2014 ಫಿಯೆಟ್ ಪುಂಟೊ ಆಗಸ್ಟ್‌ನಲ್ಲಿ ಬಿಡುಗಡೆ ಖಚಿತ

By Nagaraja

ಅಂತೂ ಇಂತೂ ಕೊನೆಗೂ 2014 ಫಿಯೆಟ್ ಪುಂಟೊ ಭಾರತ ಪ್ರವೇಶ ಕಾಲ ನಿಗದಿಯಾಗಿದೆ. ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗೆ ಅನುಸಾರವಾಗಿ ಗ್ರಾಹಕರ ಬೇಡಿಕೆಗಳನ್ನು ಪರಿಗಣಿಸಿರುವ ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ಆಗಸ್ಟ್ ತಿಂಗಳಲ್ಲಿ 2014 ಪುಂಟೊ ಮಾದರಿ ಪರಿಚಯಿಸಲಿದೆ.

ಈಗಾಗಲೇ 2014 ಆಟೋ ಎಕ್ಸ್ ಪೋದಲ್ಲಿ ತನ್ನ ಯೋಜನೆಗಳನ್ನು ಬಿಚ್ಚಿಟ್ಟಿದ್ದ ಫಿಯೆಟ್, ಹೊಸ ಲಿನಿಯಾ, ಫಿಯೆಟ್ 500 ಹಾಗೂ ಕಾಂಪಾಕ್ಟ್ ಎಸ್‌ಯುವಿ ಅವೆಂಚ್ಯುರಾ ಮಾದರಿಗಳನ್ನು ಭಾರತಕ್ಕೆ ಪರಿಚಯಿಸಲು ಸಿದ್ಧವಾಗಿದೆ.

2014 Fiat Punto

ಹೊಸ ಪುಂಟೊ ಮಾದರಿಯ ನೋಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಪರಿಷ್ಕೃತ ಹೆಡ್‌ಲೈಟ್, ಫ್ರಂಟ್ ಗ್ರಿಲ್ ಮತ್ತು ಬಂಪರ್ ಪಡೆದುಕೊಳ್ಳಲಿದೆ. ಇನ್ನು ಹಿಂದುಗಡೆ ಟೈಲ್ ಲೈಟ್ ಸಹ ಬದಲಾಗಲಿದೆ. ಅಷ್ಟೇ ಅಲ್ಲದೆ ಒಳಗಡೆಯೂ ಹೆಚ್ಚು ಆಕರ್ಷಕ ಸೌಲಭ್ಯಗಳನ್ನು ಪಡೆಯಲಿದೆ.

ನಾವು ಈ ಹಿಂದೆ ತಿಳಿಸಿರುವಂತೆಯೇ ಎಂಜಿನ್ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಹೊಸ ಪುಂಟೊದಲ್ಲಿ ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನನ್ನು ಫಿಯೆಟ್ ನೀಡಲಿದೆ. ಇದು 1.2 ಹಾಗೂ 1.4 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇದ ಡೀಸೆಲ್ ಎಂಜಿನ್ 74 ಹಾಗೂ 89 ಅಶ್ವಶಕ್ತಿ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

Most Read Articles

Kannada
English summary
Italian manufacturer Fiat has been trying to revive excitement and enthusiasm with its products in the Indian market. At the 2014 Auto Expo, they showcased several of their new products scheduled for Indian buyers.
Story first published: Saturday, June 28, 2014, 12:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X