ಟಾಟಾದಿಂದ ಬರಲಿದೆ ಮತ್ತೊಂದು ಅಗ್ಗದ ಕಾರು!

ದೇಶಕ್ಕೆ ಅತಿ ಅಗ್ಗದ ಕಾರು ಪರಿಚಯಮಾಡಿಕೊಟ್ಟಿರುವ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಸದ್ಯದಲ್ಲೇ ಇನ್ನೊಂದು ಅಗ್ಗದ ಕಾರನ್ನು ಪರಿಚಯಿಸಲಿದೆ.

ನೂತನ ಕಾರು 'ನ್ಯಾನೋ' ತಲಹದಿಯಲ್ಲೇ ರೂಪುಗೊಳ್ಳಲಿದ್ದು, ಕಡಿಮೆ ದರದಲ್ಲಿ ದೇಶದ ಮಧ್ಯಮ ವರ್ಗದವರನ್ನು ತಲುಪಲಿದೆ. ಕಾಂಪೊಸಿಟ್ ಬಿಡಿಭಾಗಗಳನ್ನು ಬಳಸುವ ಮೂಲಕ ಅಲ್ಟ್ರಾ ಲೋ ಕಾಸ್ಟ್ ಕಾರನ್ನು (ಯುಎಲ್‌ಸಿಸಿ) ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ನ್ಯಾನೋ ಎಂಜಿನ್, ಸಸ್ಷೆಷನ್ ಹಾಗೂ ಸ್ಟೀರಿಂಗ್ ಕಾರ್ಯವಿಧಾನಗಳು ಬಳಕೆಯಾಗಲಿದೆ.

ಇದೀಗ ಬಂದ ಮಾಹಿತಿ ಪ್ರಕಾರ ನೂತನ ಎಂಟ್ರಿ ಲೆವೆಲ್ ಮಾದರಿಯು ಇಟಲಿ ವಾಹನ ವಿನ್ಯಾಸಕಾರನಾಗಿರುವ ಮಾರ್ಸೆಲೊ ಗ್ಯಾಂಡಿನಿಯವರ 'ಮೆದುಳಿನ ಕೂಸು' ಎಂದೆನಿಸಿಕೊಳ್ಳಲಿದೆ. ಈ ಹೆಸರಾಂತ ವಿನ್ಯಾಸಕಾರ ಲಂಬೋರ್ಗಿನಿಗಳಂತಹ ಸೂಪರ್ ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ.

ನ್ಯಾನೋಗಿಂತಲೂ ಅಗ್ಗವೇ..?
ಇನ್ನು ದರ ತುಲನೆ ಮಾಡಿ ನೋಡಿದರೆ ವಿಶ್ವದ ಅತಿ ಅಗ್ಗದ ಕಾರಾದ ನ್ಯಾನೋಗಿಂತಲೂ ಸ್ವಲ್ಪ ದುಬಾರಿಯಾಗಿರಲಿದೆ. ಹಾಗೆಯೇ ದೇಶಿಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿಗಳ ಪ್ರಕಾರ, ನ್ಯಾನೋ ಮಾರಾಟವನ್ನು ಉತ್ತೇಜಿಸುವುದು ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಆದ್ಯತೆಯಾಗಿರಲಿದೆ. ಇದರ ಬೆನ್ನಲ್ಲೇ ಹೊಸ ಸಹೋದರನ ಆಗಮನವಾಗಲಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಟಾಟಾ ಸಂಸ್ಥೆಗೆ ನೆರವಾಗಲಿದೆ.

ಕಾಂಪೊಸಿಟ್ ವಿನ್ಯಾಸ ಪಡೆಯಲಿರುವದರಿಂದ ಸಾಂಪ್ರದಾಯಿಕ ಸ್ಟೀಲ್‌ನಿಂದ ತಯಾರಿಸಲ್ಪಟ್ಟ ಕಾರಿಗಿಂತಲೂ ಸ್ವಲ್ಪ ಹಗುರವಾಗಲಿದೆ. ಇನ್ನು ಪರಿಸರ ಸ್ನೇಹಿ ಆಗಲಿರುವ ಇಂತಹ ಕಾರುಗಳು ಹೆಚ್ಚಿನ ಇಂಧನ ಕ್ಷಮತೆಯನ್ನು ನೀಡಲಿದೆ.

Most Read Articles

Kannada
English summary
Tata Motors, the country’s largest automobile manufacturer, is developing a new Ultra Low Cost Car (ULCC) that will use composite material and will share Nano’s engine, suspension and steering mechanisms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X