ಯುಗಾದಿ ಪ್ರಯುಕ್ತ ರಾಜ್ಯದ ವಿವಿದೆಡೆಗಳಿಗೆ 500 ವಿಶೇಷ ಬಸ್

By Nagaraja

ಯುಗ ಯುಗಾದಿ ಕಳೆದರೂ 'ಯುಗಾದಿ' ಮರಳಿ ಬರುತ್ತಲೇ ಇರುತ್ತವೆ. ನಿಮಗೆಲ್ಲರಿಗೂ ಕನ್ನಡ ಡ್ರೈವ್ ಸ್ಪಾರ್ಕ್ ವತಿಯಿಂದ ಹೊಸ ವರುಷದಿ ಹೊಸ ಹರುಷವ ಪ್ರತಿ ವರುಷ ತರುವ ಬೇವು-ಬೆಲ್ಲ ಹಂಚುವ ಸಾಂಪ್ರದಾಯಿಕ ಯುಗಾದಿ ಹಬ್ಬದ ಶುಭಾಯಶಗಳು..!

ಈ ಯುಗಾದಿ ವೇಳೆಯಲ್ಲಿ ಬೆಂಗಳೂರಿನಂತಹ ಮಹಾ ಪಟ್ಟಣದಲ್ಲಿ ಕೆಲಸ ಮಾಡುವವರು ತಮ್ಮ ಊರುಗಳಿಗೆ ತೆರಳಿ ಕುಟುಂಬ ಸದ್ಯಸರೊಂದಿಗೆ ಹಬ್ಬ ಆಚರಿಸಿಕೊಳ್ಳುವ ತವಕದಲ್ಲಿದ್ದಾರೆ. ಇದರಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) 300ರಿಂದ 500 ವಿಶೇಷ ಬಸ್ ಸರ್ವೀಸ್‌ಗಳನ್ನು ಆರಂಭಿಸಿದೆ.

ಎಪ್ರಿಲ್ 10 ಬುಧವಾರದಿಂದ 13ರ ವರೆಗೆ ಈ ವಿಶೇಷ ಬಸ್‌ಗಳು ರಾಜ್ಯದ ವಿವಿಧ ಪ್ರದೇಶಗಳಿಗೆ ಓಡಾಡಲಿದೆ. ಈ ಮೂಲಕ ಪ್ರಯಾಣಿಕರ ಶುಭ ಪ್ರಯಾಣವನ್ನು ಕೆಎಸ್‌ಆರ್‌ಟಿಸಿ ಆಶಿಸುತ್ತಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆಳಗಡೆಯ ಸ್ಥಳಗಳಿಗೆ ಹೆಚ್ಚುವರಿ ಬಸ್ ಸರ್ವಿಸ್:
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳವಾಗಿ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಗುಲ್ಪರ್ಗ, ಬಳ್ಳಾರಿ, ಕೊಪ್ಪ, ಯಾದಗಿರಿ, ಬೀದರ್, ತಿರುಪತಿ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಸರ್ವೀಸ್ ನಡೆಸಲಿದೆ.

ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ಧಾಣದಿಂದ-
ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಸಂಚಾರ ಬೆಳೆಸಲಿದೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಾಯುವ್ಯ ಕರ್ನಾಟಕ ಕಡೆಗೆ:
ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಗೋಕರ್ಣ, ಶಿರಸಿ, ಕಾರವಾರ

ಈಶಾನ್ಯ ಕರ್ನಾಟಕ ಕಡೆಗೆ:
ಗುಲ್ಬರ್ಗ, ಬಳ್ಳಾರಿ, ರಾಯಚೂರು, ಹೊಸಪೇಟೆ, ಕೊಪ್ಪಳ, ಯಾದಗಿರಿ, ಬೀದರ್

ತಮಿಳುನಾಡು ಹಾಗೂ ಆಂಧ್ರಪ್ರದೇಶ ಪ್ರದೇಶಗಳಿಗೂ ವಿಶೇಷ ಬಸ್ ಸೇವೆ:
ತಮಿಳುನಾಡಿನ ಮಧುರೈ, ಕುಂಬಕೋಣಂ, ತಿರುಚ್ಚಿ, ಚೆನ್ನೈ, ಕೊಯಬಂತ್ತೂರು ಹಾಗೂ ಆಂಧ್ರ ಪ್ರದೇಶದ ತಿರುಪತಿ, ವಿಜಯವಾಡ ಮುಂತಾದ ಪ್ರದೇಶಗಳಿಗೆ ಶಾಂತಿ ನಗರ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳು ಲಭ್ಯವಿರುತ್ತದೆ.

ಮುಂಗಡವಾಗಿ ಕಾಯ್ದಿರಿಸಿ:
ಪ್ರಯಾಣಿಕರ ಅನುಕೂಲಕ್ಕಾಗಿ ಟಿಕೆಟ್‌ಗಳನ್ನು ಮುಗಂಡವಾಗಿ ಕಾಯ್ದಿರಿಸಿಕೊಳ್ಳುವ ಅವಕಾಶ ಲಭ್ಯವಿದ್ದು, ಸಾರ್ವಜನಿಕರು ಪಿಕ್ ಅಪ್ ಪಾಯಿಂಟ್‌ಗಳನ್ನು ಯಾವುದೇ ಗೊಂದಲವಿಲ್ಲದೆ ಗಮನಿಸುವಂತೆ ಕೋರಲಾಗಿದೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ (ksrct.in). ಮೊಬೈಲ್‌‍ನಲ್ಲಿ ಬುಕ್ ಮಾಡಲು 'm.ksrtc.in'ಗೆ ಭೇಟಿ ಕೊಡಿರಿ...

Most Read Articles

Kannada
English summary
On account of Ugadi festival, for the benefit of passengers KSRTC has arranged 300 to 500 additional buses daily from April 10 to April 13, 2013 to different places.
Story first published: Wednesday, April 10, 2013, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X