45 ಮಂದಿಯ ಬಲಿತೆಗೆದುಕೊಂಡ ವೋಲ್ವೋ ಬಸ್ ಓವರ್‌ಸ್ಪೀಡ್?

ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ಖಾಸಗಿ ಜಬ್ಬಾರ್ ಟ್ರಾವೆಲ್ಸ್‌ನ ವೋಲ್ವೋ ಬಸ್ ಆಂಧ್ರ ಪ್ರದೇಶದ ಮೆಹಬೂಬ್ ನಗರದ ಬಳಿ ಇಂದು (ಬುಧವಾರ) ಮುಂಜಾನೆ 5.20ರ ಸುಮಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 45ರಷ್ಟು ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಈ ಮೂಲಕ ದೀಪಾವಳಿ ಆಚರಣೆಗೆಂದು ಊರಿಗೆ ಹೊರಟ್ಟಿದ್ದ ಪ್ರಯಾಣಿಕರು ಯಮರಾಯನ ಪಾಲಾಗಿದ್ದರು.

ಮೆಹಬೂಬನಗರದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಘಟನೆ ನಡೆದಿತ್ತು. ದುರ್ಘಟನೆ ಎಷ್ಟು ಭೀಕರವಾಗಿತ್ತೆಂದರೆ ಸತ್ತವರ ದೇಹಗಳು ಗುರುತಿಸಲಾಗಷ್ಟು ಕರಕಲಾಗಿತ್ತು. ಬಸ್ಸು ಇನ್ನೂ ಅರ್ಧ ತಾಸಿನಷ್ಟು ಯಾತ್ರೆ ಪೂರೈಸಿದ್ದರೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಗುರಿ ತಲುಪುತ್ತಿದ್ದರು.

ಓವರ್‌ಸ್ಪೀಡ್‌ನಲ್ಲಿ ಚಲಿಸುತ್ತಿದ್ದ ವೋಲ್ವೋ ಬಸ್ ಎದುರುನಿಂದ ಸಂಚರಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡುವ ಗೋಜಿಗೆ ಹೋಗಿ ರಸ್ತೆ ಬದಿಯಲ್ಲಿದ್ದ ಅಡಿಗಾಲುವೆಯ ತಡೆಗೋಡೆಗೆ ಢಿಕ್ಕಿಯಾದರ ಪರಿಣಾಮ ಡೀಸೆಲ್ ಟ್ಯಾಂಕ್ ಸೋರಿಕೆಯುಂಟಾಗಿ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.

ಓವರ್‌ಸ್ಪೀಡ್

ಓವರ್‌ಸ್ಪೀಡ್

ಚಾಲಕರ ಮಿತಿ ಮೀರಿದ ಚಾಲನೆಯಿಂದ ಅಪಘಾತ ಸಂಭವಿಸಿರಬಹುದೇ ಎಂಬ ಶಂಕೆ ಬಲವಾಗಿ ಮೂಡಿಬರುತ್ತಿದೆ. ಅಪಘಾತಕ್ಕೀಡಾದ ಬಸ್‌ನ ತುರ್ತು ನಿರ್ಗಮನ ಕಿಟಕಿಯೂ ಸೇರಿದಂತೆ ಬಾಗಿಲು ಕೂಡ ಲಾಕ್ ಆಗಿದ್ದುದರಿಂದ, ಪ್ರಯಾಣಿಕರಿಗೆ ಹೊರಬರಲಾಗಲಿಲ್ಲ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಬಸ್ ಅಪಘಾತದ ಸಂದರ್ಭದಲ್ಲಿ 120 ಕೀ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ.

ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಂ

ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಂ

ಬಸ್ಸಿಗೆ ಬೆಂಕಿ ತಗುಲಿದಾಗ ಎಲ್ಲ ಪ್ರಯಾಣಿಕರು ನಿದ್ರಿಸುತ್ತಿದ್ದರು. ತಕ್ಷಣ ಜಾಗೃತರಾದ ಪ್ರಯಾಣಿಕರು ಕಟಕಿ ಗಾಜನ್ನು ಒಡೆಯಲು ಪ್ರಯತ್ನಿಸಿದ್ದರು. ಆದರೆ ಬಸ್ಸಿನ ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಂ (Automatic locking system) ಲಾಕ್ ಆಗಿದ್ದರಿಂದ ಪ್ರಯಾಣಿಕರಿಗೆ ಬಸ್ಸಿನೊಳಗಡೆ ಸಿಲುಕಿಕೊಂಡರು.

ತುರ್ತು ಬಾಗಿಲು ಒಡೆಯುವ ಪ್ರಯತ್ನ

ತುರ್ತು ಬಾಗಿಲು ಒಡೆಯುವ ಪ್ರಯತ್ನ

ಸತ್ತವರ ಪೈಕಿ ಬಹುತೇಕ ಶವಗಳು ಬಸ್ಸಿನ ಹಿಂಭಾಗದಿಂದಲೇ ಲಭಿಸಿದ್ದವು. ಇದು ಪ್ರಯಾಣಿಕರು ಬಸ್ಸಿನ ತುರ್ತು ಬಾಗಿಲನ್ನು ಒಡೆಯುವ ಪ್ರಯತ್ನದಲ್ಲಿ ಮುಂದಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಓವರ್ ಡ್ಯೂಟಿ ಅಥವಾ ಅನುಭವದ ಕೊರತೆ ಇರಲಿಲ್ಲ

ಓವರ್ ಡ್ಯೂಟಿ ಅಥವಾ ಅನುಭವದ ಕೊರತೆ ಇರಲಿಲ್ಲ

ಒಟ್ಟಾರೆಯಾಗಿ ಖಾಸಗಿ ಸಂಚಾರಿ ಬಸ್ಸು ಚಾಲಕರಿಗೆ ಸಾಕಷ್ಟು ವಿಶ್ರಾಂತಿ ಹಾಗೂ ನಿದ್ದೆಯ ಕೊರತೆಯಿತ್ತೇ ಎಂಬದನ್ನು ಸಹ ತನಿಖೆಯಾಗಬೇಕಿದೆ. ಅಲ್ಲದೆ ಹಬ್ಬದ ಸಂದರ್ಭದಲ್ಲಿ ಓವರ್ ಡ್ಯೂಟಿ ಹಾಕಲಾಗಿತ್ತೇ ಎಂಬುದು ಕೂಡಾ ಪೊಲೀಸರು ತನಿಖೆ ಮಾಡಬೇಕಿದೆ. ಹಾಗಿದ್ದರೂ ಸದ್ಯದ ಮಾಹಿತಿ ಪ್ರಕಾರ ಚಾಲಕ ಅತಿಯಾದ ಕೆಲಸ ಅಥವಾ ಅನನುಭವಿ ಆಗಿರಲಿಲ್ಲ ಎಂಬುದು ತಿಳಿದು ಬಂದಿದೆ.

ಸ್ಪೀಡ್ ಲಿಮಿಟ್ ಯಾಕೆ ಬೇಕು?

ಸ್ಪೀಡ್ ಲಿಮಿಟ್ ಯಾಕೆ ಬೇಕು?

ಬಹಳ ಹಿಂದಿನಿಂದಲೇ ಬಸ್ಸುಗಳಿಗೆ ಸ್ಪೀಡ್ ಲಿಮಿಟ್ ಜಾರಿಯಾಗಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಈ ಮೂಲಕ ಸ್ಪೀಡ್ ಲಿಮಿಟ್ ಮೀರದಂತೆ ನೋಡಿಕೊಳ್ಳುವ ಮೂಲಕ ಮುಗ್ಧ ಜನತೆಯ ಜೀವವನ್ನು ಕಾಪಾಡಿಕೊಳ್ಳಬಹುದಾಗಿದೆ.

ಸರ್ವೀಸ್

ಸರ್ವೀಸ್

ಅಷ್ಟೇ ಯಾಕೆ ಬಸ್ಸಿನ ನಿರ್ವಹಣೆ ಬಗ್ಗೆಯೂ ಪರಿಶೀಲಿಸನೆಯಾಗಬೇಕಿದೆ. ಹಾಗೆಯೇ ರಿ ಥ್ರೆಡ್ ಮಾಡಿದ ಚಕ್ರಗಳ ಬಳಕೆ ಸಹ ಅಪಾಯಕಾರಿ ಎಂಬುದು ಕಂಡುಬಂದಿದೆ.

ಇಬ್ಬರು ಚಾಲಕರ ಅಗತ್ಯ

ಇಬ್ಬರು ಚಾಲಕರ ಅಗತ್ಯ

ಅಲ್ಲದೆ ದೀರ್ಘ ದೂರ ತೆರಳುವ ಬಸ್ಸುಗಳಲ್ಲಿ ಇಬ್ಬರು ಚಾಲಕರು, ನಿರ್ವಾಹಕ ಹಾಗೂ ಕ್ಲೀನರ್ ಇರುವುದನ್ನು ಪರಿಶೀಲಿಸಬೇಕಾಗಿದೆ. ಒಟ್ಟಾರೆಯಾಗಿ ಇಂತಹ ಕರುಣಾಜನಕ ಘಟನೆ ಮರುಕಳಿಸದಿರಲಿ. ಈ ನಿಟ್ಟಿನಲ್ಲಿ ಸರಕಾರ ಕಟ್ಟುನಿಟ್ಟಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಸಹಾಯವಾಣಿ ಸಂಖ್ಯೆ:

ಸಹಾಯವಾಣಿ ಸಂಖ್ಯೆ:

9494600100,

08542-245927,

245930, 245932.

ಅವಸರವೇ ಅಪಘಾತಕ್ಕೆ ಕಾರಣ

ವೀಡಿಯೋ ವೀಕ್ಷಿಸಿ- ವೋಲ್ವೋ ಬಸ್ಸು ಎಷ್ಟು ವೇಗದಲ್ಲಿ ಚಲಿಸುತ್ತದೆ ಅಥವಾ ಚಾಲಕ ಎಷ್ಟೊಂದು ಅಜಾಗರೂಕತೆಯಿಂದ ಗಾಡಿ ಚಲಾಯಿಸುತ್ತಾರೆ ಎಂಬುದಕ್ಕೆ ಇಂದೊಂದು ನಿದರ್ಶನ ಮಾತ್ರ. ಹಾಗೊಂದು ವೇಳೆ ಅಪರಿಮಿತ ವೇಗದಲ್ಲಿ ವಾಹನ ಚಲಾಯಿಸುವಾಗ ತುರ್ತು ಪರಿಸ್ಥಿತಿ ಎದುರಾದ್ದಲ್ಲಿ ಬಚಾವಾಗಲು ಹೇಗೆ ಸಾಧ್ಯ? ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ವ್ಯಕ್ತಪಡಿಸಿರಿ. ನೆನಪಿರಲಿ ಅವಸರವೇ ಅಪಘಾತಕ್ಕೆ ಕಾರಣ!

Most Read Articles

Kannada
English summary
We look into the drama which has killed 44 passengers, who boarded Jabbar travels bus from Bangalore to Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X