2014 ಹೋಂಡಾ ಸಿಟಿ ಭರ್ಜರಿ ಅನಾವರಣ

ಗ್ರಾಹಕರ ಬಹು ಬೇಡಿಕೆಯ ಕಾರಾಗಿರುವ ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಕೊನೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾಗತಿಕ ಅನಾವರಣ ಕಂಡಿದೆ. ಇಂದು ನಡೆದ ವೈಭವಪೂರಿತ ಕಾರ್ಯಕ್ರಮದಲ್ಲಿ 2014 ಸಿಟಿ ಸೆಡಾನ್ ಕಾರು ಅನಾವರಣಗೊಂಡಿದೆ. ಹಾಗೆಯೇ ಮುಂದಿನ ವರ್ಷಾರಂಭದಲ್ಲಿ ನೂತನ ಸಿಟಿ ಸೆಡಾನ್ ಕಾರು ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಪ್ರಮುಖವಾಗಿಯೂ ಹ್ಯುಂಡೈ ವರ್ನಾ ಪ್ರತಿಸ್ಪರ್ಧಿಯಾಗಿ ಹೋಂಡಾದ ನೂತನ ಸಿಟಿ ಕಾಣಿಸಿಕೊಳ್ಳಲಿದೆ. ಇದು ಹೋಂಡಾದ ವಿಶಿಷ್ಟ 'ಎಕ್ಸೈಟಿಂಗ್ ಎಚ್ ಡಿಸೈನ್‌' ವಿನ್ಯಾಸದಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ.

2014 ಹೋಂಡಾ ಸಿಟಿ ಭರ್ಜರಿ ಅನಾವರಣ

ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ನಲ್ಲೂ ಲಭ್ಯವಿರುವುದು ನೂತನ ಹೋಂಡಾ ಸಿಟಿ ವಿಶೇಷತೆಯಾಗಿರಲಿದೆ. ಇದು 1.5 ಲೀಟರ್ ಐಡಿಟೆಕ್ (iDTEC) ಡೀಸೆಲ್ ಮತ್ತು 1.5 ಲೀಟರ್ ಐವಿಟೆಕ್ (iVTEC) ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಅನುಕ್ರಮವಾಗಿ 98 ಬಿಎಚ್‌ಪಿ (200 ಎನ್‌ಎಂ ಟಾರ್ಕ್) ಮತ್ತು 116 ಬಿಎಚ್‌ಪಿ (146 ಎನ್‌ಎಂ ಟಾರ್ಕ್) ಉತ್ಪಾದಿಸುವ ಶಕ್ತಿ ಹೊಂದಿದೆ.

2014 ಹೋಂಡಾ ಸಿಟಿ ಭರ್ಜರಿ ಅನಾವರಣ

ಈ ಎರಡೂ ವೆರಿಯಂಟ್‌ಗಳು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಇದರ ಹೊರತಾಗಿ ಪೆಟ್ರೋಲ್‌ನಲ್ಲಿ ಐಚ್ಛಿಕ ಫೈವ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜತೆಗೆ ಪ್ಯಾಡೆಲ್ ಶಿಫ್ಟ್ ಲಭ್ಯವಿರಲಿದೆ. ಹೊರ ವಿನ್ಯಾಸವನ್ನು ಗಮನಿಸಿದ್ದಲ್ಲಿ ಇದರ ಸನ್ ರೂಫ್ ಪ್ರಮುಖ ಆಕರ್ಷಣೆಯಾಗಿರಲಿದೆ.

2014 ಹೋಂಡಾ ಸಿಟಿ ಭರ್ಜರಿ ಅನಾವರಣ

ಜತೆಗೆ 5 ಇಂಚುಗಳ ಎಲ್‌ಸಿಡಿ ಡಿಸ್‌ಪ್ಲೇ, ಬ್ಲೂಟೂತ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ಜತೆಗೆ 8 ಸ್ಪೀಕರುಗಳು ಲಭ್ಯವಿರಲಿದೆ. ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ಎಂಟು ಸ್ಪೀಕರ್, ನಾಲ್ಕು ಚಾರ್ಜಿಂಗ್ ಪಾಯಿಂಟ್, ಸನ್ ರೂಫ್, ಟಚ್ ಸ್ಕ್ರೀನ್ ಎಸಿ ಪ್ಯಾನೆಲ್, ಸ್ಟಾಟ್/ಸ್ಟಾಫ್ ಫಂಕ್ಷನ್ ಮತ್ತು ಕ್ರೂಸ್ ಕಂಟ್ರೋಲ್ ಇತರ ಪ್ರಮುಖ ಆಕರ್ಷಣೆಯಾಗಿರಲಿದೆ.

2014 ಹೋಂಡಾ ಸಿಟಿ ಭರ್ಜರಿ ಅನಾವರಣ

ಪ್ರಸ್ತುತ ಹೊಸ ಹೋಂಡಾ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಹಾಗಿದ್ದರೂ ದರಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಇದು ಬಿಡುಗಡೆ ವೇಳೆಯಷ್ಟೇ ಹೊರಬರಲಿದೆ.

2014 ಹೋಂಡಾ ಸಿಟಿ ಭರ್ಜರಿ ಅನಾವರಣ

ಪ್ರಮುಖವಾಗಿಯೂ ಹ್ಯುಂಡೈ ವರ್ನಾ, ಫೋಕ್ಸ್‌ವ್ಯಾಗನ್ ವೆಂಟೊ, ರೆನೊ ಸ್ಕಾಲಾ, ಫೋರ್ಡ್ ಫಿಯೆಸ್ಟಾ ಮತ್ತು ಇನ್ನಿತರ ಸಮೀಪ ಪ್ರತಿಸ್ಪರ್ಧಿಗಳಿಗೆ ಹೋಂಡಾ ನಿಕಟ ಪೈಪೋಟಿ ನೀಡಲಿದೆ. ಇನ್ನುಳಿದಂತೆ 2014 ಹೋಂಡಾ ಜಾಝ್ ಹ್ಯಾಚ್‌ಬ್ಯಾಕ್ ಮುಂಬರುವ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.

Most Read Articles

Kannada
English summary
The new Honda City diesel has been unveiled for the global markets at a function in Delhi today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X