ದಾರಿಬಿಡಿ ಬರುತ್ತಿದೆ ಟಾಟಾ ನ್ಯಾನೋ ಡೀಸೆಲ್ ಕಾರು

By Nagaraja

ಎಲ್ಲ ಹಂತದಲ್ಲಿಯೂ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ಗೆ ನೂತನ ವರ್ಷವು ಹೊಸತನವನ್ನು ನೀಡಲಿದೆ. ಈ ಮೊದಲೇ ತಿಳಿಸಿರುವುವಂತೆಯೇ ಬಹುನಿರೀಕ್ಷಿತ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಟಾಟಾ ಮೋಟಾರ್ ಎರಡು ಫಾಲ್ಕನ್ ಯೋಜನೆಗಳನ್ನು ಬಹಿರಂಗಪಡಿಸಲಿದೆ. ಇದರಲ್ಲಿ ಮುಂದಿನ ತಲೆಮಾರಿನ ಟಾಟಾ ವಿಸ್ಟಾ ಹ್ಯಾಚ್‌ಬ್ಯಾಕ್ ಮತ್ತು ಮಾಂಝಾ ಸೆಡಾನ್ ಪ್ರಮುಖವಾಗಿದೆ.

ಈ ನಡುವೆ ಈಗಾಗಲೇ ಮಾರುಕಟ್ಟೆಯಲ್ಲಿ ಜನ ಪ್ರೀತಿ ಗಳಿಸಿರುವ ಟಾಟಾ ನ್ಯಾನೋ ಹೊಸ ಸ್ವರೂಪ ಪಡೆಯುತ್ತಿದೆ. ಹೌದು, ಟಾಟಾ ನ್ಯಾನೋ ಡೀಸೆಲ್ ಕಾರು ದೆಹಲಿ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ. ಈ ನಡುವೆ ಹಲವು ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸಿಕ್ಕಿ ಬಿದ್ದಿರುವ ಟಾಟಾ ನ್ಯಾನೋ ಡೀಸೆಲ್ ಕಾರು ಫೆಬ್ರವರಿ ತಿಂಗಳಲ್ಲೇ ಲಾಂಚ್ ಆಗಲಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

Tata Nano Diesel

ಈ ಮೂಲಕ ದೇಶದಲ್ಲೇ ಅತ್ಯಂತ ಕಡಿಮೆ ಇಂಧನ ಸಾಮರ್ಥ್ಯವುಳ್ಳ 800 ಸಿಸಿ ಡೀಸೆಲ್ ಎಂಜಿನ್ ಕಾರು ಲಾಂಚ್ ಮಾಡಿದ ಹಿರಿಮೆಗೆ ನ್ಯಾನೋ ಪಾತ್ರವಾಗಲಿದೆ. ಕಂಪನಿಯ ಪ್ರಕಾರ ಇದು ಪ್ರತಿ ಲೀಟರ್‌ಗೆ 35 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಪ್ರಸ್ತುತ ನ್ಯಾನೋ ಪೆಟ್ರೋಲ್ ಹಾಗೂ ಸಿಎನ್‌ಜಿ ವೆರಿಯಂಟ್‌ಗಳು 1.5 ಲಕ್ಷ ರು.ಗಳಿಂದ 2.77 ಲಕ್ಷ ರು.ಗಳ ಅಸುಪಾಸಿನಲ್ಲಿ ದೊರಕುತ್ತದೆ. ಹಾಗಿದ್ದರೂ ನ್ಯಾನೋ ಡೀಸೆಲ್ ಇನ್ನು ಸ್ವಲ್ಪ ದುಬಾರಿಯೆನಿಸಲಿದ್ದು, ಮೂರು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

Most Read Articles

Kannada
English summary
Breaking cover at the Auto Expo will be the all new 2014 Nano which will be extensively facelifted and joining small hatchback variant lineup for the first time since its inception will be a diesel model.
Story first published: Saturday, December 28, 2013, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X