ವಾರಕ್ಕೊಮ್ಮೆ ಇಂಧನ ಸಚಿವ ಮೊಯ್ಲಿ ಸಾರಿಗೆ ಪಯಣ

By Nagaraja

ಇಂಧನ ಉಳಿಸುವ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಮಾದರಿಯಾಗಲಿರುವ ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿ ವಾರಕ್ಕೊಮ್ಮೆ ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸಲಿದ್ದಾರೆ.

ತೈಲ ಆಮದು ಪ್ರಕ್ರಿಯೆಯಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಕಡಿತಗೊಳಿಸುವ ಭಾಗವಾಗಿ ಜನಸಾಮಾನ್ಯರಿಗೆ ಮಾದರಿಯಾಗಲಿರುವ ಇಂಧನ ಸಚಿವರು ಅಕ್ಟೋಬರ್ 9ರಿಂದ ಪ್ರತಿ ಬುಧವಾರವೂ ಸಾರ್ವಜನಿಕ ಸಾರಿಗೆ ಬಳಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಮೊಯ್ಲಿ, ತಾವು ಹಾಗೂ ತಮ್ಮ ಸಚಿವಾಲಯದ ಎಲ್ಲ ಅಧಿಕರಾಗಿಳು ಪ್ರತಿ ಬುಧವಾರದಂದು ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡಲಿದ್ದೇವೆ. ಈ ಮುಖಾಂತರ ವೆಚ್ಚ ಕಡಿತಕ್ಕೆ ಪ್ರಯತ್ನಿಸಲಿದ್ದೇವೆ ಎಂದಿದ್ದಾರೆ.

ದೈನಂದಿನ ಪಯಣಗಳಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವುದು ಸಚಿವಾಲಯದ ಉದ್ದೇಶವಾಗಿದೆ. ಇದರಂತೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಸೇರಿದಂತೆ 14 ಸಾರ್ವಜನಿಕ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಇದೇ ಸಂದರ್ಭದಲ್ಲಿ ದೇಶದಾದ್ಯಂತ ಆರು ವಾರಗಳ ಪರ್ಯಂತ ಬೃಹತ್ 'ಬಸ್ ದಿನ' ಆಚರಿಸಿಕೊಳ್ಳುವ ಮೂಲಕ ವೆಚ್ಚ ಕಡಿತಗೊಳಿಸುವ ಯೋಜನೆ ಜಾರಿಯಲ್ಲಿದೆ ಎಂದಿದ್ದಾರೆ.

Most Read Articles

Kannada
English summary
Oil Minister M Veerappa Moily said he will travel by public transport every Wednesday, starting from October 9.
Story first published: Saturday, September 28, 2013, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X