ಟೆಸ್ಲಾ ವಿದ್ಯುತ್ ಚಾಲಿತ ಕಾರು ಆಗಮನ ಸುನಿಶ್ಚಿತ

By Nagaraja

ಟೆಸ್ಲಾ ಮಾಡೆಲ್ ಎಸ್ ಅದ್ಭುತ ವಿದ್ಯುತ್ ಚಾಲಿತ ಕಾರು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ದರದ ವಿಚಾರಕ್ಕೆ ಬಂದಾಗ ಮಾತ್ರ ವಿಮರ್ಶಕರಿಂದ ಬಾರಿ ಟೀಕೆ ಎದುರಿಸಬೇಕಾಯಿತು.

ಯಾಕೆಂದರೆ ಟೆಸ್ಲಾ ಎಲೆಕ್ಟ್ರಿಕ್ ಕಾರು 60 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಈ ಕುರಿತು ಗಂಭೀರ ಚಿಂತನೆ ನಡೆಸಿರುವ ಕಂಪನಿಯು ನೂತನ ಎಂಟ್ರಿ ಲೆವೆಲ್ ವಿದ್ಯುತ್ ಚಾಲಿತ ಕಾರು ಪರಿಚಯಿಸಲು ಗುರಿಯಿರಿಸಿಕೊಂಡಿದೆ.

ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಕಾಪಾಡಿಕೊಳ್ಳಲು ಕಂಪನಿಗೆ ನೆರವಾಗಲಿದೆ. ಇದು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರಿಗೆ ಸಾಮ್ಯತೆ ಹೊಂದಿರಲಿದೆ.

ಸದ್ಯದಲ್ಲೇ ಎಂಟ್ರಿ ಲೆವೆಲ್ ಲಾಂಚ್ ಮಾಡುವುದಾಗಿ ಟೆಸ್ಲಾ ಸಿಇಒ ಇಲಾನ್ ಮಸ್ಕ್ ತಿಳಿಸಿದ್ದಾರೆ. 2014ರ ವೇಳೆಗೆ ನೂತನ ಎಲೆಕ್ಟ್ರಿಕ್ ಕಾರು ಸ್ಪರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಅಪ್ಪಳಿಸುವ ನಿರೀಕ್ಷೆಯಿದೆ.

Most Read Articles

Kannada
English summary
Tesla Model S is a great electric car, which has gained the affection of critics and the love of owners will lauch entry level electric car.
Story first published: Thursday, May 30, 2013, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X