ನಿಸ್ಸಾನ್ ಡಸ್ಟರ್ ಅಕ್ಟೋಬರ್‌ನಲ್ಲಿ ಆಗಮನ ಬಹುತೇಕ ಖಚಿತ

By Nagaraja

ನಾವು ಈ ಹಿಂದೆಯೇ ತಿಳಿಸಿರುವಂತೆಯೇ ಬುಹನಿರೀಕ್ಷಿತ ನಿಸ್ಸಾನ್ ಡಸ್ಟರ್ ಅಕ್ಟೋಬರ್ ತಿಂಗಳಲ್ಲಿ ಲಗ್ಗೆಯಿಡುವ ಸಂಭವವಿದೆ. ಇಲ್ಲಿ ಕುತೂಹಲಕಾರಿ ಅಂಶ ಏನೆಂದರೆ ಹೊಸ ನಿಸ್ಸಾನ್ ಡಸ್ಟರ್ 'ಟೆರನೊ' (Terrano) ಎಂಬ ಪದದಿಂದ ಹೆಸರಿಸಲ್ಪಡಲಿದೆ.

ಅಂದ ಹಾಗೆ 1990ನೇ ದಶಕದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರಾದ ಟೆರೆನೊವನ್ನು ಈ ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯು ಮಾರಾಟಗೈಯುತ್ತಿತ್ತು. ಆದರೆ ಕಾರಣಾಂತರಗಳಿಂದಾಗಿ 2006ನೇ ಇಸವಿಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು.

ಇದೀಗ ಹೊಸ ಡಸ್ಟರ್ ಆಗಮನವಾಗಿರುವುದರೊಂದಿಗೆ ಹೊಸ ಕಾರಿಗೆ ಹಳೆ ಟ್ಯಾಗ್ ನೀಡಲು ಕಂಪನಿ ನಿರ್ಧರಿಸಿದೆ. ಈ ಮೊದಲೇ ಜನರಿಗೆ ಟೆರೆನೊ ಹೆಸರು ಹೆಚ್ಚು ಪರಿಚಿತವಾಗಿರುವುದರಿಂದ ಅದನ್ನೇ ಆಯ್ಕೆ ಮಾಡಲಾಗಿದೆ.

ಮೊದಲ ನೋಟಕ್ಕೆ ರೆನೊ ಡಸ್ಟರ್ ಹೋಲುತ್ತಿದ್ದರೂ ನಿಸ್ಸಾನ್ ಡಸ್ಟರ್ ಹಲವು ಆಧುನಿಕ ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಸ್ತುತ ಟೆರೆನೂ ಹಬ್ಬದ ಆವೃತ್ತಿಯಲ್ಲಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

Most Read Articles

Kannada
English summary
The Nissan based Duster SUV maybe called the Terrano according to a report. The Terrano was originally a compact SUV sold by the Japanese automaker during the 1990s and eventually discontinued in 2006
Story first published: Saturday, June 8, 2013, 13:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X