ಮಾರುತಿ ಎಸ್ಟಿಲೊ 'ಎನ್‌ಲೈವ್' ಲಿಮೆಟೆಡ್ ಅಡಿಷನ್ ಲಾಂಚ್

By Nagaraja

ದೇಶದ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ, ನೂತನ ಲಿಮಿಟೆಡ್ ಅಡಿಷನ್ ಎಸ್ಟಿಲೊ ಕಾರನ್ನು ಲಾಂಚ್ ಮಾಡಿದೆ. ಈ ನೂತನ ಕಾಂಪೆಕ್ಟ್ ಹ್ಯಾಚ್‌ಬ್ಯಾಕ್ ಕಾರು ಎನ್‌ಲೈವ್ ಎಂದು ಅರಿಯಲ್ಪಡಲಿದೆ.

ಹೊಸ ಕಾರಿನಲ್ಲಿ ಎಂಟಿರಿಯರ್ ಸಹಿತ ಇಂಟಿರಿಯರ್ ಬದಲಾವಣೆಗಳನ್ನು ಕೂಡಾ ತರಲಾಗಿದೆ. ಇದೀಗ ಕಂಪನಿ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಪ್ರಸ್ತುತ ಮಾರುಕಟ್ಟೆ ಕುಸಿತದತ್ತ ಮುಖ ಮಾಡಿರುವಾಗ ಎಸ್ಟಿಲೊ ಎನ್‌ಲೈನ್ ಉತ್ತೇಜನ ನೀಡುವ ಭರವಸೆಯನ್ನು ಮಾರುತಿ ಸುಜುಕಿ ಹೊಂದಿದೆ.

ಎಕ್ಸ್‌ಟೀರಿಯರ್ ಸ್ಪೆಷಾಲಿಟಿ:

  • ನ್ಯೂ ಬಾಡಿ ಗ್ರಾಫಿಕ್ಸ್
  • ವೀಲ್ಸ್ ಕವರ್ಸ್

ಇಂಟಿರಿಯರ್ ಸ್ಪೆಷಾಲಿಟಿ:

  • ಲೆಥರ್ ಸೀಟ್ ಕವರ್
  • ಡಬಲ್ ಡಿನ್ ಸೌಂಡ್ ಸಿಸ್ಟಂ
  • ಯುಎಸ್‌ಬಿ ಕನೆಕ್ಟಿವಿಟಿ
  • ಡ್ಯುಯಲ್ ಟೋನ್ ಇಂಟಿರಿಯರ್

ಮೈಲೇಜ್- 19 (ಪ್ರತಿ ಲೀಟರ್‌ಗೆ)

ನ್ಯೂ ಅಡಿಷನ್ ಎಸ್ಟಿಲೊ ಎನ್‌ಲೈವ್ ಆರಂಭಿಕ ದರ 3.92 ಲಕ್ಷ ರು.ಗಳಾಗಿವೆ. ಇದು 998 ಸಿಸಿ ಕೆ10ಬಿ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಹಾಗೆಯೇ ಎಆರ್‌ಎಐ ಮಾನ್ಯತೆಯಂತೆ ಪ್ರತಿ ಲೀಟರ್‌ಗೆ 19 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮಾರುತಿ ಸುಜುಕಿ ಇಂಡಿಯಾ ಉಪಾಧ್ಯಕ್ಷ ಮನೋಹರ್ ಭಟ್, ಇತ್ತೀಚೆಗಿನ ಕೆಲವು ಸಮಯಗಳಿಂದ ಲಿಮೆಟೆಡ್ ಅಡಿಷನ್ ಆವೃತ್ತಿಗಳಲ್ಲಿ ಉತ್ತಮ ಯಶ ಸಾಧಿಸಿದ್ದೇವೆ. ಇದಕ್ಕೆ ವಾಗನ್ ಆರ್, ಎ ಸ್ಟಾರ್ ಹಾಗೂ ಆಲ್ಟೊ ಉತ್ತಮ ಉದಾಹರಣೆಯಾಗಿದೆ. ಇದೀಗ ಎಸ್ಟಿಲೊ ಎನ್‌ಲೈವ್ ಕೂಡಾ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಹೊಂದಿದ್ದೇವೆ ಎಂದಿದ್ದಾರೆ.

Most Read Articles

Kannada
English summary
Maruti Suzuki, India's largest automobile manufacturer has launched a limited edition variant of its Estilo compact hatchback called Nlive. Estilo Nlive is being introduced with several added interior and exterior design features and amenities.
Story first published: Tuesday, March 12, 2013, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X