ಟೊಯೊಟಾದಿಂದ 3,70,000 ಕಾರುಗಳು ವಾಪಾಸ್

By Nagaraja

ಜಪಾನ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಮೋಟಾರ್, ಹೈಬ್ರಿಡ್ ಸೇರಿದಂತೆ ಜಾಗತಿಕವಾಗಿ 3,70,000 ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಹೈಬ್ರಿಡ್ ಸಿಸ್ಟಂ ಇನ್ವರ್ಟರ್‌‌ನಲ್ಲಿ ಕಾಣಿಸಿಕೊಂಡಿರುವ ತೊಂದರೆಯಿಂದಾಗಿ ಲೆಕ್ಸಾಸ್ ಆರ್‌ಎಕ್ಸ್400ಎಚ್ ಸೇರಿದಂತೆ 2,00,000 ಹೈಬ್ರಿಡ್ ಎಸ್‌ಯುವಿ ಕಾರುಗಳನ್ನು ಜಾಗತಿಕವಾಗಿ ಹಿಂಪಡೆಯಲಾಗುತ್ತಿದೆ. ಹಾಗೆಯೇ ಎಂಜಿನ್ ಜೋಡಣೆ ಕಾರ್ಯದಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ಲೆಕ್ಸಾಸ್ ಜಿಎಸ್350 ಮತ್ತು ಐಎಸ್350 ಸೇರಿದಂತೆ ಜಾಗತಿಕವಾಗಿ 169,000ದಷ್ಟು ಕಾರುಗಳನ್ನು ವಾಪಾಸ್ ಪಡೆಯಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಎರಡೂ ಪ್ರಕರಣಗಳಲ್ಲೂ ಇದುವರೆಗೆ ಯಾವುದೇ ಅಪಘಾತ ದಾಖಲಾಗಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ವಾಹನಗಳನ್ನು ರಿಕಾಲ್ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಸರಿಪಡಿಸಿಕೊಡಲಾಗುವುದು ಎಂದಿದೆ.


ಹೈಬ್ರಿಡ್ ಸಿಸ್ಟಂ ಇನ್ವರ್ಟರ್ ಸಮಸ್ಯೆಯಿಂದಾಗಿ ಉತ್ತರ ಅಮೆರಿಕಾದಲ್ಲಿ ಮಾತ್ರವಾಗಿ 37,000 ಹಾಗೂ ಯುರೋಪ್ ಮತ್ತು ತವರೂರಾದ ಜಪಾನ್‌ನಲ್ಲಿ 15,000ದಷ್ಟು ಕಾರುಗಳನ್ನು ಹಿಂಪಡೆಯಲಾಗುತ್ತಿದೆ. ಇದರಲ್ಲಿ 2005 ಮಾರ್ಚ್‌ನಿಂದ 2011 ಜೂನ್ ಅವಧಿಯಲ್ಲಿ ತಯಾರಾದ ಲೆಕ್ಸಾಸ್ ಆರ್‌ಎಕ್ಸ್400ಎಚ್ ಎಸ್‌ಯುವಿ ಮತ್ತು 2005 ಫೆಬ್ರವರಿಯಿಂದ 2007ರ ಮೇ ವರೆಗಿನ ಅವಧಿಯಲ್ಲಿ ಉತ್ಪಾದನೆಯಾದ ಹೈಲ್ಯಾಂಡರ್ ಎಸ್‌ಯುವಿಗಳು ಸೇರಿಕೊಂಡಿವೆ.

ನಿಮ್ಮ ಮಾಹಿತಿಗಾಗಿ ಲೆಕ್ಸಾಸ್, ಟೊಯೊಟಾದ ಐಷಾರಾಮಿ ಬ್ರಾಂಡ್ ಆಗಿದ್ದು, ವಿಶ್ವದ್ಯಾಂತ ಒಳ್ಳೆಯ ಹೆಸರು ಕಾಪಾಡಿಕೊಂಡಿದೆ. ಹೈಬ್ರಿಡ್ ಸಿಸ್ಟಂ ಇನ್ವರ್ಟರ್ ಸಮಸ್ಯೆಯಿಂದಾಗಿ ಕಾರು ಸಡನ್ ಆಗಿ ಆಫ್ ಆಗುತ್ತಿದ್ದು, ಪ್ರಸ್ತುತ ಮೊಡ್ಯೂಲ್ ಬದಲಾಯಿಸಲು ಮೂರರಿಂದ ನಾಲ್ಕು ತಾಸುಗಳಷ್ಟು ಸಮಯ ತಗುಲಲಿದೆ ಎಂದು ಟೊಯೊಟಾ ತಿಳಿಸಿದೆ.

ಹಾಗೆಯೇ ಎಂಜಿನ್ ಜೋಡಣೆ ಪ್ರಕ್ರಿಯೆಯಲ್ಲಿ ಸಮಸ್ಯೆ ತಲೆದೋರಿರುವುದರಿಂತ 2005 ಜುಲೈನಿಂದ 2011ರ ಜುಲೈ ವರೆಗೆ ತಯಾರಿಯಾದ ಲೆಕ್ಸಾಸ್ ಜಿಎಸ್350, 2005 ಆಗಸ್ಟ್‌ನಿಂದ 2011ರ ವರೆಗೆ ಉತ್ಪನ್ನವಾದ ಲೆಕ್ಸಾಸ್ ಐಎಸ್350 ಮತ್ತು 2010 ಜೂನ್‌ನಿಂದ 2011 ಜುಲೈ ಅವಧಿಯಲ್ಲಿ ತಯಾರಿಯಾದ ಲೆಕ್ಸಾಸ್ ಐಎಸ್‌350ಸಿ ಕಾರುಗಳನ್ನು ಸಹ ಹಿಂಪಡೆಯಲು ಟೊಯೊಟಾ ನಿರ್ಧರಿಸಿದೆ.

Most Read Articles

Kannada
English summary
Japanese car giant Toyota Motor said it was recalling some 370,000 vehicles worldwide over glitches that could cause them to stop mid-journey.
Story first published: Thursday, September 5, 2013, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X