ಸ್ವಯಂಚಾಲಿತ ಕಾರಿನ ಒಳಮೈ ಹೇಗಿರಬೇಕು?

By Nagaraja

ನಾವು ಈಗಾಗಲೇ ಸ್ವಯಂಚಾಲಿತ ಕಾರುಗಳ ಬಗ್ಗೆ ವಿವರವಾಗಿ ತಿಳಿದುಕೊಂಡಿರುತ್ತೇವೆ. ಆದರೆ ಆಟೋಮ್ಯಾಟಿಕ್ ಕಾರುಗಳ ಒಳಮೈ ಹೇಗಿರಬಹುದು ಎಂಬುದರ ಬಗ್ಗೆ ಮಾಹಿತಿ ನಿಮ್ಮಲಿದೆಯೇ? ಚಿಂತೆ ಬೇಡ, ಸ್ವಿಜರ್ಲೆಂಡ್ ಮೂಲದ ವಾಹನ ಉತ್ತೇಜಕ ಸಂಸ್ಥೆಯಾಗಿರುವ ರಿನ್ ಸ್ಪೀಡ್, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಪ್ರಯತ್ನ ಮಾಡಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ನಾವೀನ್ಯತೆಯ ಸಂಕೇತವಾಗಿರುವ ಸ್ವಯಂಚಾಲಿತ ಕಾರುಗಳು ಭವಿಷ್ಯದ ಸಂಚಾರ ವಾಹಕದಲ್ಲಿ ಪ್ರಮುಖ ಪಾತ್ರವೆನಿಸಲಿದೆ. ಇದರಂತೆ 2014ರ ಜಿನೆವಾ ಮೋಟಾರ್ ಶೋದಲ್ಲಿ ರಿನ್ ಸ್ಪೀಡ್ ಹೊಸ ಕಾನ್ಸೆಪ್ಟ್‌ವೊಂದನ್ನು ಪ್ರದರ್ಶಿಸಲಿದೆ. ಇದು ರಿನ್‌ಸ್ಪೀಡ್ ಎಕ್ಸ್‌ಚೇಂಜ್ ಕಾನ್ಸೆಪ್ಟ್ (Xchange) ಎನಿಸಿಕೊಳ್ಳಲಿದೆ.


ಇದರಲ್ಲಿ ಗಮನಾರ್ಹ ಅಂಶವೆಂದರೆ ಸ್ವಯಂಚಾಲಿತ ಕಾರುಗಳು ಹೇಗಿರಬೇಕೆಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಸಾಮಾನ್ಯ ಕಾರುಗಳಿಗಿಂತ ವಿಭಿನ್ನವಾಗಿ ಇದು ಪರಸ್ಪರ ಮುಖ ಮಾಡಿಕೊಂಡಿರುವ ಆಸನ ವ್ಯವಸ್ಥೆ ಹೊಂದಿರಲಿದೆ. ಉಲ್ಲದೆ ಸ್ಟೀರಿಂಗನ್ನು ಕಾರಿನ ನಡುವೆ ಲಗತ್ತಿಸಿರುವುದನ್ನು ನೀವು ಚಿತ್ರದಲ್ಲಿ ನೋಡಬಹುದಾಗಿದೆ.

ಗೂಗಲ್, ವೋಲ್ವೋ, ನಿಸ್ಸಾನ್ ಹಾಗೂ ಮರ್ಸಿಡಿಸ್ ಬೆಂಝ್ ಈಗಾಗಲೇ ತಮ್ಮ ಸ್ವಯಂಚಾಲಿತ ಕಾನ್ಸೆಪ್ಟ್‌ ಕಾರುಗಳೊಂದಿಗೆ ಮುಂದೆ ಬಂದಿರುವುದರಿಂದ ಈ ನೂತನ ಪರಿಕಲ್ಪನೆ ಎಷ್ಟರ ಮಟ್ಟಿಗೆ ಗಮನ ಸೆಳೆಯಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

Rinspeed XchangE Concept

ಇದು ಚಾಲಕ ರಹಿತ ಕಾರಾಗಿದ್ದರಿಂದ ಪ್ರಯಾಣಿಕರ ಸುಖ ಪ್ರಯಾಣದತ್ತ ಹೆಚ್ಚು ಗಮನ ಹರಿಸಲಾಗಿದೆ. ಅಲ್ಲದೆ ಹಲವಾರು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ. ಇನ್ನು ನೀವು ಬಯಸಿದ್ದಲ್ಲಿ ಸೀಟುಗಳನ್ನು ಯಥಾ ಸ್ಥಿತಿಗೆ ತರಬಹುದಾಗಿದೆ.
Most Read Articles

Kannada
English summary
Rinspeed, the automotive think tank based in Switzerland is known for its innovative and out of the box ideas. While its true most of these ideas haven't reached production we have to admit they are thoughtful and inspiring.
Story first published: Saturday, December 14, 2013, 13:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X