ಮಹಿಳೆಯರಿಂದ ಮಹಿಳೆಯರಿಗಾಗಿ ಗುಲಾಬಿ ಬಣ್ಣದ ಆಟೋ ರಿಕ್ಷಾ

By Nagaraja

ದಿನನಿತ್ಯದ ಸುದ್ದಿಗಳಲ್ಲಿ ಕೊಲೆ, ಹಲ್ಲೆ, ಬೆದರಿಕೆ, ಮಹಿಳೆ ಮೇಲೆ ಅತ್ಯಾಚಾರ ಹೀಗೆ ಹತ್ತು ಹಲವು ಭೀತಿ ಹುಟ್ಟಿಸುವ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಇನ್ನು ಸಾಮಾಜದಲ್ಲಿ ಮಹಿಳೆ ಮೇಲಿನ ಹಿಂಸಾಚಾರವಂತೂ ಹೆಚ್ಚಾಗುತ್ತಲೇ ಇವೆ.

ಈ ನಡುವೆ ಮಹಿಳೆ ಮೇಲಿನ ಇಂತಹ ಅಕ್ರಮವನ್ನು ತಡೆಗಟ್ಟಲು ಮುಂದಾಗಿರುವ ರಾಂಚಿಯಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ಗುಲಾಬಿ ಬಣ್ಣದ ಆಟೋ ರಿಕ್ಷಾ ಸೇವೆ ಆರಂಭಿಸಲಾಗುತ್ತಿದೆ. ಜಾರ್ಖಂಡ್ ಟ್ರಾಫಿಕ್ ಪೊಲೀಸ್ ವಿಭಾಗವು ಈ ವಿನೂತನ ಯೋಜನೆ ಮುಂದಿಟ್ಟಿದೆ. ಪ್ರಸ್ತುತ 200ರಷ್ಟು ಇಂತಹ ಗುಲಾಬಿ ಬಣ್ಣದ ಆಟೋಗಳನ್ನು ರಸ್ತೆಗಿಳಿಸಲು ಗುರಿಯಿರಿಸಲಾಗಿದೆ.


ಪಿಂಕ್ ಲೈನ್ ರಿಕ್ಷಾ ಎಂದು ಅರಿಯಲ್ಪಡುವ ಈ ಆಟೋಗಳನ್ನು ಮಹಿಳೆಯರೇ ಡ್ರೈವಿಂಗ್ ಮಾಡುತ್ತಾರೆ. ಇದು ಮಹಿಳಾ ಡ್ರೈವರುಗಳ ಲಭ್ಯತೆಯನ್ನು ಅವಲಂಬಿಸಿರಲಿದೆ. ಹಾಗೊಂದು ವೇಳೆ ಮಹಿಳಾ ಡ್ರೈವರುಗಳ ಅಲಭ್ಯತೆ ಕಾಡಿದ್ದಲ್ಲಿ ಗುರುತು ಚೀಟಿ ಹೊಂದಿದ್ದ ಪುರುಷ ಡ್ರೈವರುಗಳನ್ನು ನೇಮಕ ಮಾಡುವ ಇರಾದೆಯೂ ಇದೆ.

ಪ್ರಸ್ತುತ ಆಟೋ ರಿಕ್ಷಾಗಳು ಜಿಪಿಎಸ್ ತಂತ್ರಜ್ಞಾನ ಹಾಗೂ ಪ್ಯಾನಿಕ್ ಬಟನ್ (ಅಲರ್ಟ್ ಸ್ವಿಚ್) ಕೂಡಾ ಹೊಂದಿರಲಿದೆ. ಇದು ಮಹಿಳಾ ಯಾತ್ರಿಕರಿಗೆ ಹೆಚ್ಚುವರಿ ಸುರಕ್ಷತೆ ದಯಪಾಲಿಸಲಿದೆ. ಇದರಿಂದ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಲ್ಲಿ ಪ್ಯಾನಿಕ್ ಬಟನ್ ಒತ್ತಬಹುದಾಗಿದೆ. ಈ ಸಂದರ್ಭದಲ್ಲಿ ರಿಕ್ಷಾದಲ್ಲಿ ಆಳವಡಿಸಲಾಗಿರುವ ಜಿಪಿಎಸ್ ಸಿಸ್ಟಂ ಮುಖಾಂತರ ಆಟೋ ರಿಕ್ಷಾವನ್ನು ತಕ್ಷಣ ಪತ್ತೆ ಹಚ್ಚಲು ಅಧಿಕಾರಿಗಳಿಗೆ ನೆರವಾಗಲಿದೆ. ಸ್ಥಳೀಯ ಸಾರಿಗೆ ಇಲಾಖೆಯಿಂದ ಮಾನ್ಯತೆಯ ಅಂತಿಮ ಘಟ್ಟದಲ್ಲಿರುವ ಈ ಪಿಂಕ್ ಲೈನ್ ಆಟೋ ಸರ್ವೀಸ್ ಸದ್ಯದಲ್ಲೇ ರಾಂಚಿ ನಗರದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

Most Read Articles

Kannada
English summary
In the light of the apparent increase in crimes against women the Jharkhand Traffic Police department has decided to introduce a dedicated auto rickshaw service for women in Ranchi. The Pink Line fleet of auto rickshaws with pink roofs will be a women only transport service, which will hopefully provide a safer option for women to commute in the city. 200 of these special vehicles are planned to be introduced.
Story first published: Saturday, April 20, 2013, 14:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X