತ್ಮಕ ದರಗಳಲ್ಲಿ ಗ್ರಾಹಕರನ್ನು ತಲುಪುವಲ್ಲಿ ನೆರವಾಗಲಿದೆ.

Most Read Articles

Kannada
English summary
Mahindra and Mahindra is seriously considering having its own product category as far as quadricycles are concerned.
Story first published: Thursday, May 30, 2013, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X