ನಿಸ್ಸಾನ್ ಬೆನ್ನಲ್ಲೇ ಟೊಯೊಟಾ ಕಾರುಗಳು ಗ್ಯಾರೇಜ್‌ಗೆ ವಾಪಾಸ್

By Nagaraja

ನಿಸ್ಸಾನ್ ಬೆನ್ನಲ್ಲೇ ಮತ್ತೊಂದು ಜಪಾನ್ ಮೂಲದ ಕಾರು ಸಂಸ್ಥೆಯಾದ ಟೊಯೊಟಾ, ಭಾರತದಿಂದ 1000ದಷ್ಟು ಕರೊಲ್ಲಾ ಆಲ್ಟೀಸ್ ಕಾರುಗಳನ್ನು ವಾಪಾಸ್ ಪಡೆದುಕೊಳ್ಳಲು ನಿರ್ಧರಿಸಿದೆ.

ಡ್ರೈವ್ ಶಾಫ್ಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ 1,000ದಷ್ಟು ಡೀಸೆಲ್ ಎಂಜಿನ್ ಆಲ್ಟೀಸ್ ಸೆಡಾನ್ ಮಾಡೆಲ್‌ಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ನಿಸ್ಸಾನ್ ಕೂಡಾ ದಷ್ಟು ಸನ್ನಿ ಹಾಗೂ ಮೈಕ್ರಾ ಆವೃತ್ತಿಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು.

ಈ ಮೂಲಕ ಪ್ರಸಕ್ತ ವರ್ಷದಲ್ಲೇ ಎರಡನೇ ಬಾರಿಗೆ ತನ್ನ ಆವೃತ್ತಿಗೆ ಹಿಂಪಡೆಯುತ್ತಿದೆ. ಕಳೆದ ಎಪ್ರಿಲ್‌ನಲ್ಲಿ ಏರ್ ಬ್ಯಾಗ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕರೊಲ್ಲಾ ಸೆಡಾನ್ ಮಾಡೆಲ್‌ಗಳನ್ನು ಹಿಂಪಡೆದಿತ್ತು.

2012 ಆಗಸ್ಟ್ 3ರಿಂದ 2013 ಫೆಬ್ರವರಿ 14 ನಡುವಣ ಅವಧಿಯಲ್ಲಿ ತಯಾರಿಸಲಾದ ಆಲ್ಟೀಸ್ ಮಾಡೆಲ್‌ಗಳಲ್ಲಿ ಡ್ರೈವ್ ಶಾಫ್ಟ್ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಸಂಪೂರ್ಣ ಉಚಿತವಾಗಿ ಸರಿಪಡಿಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ. ಪ್ರಸ್ತುತ ಕೆಲಸಕ್ಕೆ ಎರಡು ತಾಸಿನ ಅಗತ್ಯವಿದೆ. ಈ ಮೂಲಕ ಗ್ರಾಹಕರಿಗೆ ಶ್ರೇಷ್ಠ ಸೇವೆಯನ್ನು ಖಚಿತಪಡಿಸಿಕೊಳ್ಳುತ್ತಿದೆ.

Most Read Articles

Kannada
English summary
After Nissan its now another Japanese car maker which has issued a recall in India this month. Toyota has recalled some 1,000 diesel engined Altis sedans due to a suspected problem with the driveshaft.
Story first published: Monday, May 27, 2013, 14:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X