ಮಾಸಾಂತ್ಯದಲ್ಲಿ ನಿಸ್ಸಾನ್ ಇವಾಲಿಯಾ ಎಲ್‌ಪಿಜಿ ಟ್ಯಾಕ್ಸಿ ಆಗಮನ

ಜಪಾನ್‌ನಲ್ಲಿ ಎನ್‌ವಿ200 ಎಂದು ಅರಿಯಲ್ಪಡುವ ನಿಸ್ಸಾನ್ ಇವಾಲಿಯಾದ ಎಲ್‌ಪಿಜಿ ಟ್ಯಾಕ್ಸಿ ವರ್ಷನ್ ಮಾಸಂತ್ಯದಲ್ಲಿ ಜಪಾನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ಎಲ್‌ಪಿಜಿ ಸಹಿತ ಪೆಟ್ರೋಲ್ ಇಂಧನದ ಮೂಲಕವೂ ಚಲಿಸಲಿದೆ. ಅಂದರೆ ಡ್ರೈವರ್ ಕ್ಯಾಬಿನ್‌ನಲ್ಲಿ ನೀಡಲಾಗಿರುವ ಸ್ವಿಚ್, ಚಾಲಕನ ಇಷ್ಟನುಸಾರವಾಗಿ ಬಳಕೆ ಮಾಡಬಹುದಾಗಿದೆ.

ಎನ್‌ವಿ200 ಎಲ್‌ಪಿಜಿ ಕಾರು 38.6 ಲೀಟರ್ ಎಲ್‌ಪಿಜಿ ಹಾಗೂ 45 ಲೀಟರ್ ಪೆಟ್ರೋಲ್ ಸ್ಟೋರ್ ಮಾಡುವ ಸಾಮರ್ಥ್ಯ ಹೊಂದಿರಲಿದೆ. ಹಾಗಿದ್ದರೂ ನಿಸ್ಸಾನ್ ವಾಣಿಜ್ಯ ಬಳಕೆಯ ಎಲ್‌ಪಿಜಿ ಟ್ಯಾಕ್ಸಿ ಎಷ್ಟು ಮೈಲೇಜ್ ನೀಡಲಿದೆ ಎಂಬುದನ್ನು ಕಂಪನಿ ಇದುವರೆಗೆ ಬಹಿರಂಗಪಡಿಸಿಲ್ಲ.

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ನಿಸ್ಸಾನ್ ಎನ್‌ವಿ200 ಆಗಸ್ಟ್ 30ರಂದು ಜಪಾನ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದು ಭಾರತೀಯ ರುಪಾಯಿ ಪ್ರಕಾರ 19.91 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

ಅಂದರೆ ನಿಸ್ಸಾನ್ ಇವಾಲಿಯಾ ಎನ್‌ವಿ200 ಎಲ್‌ಪಿಜಿ ಭಾರತಕ್ಕೂ ಎಂಟ್ರಿ ಕೊಡಲಿದೆಯೇ? ಪರೋಕ್ಷವಾಗಿ ಹೌದು ಎಂದು ಹೇಳಬಹುದಾಗಿದೆ. ಯಾಕೆಂದರೆ ನಿಸ್ಸಾನ್ ಇವಾಲಿಯಾ ರಿ ಬ್ಯಾಡ್ಜ್ ಪಡೆದುಕೊಂಡಿರುವ ಅಶೋಕ್ ಸ್ಟೈಲ್ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಲಾಂಚ್ ಆಗಲಿದೆ. ಇದು ಸಿಎನ್‌ಜಿ ಆವೃತ್ತಿಯಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

Most Read Articles

Kannada
English summary
The NV200 Vanette LPG taxi is scheduled to go on sale in the Japanese market on August 30th. It would be priced at 3.3 million Japanese Yen (INR 19.91 lakhs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X