ಮಾರುತಿ ಸ್ವಿಫ್ಟ್ ವಿಶ್ವದ 10ನೇ ಅತಿ ಹೆಚ್ಚು ಮಾರಾಟವಾದ ಕಾರು

ಮಾರುತಿ ಸುಜುಕಿ ಸ್ವಿಫ್ಟ್, ವಿಶ್ವದ 10ನೇ ಅತಿ ಹೆಚ್ಚು ಮಾರಾಟವಾದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುತಿಯ ಸ್ವಿಫ್ಟ್ ಅವಳಿಗಳಾದ (ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಹಾಗೂ ಸ್ವಿಫ್ಟ್ ಡಿಜೈರ್) ಜತೆಯಾಗಿ ಇಂತಹದೊಂದು ದಾಖಲೆ ಸೃಷ್ಟಿ ಮಾಡಿದೆ.

2013 ಫೆಬ್ರವರಿ ತಿಂಗಳಲ್ಲಿ ಜಾಗತಿಕವಾಗಿ ಎರಡು ಆವೃತ್ತಿಗಳು ಒಟ್ಟುಸೇರಿ 48,557 ಯುನಿಟ್ ಮಾರಾಟವಾಗಿದೆ. ಕಳೆದ ತಿಂಗಳಷ್ಟೇ ಭಾರತದ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರೆಂಬ ಖ್ಯಾತಿಗೆ ಮಾರುತಿ ಸ್ವಿಫ್ಟ್ ಡಿಜೈರ್ ಪಾತ್ರವಾಗಿತ್ತು.

ಆಟೋ ಜಗತ್ತು ಕುಸಿದಿರುವ ನಡುವೆಯೂ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವಲ್ಲಿ ಡಿಜೈರ್‌ಗೆ ಸಾಧ್ಯವಾಗಿತ್ತು. ಹಾಗಿದ್ದರೂ ಹೋಂಡಾ ಅಮೇಜ್ ಭೀತಿಯನ್ನು ತಡೆಯುವುದಕ್ಕಾಗಿ ರಿಗಲ್ ವಿಶೇಷ ಅಡಿಷನ್ ಹಾಗೂ ಮೈಲೇಜ್ rally ಹಮ್ಮಕೊಂಡಿತ್ತು.

2008ನೇ ಇಸವಿಯಲ್ಲಿ ಮಾರುತಿ ಎಸ್ಟೀಮ್ ಉತ್ತರಾಧಿಕಾರಿಯಾಗಿ ಸ್ವಿಫ್ಟ್ ಡಿಜೈರ್ ಮಾರುಕಟ್ಟೆ ಪ್ರವೇಶಿಸಿತ್ತು. ಸ್ಮರ್ಧಾತ್ಮಕದ ದರದಲ್ಲಿ ಗ್ರಾಹಕರನ್ನು ತಲುಪಿರುವುದು ಇದರ ಯಶಸ್ಸಿಗೆ ಕಾರಣವಾಗಿತ್ತು.

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳ ಪೈಕಿ ಅಗ್ರ ಮೂರು ಸ್ಥಾನಗಳನ್ನು ಮಾರುತಿ ವಶಪಡಿಸಿಕೊಂಡಿದೆ. ಅಗ್ರಸ್ಥಾನದಲ್ಲಿರುವ ಆಲ್ಟೊಗಿಂತ ಕೇವಲ 400 ಯುನಿಟ್ ಸಂಖ್ಯೆಗಳ ಮಾರಾಟ ಮಾತ್ರ ಹಿಂದಿರುವ ಡಿಜೈರ್ ದ್ವಿತೀಯ ಸ್ಥಾನದಲ್ಲಿದೆ. ಈ ನಡುವೆ ಎಪ್ರಿಲ್ ತಿಂಗಳಲ್ಲಿ 4852 ಯುನಿಟ್ ಮಾರಾಟ ಸಂಖ್ಯೆ ತಲುಪಿರುವ ಹೋಂಡಾ ಅಮೇಜ್ ಮಾರುತಿ ಅಗ್ರಸ್ಥಾನಕ್ಕೆ ಭೀತಿಯಾಗಿ ಪರಿಣಮಿಸಿದೆ.

Most Read Articles

Kannada
English summary
Now the Swift twins (Swift hatchback and Swift DZire) have entered the top ten selling cars in the world. In February 2013, both body styles of the Swift have combined sold 48,557 units across the globe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X