ಇಕೊಸ್ಪೋರ್ಟ್‌ಗೆ ಸಾಮ್ಯತೆ ಪಡೆದ ಫೋರ್ಡ್ ಎಂಡೋವರ್

ಭಾರತ ಮಾರುಕಟ್ಟೆಯ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲೂ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆ ಹೊಂದಿರುವ ಫೋರ್ಡ್‌, ನೆಕ್ಸ್ಟ್ ಜನರೇಷನ್ ಎಂಡೋವರ್ ಮೂಲಕ ರಿ ಎಂಟ್ರಿ ಕೊಡುವ ಯೋಜನೆಯಲ್ಲಿದೆ.

ನೆಕ್ಟ್ಟ್ ಜನರೇಷನ್ ಎಂಡೋವರ್ ಚಿತ್ರಗಳು ಈಗಾಗಲೇ ಅಂತರ್ಜಾಲದಲ್ಲಿ ಲೀಕ್ ಆಗಿದ್ದು, ಸದ್ಯ ಲಭ್ಯವಿರುವ ಆವೃತ್ತಿಗಿಂತ ಸಂಪೂರ್ಣ ವಿಭಿನ್ನವಾಗಿರಲಿದೆ. ಕಂಪನಿಯು ಇದರ ವಿನ್ಯಾಸದತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ. ಅಂದರೆ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ.


ಪ್ರಮುಖವಾಗಿಯೂ ಹಿಂದಿನ ಆವೃತ್ತಿಯಲ್ಲಿನ ಕೊರತೆಯನ್ನು ನೀಗಿಸಲು ಕಂಪನಿ ಗುರಿಯಿರಿಸಿದೆ. ಈ ಮೂಲಕ ಇಕೊಸ್ಪೋರ್ಟ್ ಯಶಸ್ಸಿನ ಬಳಿಕ ಫೋರ್ಡ್, ನೂತನ ಎಂಡೋವರ್ ಮುಖಾಂತರ ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ನಲ್ಲೂ ಅತ್ಯುತ್ತಮ ಮಾರಾಟ ದಾಖಲಿಸುವ ನಿರೀಕ್ಷೆ ಹೊಂದಿದೆ. ನಿಮ್ಮ ಮಾಹಿತಿಗಾಗಿ ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಎವೆರೆಸ್ಟ್ ಎಂದು ಅರಿಯಲ್ಪಡುವ ಈ ಎಸ್‌ಯುವಿ ಏಷ್ಯಾದಲ್ಲಿ ಎಂಡೋವರ್ ಹೆಸರಲ್ಲಿ ಮಾರಾಟವಾಗುತ್ತಿದೆ.

ಎಂಡೋವರ್‌ನಲ್ಲಿರುವ ಫ್ರಂಟ್ ಗ್ರಿಲ್ ಸೇರಿದಂತೆ ಕೆಲವೊಂದು ವಿನ್ಯಾಸಗಳು ಇಕೊಸ್ಪೋರ್ಟ್‌ಗೆ ಸಾಮ್ಯತೆ ಹೊಂದಿದೆ. ಅಂದರೆ ಇಲ್ಲಿ ಎಂಡೋವರ್‌ಗೆ ಪ್ರೀಮಿಯಂ ಟಚ್ ನೀಡುವ ಪ್ರಯತ್ನ ಮಾಡಲಾಗಿದೆ. ಹಿಂಬದಿಯಿಂದಲೂ ಟೈಲ್‌ಲೈಟ್‌ಗಳು ಸಹ ಇಕೊಸ್ಪೋರ್ಟ್‌ಗೆ ಹೋಲಿಕೆ ಪಡೆದಿದೆ.


ಇನ್ನು ಕಂಪನಿಯು ಇದರಲ್ಲಿ 2.2 ಟಿಡಿಸಿಐ ಹಾಗೂ 3.0 ಟಿಡಿಸಿಐ ಲೀಟರ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಗಳಿವೆ. ಪ್ರಸ್ತುತ ಕಾರು ಮುಂಬರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಆಗಮನವಾಗುವ ನಿರೀಕ್ಷೆಯಿದೆ. ಅಂದ ಹಾಗೆ 2003ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ಎಂಡೋವರ್, ಏಷ್ಯಾ ಖಂಡದಲ್ಲಿ ಪ್ರಮುಖವಾಗಿಯೂ ಟೊಯೊಟಾ ಫೋರ್ಚುನರ್ ಹಾಗೂ ಇಸುಝು ಎಂಯು-7 ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿತ್ತು.
Most Read Articles

Kannada
English summary
Ford is planning to launch next generation Endeavour. Next Gen Ford Endeavour pictures has been leaked on internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X