2014 ಮಿನಿ ಕೂಪರ್ ಭಾರತಕ್ಕೆ ಭರ್ಜರಿ ಎಂಟ್ರಿ

By Nagaraja

ಜಗತ್ತಿನ ಐಕಾನಿಕ್ ಸಂಸ್ಥೆಗಳಲ್ಲಿ ಒಂದಾಗಿರುವ ಮಿನಿ ಇಂಡಿಯಾ ಎರಡು ಹೊಸ ಮಾದರಿಗಳನ್ನು ದೇಶಕ್ಕೆ ಪರಿಚಯಿಸಿದೆ. ಅದುವೇ ಮಿನಿ ಕೂಪರ್ ಡಿ 3 ಡೋರ್ ಮತ್ತು ಮಿನಿ ಕೂಪರ್ ಡಿ 5 ಡೋರ್

ಬೆಲೆ
ಮಿನಿ ಕೂಪರ್ ಡಿ 3 ಡೋರ್ - 31.85 ಲಕ್ಷ ರು.
ಮಿನಿ ಕೂಪರ್ ಡಿ 5 ಡೋರ್ - 35.2 ಲಕ್ಷ ರು.


ಎಂಜಿನ್
ಈ ಎರಡು ಮಿನಿ ಮಾದರಿಗಳು 1.5 ಲೀಟರ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 114 ಬಿಎಚ್‌ಪಿ (270 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ವೇಗವರ್ಧನೆ
ಇವೆರಡು ಗಂಟೆಗೆ ಗರಿಷ್ಠ 200 ಕೀ.ಮೀ. ಅಂತೆಯೇ ಕೇವಲ 9.2 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.


ಟ್ರಾನ್ಸ್‌ಮಿಷನ್
ಸುಧಾರಿತ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಹೆಚ್ಚು ಇಂಧನ ಕ್ಷಮತೆ ನೀಡುವ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ಟ್ಯೂನ್ ಮಾಡಲಾಗಿದೆ.

ಡ್ರೈವಿಂಗ್ ಮೋಡ್
ಮೂರು ಡ್ರೈವಿಂಗ್ ಮೋಡ್ ಇದರ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಸ್ಪೋರ್ಟ್, ಗ್ರೀನ್ ಮತ್ತು ಮಿಡ್.


ಸುರಕ್ಷತೆ

ಫ್ರಂಟ್ ಮತ್ತು ಪ್ರಯಾಣಿಕ ಏರ್ ಬ್ಯಾಗ್,
3 ಪಾಯಿಂಟ್ ಸೀಟು ಬೆಲ್ಟ್,
ಡೈನಾಮಿಕ್ ಸ್ಟೆಬಿಲಿಟಿ,
ಕ್ರಾಶ್ ಸೆನ್ಸಾರ್,
ಎಬಿಎಸ್,
ರನ್ ಫ್ಲ್ಯಾಟ್ ಇಂಡಿಕೇಟರ್.
mini

ಬಣ್ಣಗಳು
ಎರಡು ನಾನ್ ಮೆಟ್ಯಾಲಿಕ್ ಬಣ್ಣಗಳು - ಬಿಳಿ ಮತ್ತು ವೋಲ್ಕನಿಕ್ ಓರೆಂಜ್. ಅಂತೆಯೇ ಒಂಬತ್ತು ಮೆಟ್ಯಾಲಿಕ್ ಬಣ್ಣಗಳ ಆಯ್ಕೆ - ಮೂನ್ ಲೈಟ್ ಗ್ರೇ, ಬ್ಲೇಜಿಂಗ್ ರೆಡ್, ಎಲೆಕ್ಟ್ರಾನಿಕ್ ಬ್ಲೂ, ಬ್ರಿಟಿಷ್ ರೇಸಿಂಗ್ ಗ್ರೀನ್, ಐಸಡ್ ಚೋಕೊಲೆಟ್, ಥಂಡರ್ ಗ್ರೇ, ಡೀಪ್ ಬ್ಲೂ, ವೈಟ್ ಸಿಲ್ವರ್ ಮತ್ತು ಮಿಡ್‌ನೈಟ್ ಬ್ಲ್ಯಾಕ್.

ಇದೇ ಸಂದರ್ಭದಲ್ಲಿ ಹೆಚ್ಚಿ ಶಕ್ತಿಶಾಲಿ ಮಿನಿ ಕಾರಿನ ಬಗ್ಗೆ ಮಾತನಾಡಿರುವ ಬಿಎಂಡಬ್ಲ್ಯು ಇಂಡಿಯಾ ಸಂಸ್ಥೆಯ ಅಧ್ಯಕ್ಷರಾಗಿರುವ ಪಿಲಿಪ್ ವಾನ್ ಸಾಹ್ರ್, ಇದು ಮುಂದಿನ ವರ್ಷ ಕಂಪ್ಲೀಟ್ ಬಿಲ್ಡ್ ಯುನಿಟ್ ಮುಖಾಂತರ ಬಿಡುಗಡೆಯಾಗಲಿದೆ ಎಂದಿದ್ದಾರೆ. ಹಾಗಿದ್ದರೂ ಬಿಡುಗಡೆ ದಿನಾಂಕ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

Most Read Articles

Kannada
English summary
BMW has launched the new, third-generation Mini Cooper in India at the starting price of Rs 31.85 lakh. The new Mini is available in three-door and five-door options and its been made available only in Cooper D (diesel) for now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X