ಮೋದಿ ಮೇನಿಯಾ; ನಗರದಲ್ಲಿ ಟ್ರಾಫಿಕ್ ನಿರ್ಬಂಧ

ಗುಜರಾತ್ ರಾಜ್ಯದ ಗೌರವಾನ್ವಿತ ಮುಖ್ಯ ಮಂತ್ರಿಗಳಾದ ನರೇಂದ್ರ ಮೋದಿ ಅವರು ದಿನಾಂಕ 17-11-2013 ರಂದು ಬೆಂಗಳೂರು ನಗರಕ್ಕೆ ಭೇಟಿ ನೀಡುವ ಹಾಗೂ ಅರಮನೆ ಮೈದಾನದಲ್ಲಿ ಏರ್ಪಡಿಸಿದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಭಾನುವಾರ ದಿವಸ ಬೆಳಗ್ಗೆ 6.00 ಗಂಟೆಯಿಂದ ರಾತ್ರಿ 10.00 ಗಂಟೆಯ ವರೆಗೆ ಈ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

I. ಸಾಮಾನ್ಯ ವಾಹನಗಳಿಗೆ ಮಾರ್ಗ
1. ಬೆಂಗಳೂರು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಾಗುವ ವಾಹನಗಳು: ಬಸವೇಶ್ವರ ವೃತ್ತ (ಚಾಲುಕ್ಯ ವೃತ್ತ) - ಹಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್ - ಎಡ ತಿರುವು - ವಿನ್ಸರ್ ಮ್ಯಾನರ್ ಜಂಕ್ಷನ್ - ಕಾವೇರಿ ಥಿಯೇಟರ್ ಜಂಕ್ಷನ್ - ಎಡ ತಿರುವು - ಭಾಷ್ಯಂ ಸರ್ಕಲ್ - ಬಲ ತಿರುವು- ಜೀವರಾಜ ಆಳ್ವ ರಸ್ತೆ - ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ - "U" ತಿರುವು - ಸಿ.ವಿ. ರಾಮನ್ ರಸ್ತೆ - ಮೇಕ್ರಿ ವೃತ್ತ ಎಡ ತಿರುವು - ಬಳ್ಳಾರಿ ರಸ್ತೆ (ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ)
2. ಬೆಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಾಗುವ ವಾಹನಗಳು: ಎಂ.ಜಿ ರಸ್ತೆ- ಕಾಮರಾಜ ರಸ್ತೆ - ಥಾಮಸ್ ಕೆಫೆ - ವೀಲರ್ಸ್ ರಸ್ತೆ - ಐಟಿಸಿ ಮೇಲ್ಸೇತುವೆ - ಮಾರುತಿ ಸೇವಾನಗರ - ಐ.ಓ.ಸಿ ಮೇಲ್ಸೇತುವೆ - ಬಾಣಸವಾಡಿ ಮುಖ್ಯ ರಸ್ತೆ - ಎಡ ತಿರುವು - ಹೊರ ವರ್ತುಲ ರಸ್ತೆ - ಹೆಣ್ಣೂರು -ನಾಗವಾರ ಜಂಕ್ಷನ್ ಬಲ ತಿರುವು -ಥಣಿಸಂದ್ರ ಮುಖ್ಯ ರಸ್ತೆ - ಹೆಗಡೆ ನಗರ - ಕಟ್ಟಿಗೇನಹಳ್ಳಿ ಎಡ ತಿರುವು - ಬಾಗಲೂರು ಕ್ರಾಸ್ - ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
3. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೂರ್ವ ಮತ್ತು ಆಗ್ನೇಯ ಕಡೆಗೆ ಸಾಗುವ ವಾಹನಗಳು: ಅಂತರಾಷ್ಟ್ರೀಯ ವಿಮಾನ ನಿಲ್ದಾಣ - ಹೆಬ್ಬಾಳ ಮೇಲ್ಸೇತುವೆ ಎಡ ತಿರುವು - ನಾಗವಾರ ಜಂಕ್ಷನ್ - ಹೆಣ್ಣೂರು ವರ್ತುಲ ರಸ್ತೆ ಜಂಕ್ಷನ್ - ಕಲ್ಯಾಣನಗರ - ರಾಮಮೂರ್ತಿನಗರ - ಕೆ.ಆರ್. ಪುರಂನಿಂದ ಮುಂದಕ್ಕೆ.

II. ಸಾರ್ವಜನಿಕ ಸಭೆಗೆ ಆಗಮನಿಸುವ ವಾಹನಗಳಿಗೆ ಮಾರ್ಗಸೂಚಿ:
1. ಮೈಸೂರು ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು: ಮೈಸೂರು ರಸ್ತೆ - ನಾಯುಂಡ ಹಳ್ಳಿ ಜಂಕ್ಷನ್ ಎಡ ತಿರುವು - ಸುಮ್ಮನ ಹಳ್ಳಿ ಜಂಕ್ಷನ್ - ಡಾ. ರಾಜ್ ಕುಮಾರ್ ಸಮಾಧಿ - ಬಲ ತಿರುವು - ತುಮಕೂರು ರಸ್ತೆ - ಗೋರಗುಂಟೆ ಪಾಳ್ಯ ಜಂಕ್ಷನ್ ಎಡ ತಿರುವು - ಬಿಇಎಲ್ ಜಂಕ್ಷನ್ - ಹೊರ ವರ್ತುಲ ರಸ್ತೆ- ಹೆಬ್ಬಾಳ ಮೇಲ್ಸತುವೆ.
2. ತುಮಕೂರು ರಸ್ತೆ ಕಡೆಯಿಂದ - ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು: ತುಮಕೂರು ರಸ್ತೆ ಎಡ ತಿರುವು - ಗೋರಗುಂಟೆ ಪಾಳ್ಯ ಜಂಕ್ಷನ್ ಎಡ ತಿರುವು - ಬಿಇಎಲ್ ಜಂಕ್ಷನ್ - ಹೊರ ವರ್ತುಲ ರಸ್ತೆ - ಹೆಬ್ಬಾಳ ಮೇಲ್ಸತುವೆ.
3. ಕನಕಪುರ ರಸ್ತೆ ಕಡೆಯಿಂದ ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು: ಕನಕಪುರ ರೋಡ್ - ಹೊರ ವರ್ತುಲ ರಸ್ತೆ ಜಂಕ್ಷನ್ ಎಡ ತಿರುವು - ಕದಿರೇನ ಹಳ್ಳಿ - ಪದ್ಮನಾಭ ನಗರ ಜಂಕ್ಷನ್ - ಪಿಇಎಸ್ ಕಾಲೇಜ್ ಜಂಕ್ಷನ್ - ನಾಯುಂಡ ಹಳ್ಳಿ ಜಂಕ್ಷನ್ ಎಡ ತಿರುವು - ಸುಮ್ಮನ ಹಳ್ಳಿ ಜಂಕ್ಷನ್ - ಡಾ. ರಾಜ್ ಕುಮಾರ್ ಸಮಾಧಿ - ಬಲ ತಿರುವು - ತುಮಕೂರು ರಸ್ತೆ - ಗೋರಗುಂಟೆ ಪಾಳ್ಯ ಜಂಕ್ಷನ್ ಎಡ ತಿರುವು - ಬಿಇಎಲ್ ಜಂಕ್ಷನ್ - ಹೊರ ವರ್ತುಲ ರಸ್ತೆ - ಹೆಬ್ಬಾಳ ಮೇಲ್ಸತುವೆ.
4. ಬನ್ನೇರುಘಟ್ಟ ರಸ್ತೆ ಕಡೆಯಿಂದ ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವು ವಾಹನಗಳು: ಬನ್ನೇರುಘಟ್ಟ ರಸ್ತೆ ಎಡ ತಿರುವು - ಪುಟ್ಟೇನ ಹಳ್ಳಿ ಅಂಡರ್ ಪಾಸ್ - ಕನಕಪುರ ರೋಡ್ - ಹೊರ ವರ್ತುಲ ರಸ್ತೆ ಜಂಕ್ಷನ್‌ನ ಎಡ ತಿರುವು - ಕದಿರೇನ ಹಳ್ಳಿ - ಪದ್ಮನಾಭ ನಗರ ಜಂಕ್ಷನ್ - ಪಿಇಎಸ್ ಕಾಲೇಜ್ ಜಂಕ್ಷನ್ - ನಾಯುಂಡ ಹಳ್ಳಿ ಜಂಕ್ಷನ್ ಎಡ ತಿರುವು - ಸುಮ್ಮನ ಹಳ್ಳಿ ಜಂಕ್ಷನ್ - ಡಾ. ರಾಜ್ ಕುಮಾರ್ ಸಮಾಧಿ ಬಲ ತಿರುವು - ತುಮಕೂರು ರಸ್ತೆ - ಗೊರಗುಂಟೆ ಪಾಳ್ಯ, ಜಂಕ್ಷನ್ ಎಡ ತಿರುವು - ಬಿಇಎಲ್ ಜಂಕ್ಷನ್ - ಹೊರ ವರ್ತುಲ ರಸ್ತೆ- ಹೆಬ್ಬಾಳ ಮೇಲ್ಸೇತುವೆ ಅಥವಾ ಬನ್ನೇರುಘಟ್ಟ ರಸ್ತೆ - ಜಯದೇವ ಫ್ಲೈಒವರ್ - ಬಲ ತಿರುವು - ಸಿಲ್ಕ್ ಬೋರ್ಡ್ ಜಂಕ್ಷನ್ - ಮಾರಥಹಳ್ಳಿ - ಹೆನ್ನೂರು ಜಂಕ್ಷನ್ - ನವಗರ - ಹೆಬ್ಬಾಳ್ ಫ್ಲೈಒವರ್.
5. ಬಳ್ಳಾರಿ ರಸ್ತೆ ಕಡೆಯಿಂದ - ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು: ಬಳ್ಳಾರಿ ರಸ್ತೆ- ದೇವನ ಹಳ್ಳಿ - ಚಿಕ್ಕಜಾಲ - ಹುಣೆಸೆಮಾರನ ಹಳ್ಳಿ - ಕೋಗಿಲು ಜಂಕ್ಷನ್ - ಕೋಡಿಗೆಹಳ್ಳಿ ಗೇಟ್ - ಹೆಬ್ಬಾಳ ಫ್ಲೈಓವರ್ - ಮೇಕ್ರಿ ಸರ್ಕಲ್
6. ದೊಡ್ಡ ಬಳ್ಳಾಪುರ ರಸ್ತೆ ಕಡೆಯಿಂದ - ಅರಮನೆ ಮೈದಾನದಲ್ಲಿ ನಡೆಯುವ ಸಭೆಗೆ ಬರುವ ವಾಹನಗಳು: ದೊಡ್ಡಬಳ್ಳಾಪುರ ರಸ್ತೆ- ಮೇಜರ್ ಉನ್ನಿಕೃಷ್ಣನ್ ರಸ್ತೆ ಜಂಕ್ಷನ್ - ಯಲಹಂಕ ಪೊಲೀಸ್ ಠಾಣೆ ಜಂಕ್ಷನ್ - ಬಲ ತಿರುವು - ಯಲಹಂಕ ಬೈಪಾಸ್ ಜಂಕ್ಷನ್ - ಬಳ್ಳಾರಿ ರಸ್ತೆ - ಕೋಡಿಗೆ ಹಳ್ಳಿ ಗೇಟ್ - ಹೆಬ್ಬಾಳ ಫ್ಲೈಒವರ್ - ಮೇಕ್ರಿ ಸರ್ಕಲ್

route
III. ಭಾರಿ ವಾಹನಗಳ ಮಾರ್ಗ ಬದಲಾವಣೆ
1. ಚಿಕ್ಕಬಳ್ಳಾಪುರದ ಕಡೆಯಿಂದ ತುಮಕೂರು ರಸ್ತೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು: ಬಳ್ಳಾರಿ ರಸ್ತೆ- ದೊಡ್ಡ ಬಳ್ಳಾಪುರ ರಸ್ತೆ ಜಂಕ್ಷನ್ - ದೇವನಹಳ್ಳಿ ಜಂಕ್ಷನ್ ಬಲ ತಿರುವು - ದೊಡ್ಡ ಬಳ್ಳಾಪುರ ರಸ್ತೆ - ದೊಡ್ಡ ಬಳ್ಳಾಪುರ - ದೊಡ್ಡಬೆಳವಂಗಲ - ದಾಬಸ್ ಪೇಟೆ ತುಮಕೂರು ರಸ್ತೆ
2. ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಚಿಕ್ಕಬಳ್ಳಾಪುರ ರಸ್ತೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು: ತುಮಕೂರು ರಸ್ತೆ - ದಾಬಸ್ ಪೇಟೆ - ಎಡ ತಿರುವು - ದೊಡ್ಡಬೆಳಮಂಗಲ- ದೊಡ್ಡ ಬಳ್ಳಾಪುರ - ದೇವನ ಹಳ್ಳಿ ಜಂಕ್ಷನ್ - ಬಳ್ಳಾರಿ ರಸ್ತೆ
3. ಚಿಕ್ಕಬಳ್ಳಾಪುರದ ಕಡೆಯಿಂದ ಹಳೇ ಮದ್ರಾಸು ರಸ್ತೆ ಕಡೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು.

IV. ಅರಮನೆ ಮೈದಾನದಲ್ಲಿ ವಾಹನ ನಿಲುಗಡೆ
1. ಸಾರ್ವಜನಿಕ ಸಭೆಗೆ ಹೆಬ್ಬಾಳ ಮುಖಾಂತರ ಬರುವ ಬಸ್ಸುಗಳು ಬಳ್ಳಾರಿ ರಸ್ತೆಯಲ್ಲಿ ಬಂದು ಮೇಕ್ರಿ ಸರ್ಕಲ್ ಮುಂಖಾಂತರ ಜಯಮಹಲ್ ರಸ್ತೆ ತಲುಪಿ ಅರಮನೆ ಮೈದಾನದಲ್ಲಿ ಕೆಳಕಂಡ ಸ್ಥಳಗಳಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.
ಸರ್ಕಸ್ ಗ್ರೌಂಡ್ ಅರಮನೆ ಮೈದಾನ,
ಹಳೇ ಮಾವಿನ ಕಾಯಿ ಮಂಡಿ, ಅರಮನೆ ಮೈದಾನ,
ಶಾರೂಖ್ ಖಾನ್ ಗ್ರೌಂಡ್, ಅರಮನೆ ಮೈದಾನ.
2. ಸಾರ್ವಜನಿಕ ಸಭೆಗೆ ಬರುವ ಕಾರುಗಳು ಅರಮನೆ ಮುಖದ್ವಾರದಿಂದ (ವಸಂತ ನಗರ ಕಡೆಯಿಂದ) ಒಳ ಪ್ರವೇಶಿಸಿ ಅರಮನೆ ಮುಂಭಾಗದ ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ. ದ್ವಿಚಕ್ರ ವಾಹನಗಳು ಅರಮನೆ ಮೈದಾನದ ಪ್ರವೇಶ ದ್ವಾರದ ಪಕ್ಕದಲ್ಲಿರುವ ಸೆಕ್ಯೂರಿಟಿ ಗಾರ್ಡ್ ರಸ್ತೆಯ ಮೂಲಕ ಒಳ ಪ್ರವೇಶಿಸಿ ಟೆನಿಸ್ ಪೆವಿಲಿಯನ್ ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ.
3. ಸಾರ್ವಜನಿಕ ಸಭೆಗೆ ಬರುವ ಟೆಂಪೋಟ್ರಾವಲರ್, ಟ್ರಾಕ್ಸ್ ವಾಹನಗಳು: ಹೆಬ್ಬಾಳ ಕಡೆಯಿಂದ ಬಳ್ಳಾರಿ ರಸ್ತೆಯಲ್ಲಿ ಬಂದು ಸಂಜಯ್ ನಗರ ಕ್ರಾಸ್ ಬಳಿ ಯು ತಿರುವು ಪಡೆದು ಬಳ್ಳಾರಿ ರಸ್ತೆಯಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಹಾಕಿ ಮೈದಾನ ಮತ್ತು ಫಟ್ಬಾಲ್ ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ.

narendra modi

V. ಅರಮನೆ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ನಿಲುಗಡೆ.
1. ಸಾರ್ವಜನಿಕ ಸಭೆಗೆ ಬರುವ ಬಿಎಂಟಿಸಿ/ಕೆಆಸ್‌ಆರ್‌ಟಿಸಿ ಬಸ್ಸುಗಳು ಹೆಬ್ಬಾಳ ಫ್ಲೈಒವರ್ ಬಳಿ ಇರುವ ಬಿಎಂಟಿಸಿ 28 ಘಟಕದ ಬಳಿ ನಿಲುಗಡೆ ಮಾಡಬಹುದಾಗಿದೆ.
2. ಸಾರ್ವಜನಿಕ ಸಭೆಗೆ ಬರುವ ದ್ವಿಚಕ್ರ ವಾಹನಗಳಿಗೆ ಬಿಡಿಎ ಬಳಿ ಇರುವ ರೈಲ್ವೆ ಪ್ಯಾರಲರ್ ರಸ್ತೆಯಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

VI. ವಾಹನಗಳ ನಿಲುಗಡೆ ನಿಷೇಧ ಮಾಡಲಾಗಿರುವ ಪ್ರದೇಶಗಳು
1. ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಪೊಲೀಸ್ ಠಾಣೆ ಜಂಕ್ಷನ್ ನಿಂದ ಹೆಚ್ ಕ್ಯೂಟಿಸಿ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
2. ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿರುವ ಮಾರ್ಗಗಳಲ್ಲಿ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
3. ರಮಣ ಮಹರ್ಷಿ ರಸ್ತೆಯಲ್ಲಿ ಮೇಕ್ರಿ ವೃತ್ತದಿಂದ ಕಾವೇರಿ ಚಿತ್ರ ಮಂದಿರ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
4. ಚೌಡಯ್ಯ ರಸ್ತೆಯಲ್ಲಿ ರಾಜಭವನ ಜಂಕ್ಷನ್ ನಿಂದ ಕಾವೇರಿ ಚಿತ್ರ ಮಂದಿರ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
5. ಸರ್ ಸಿವಿ ರಾಮನ್ ರಸ್ತೆಯಲ್ಲಿ ಮೇಕ್ರಿ ವೃತ್ತದಿಂದ ಬಿಹೆಚ್‌ಇಎಲ್ ವೃತ್ತದ ವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
6. ಜಯಮಹಲ್ ಮುಖ್ಯ ರಸ್ತೆಯಲ್ಲಿ ಮೇಕ್ರಿ ವೃತ್ತದಿಂದ ಕಂಟೋನ್ ಮೆಂಟ್ ರೈಲ್ವೇ ನಿಲ್ದಾಣ ವರೆಗೆ ರಸ್ತೆಯ ಎರಡು ಕಡೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
7. ನಂದಿ ದುರ್ಗ ರಸ್ತೆಯಲ್ಲಿ ಜೆಪಿ ನಗರ ಪೊಲೀಸ್ ಠಾಣೆ ಜಂಕ್ಷನ್ ನಿಂದ ಹಚ್ ಕ್ಯಾಂಪ್ ಜಂಕ್ಷನ್ ವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
8. ಪ್ಯಾಲೇಸ್ ರಸ್ತೆಯಲ್ಲಿ ಬಸವೇಶ್ವರ ವೃತ್ತದಿಂದ ಪ್ಯಾಲೇಸ್ ಮೈನ್ ಗೇಟ್ ವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

Most Read Articles

Kannada
English summary
In view of Shri Narendra Modi, the Hon’ble Chief Minister of Gujrath’s visit to Bangalore City and Public Meeting at Palace Ground on 17-11-2013 the following traffic changes has been made from 6:00 am to 10:00 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X