ಜುಲೈ 3ರಂದು 2014 ನಿಸ್ಸಾನ್ ಸನ್ನಿ ಲಾಂಚ್

By Nagaraja

ಭಾರತದಲ್ಲಿ ನಿಧಾನವಾಗಿ ತನ್ನ ಅಧಿಪತ್ಯ ಸ್ಥಾಪಿಸುತ್ತಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಮುಂಬರುವ ಜುಲೈ 3ರಂದು 2014 ಸನ್ನಿ ಫೇಸ್‌ಲಿಫ್ಟ್ ವರ್ಷನ್ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಪರಿಷ್ಕೃತ ಸನ್ನಿ ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಕ ನೋಟ ಪಡೆದುಕೊಳ್ಳಲಿದೆ. ಈಗಾಗಲೇ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ 2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಮಾದರಿಯು ಅನೇಕ ನೂತನ ವೈಶಿಷ್ಟ್ಯಗಳನ್ನು ಪಡೆಯಲಿದೆ.


ನೋಟ ಪರಿಗಣಿಸಿದರೆ ಪರಿಷ್ಕೃತ ಬಂಪರ್, ಹೆಡ್‌ಲೈಟ್ ಹಾಗೂ ಗ್ರಿಲ್ ಪ್ರಮುಖ ಆಕರ್ಷಣೆಯಾಗಿರಲಿದೆ. ಇನ್ನು ಕಾರಿನ ಒಳಮೈಯಲ್ಲೂ ಅನೇಕ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಇದು ಬ್ಲ್ಯಾಕ್ ಪಿಯಾನೊ ಕನ್ಸೋಲ್, ಹೊಚ್ಚ ಹೊಸತಾದ ಮಾಹಿತಿ ಮನರಂಜನಾ ಸಿಸ್ಟಂ, ಬ್ಲೂಟೂತ್, ಸುಧಾರಿತ ಸೀಟು ಫ್ಯಾಬ್ರಿಕ್ಸ್, ಪಾರ್ಕಿಂಗ್ ಏಡ್ ಮತ್ತು ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಪಡೆಯಲಿದೆ.

ಒಟ್ಟು ಎಂಟು ವೆರಿಯಂಟ್‌ಗಳಲ್ಲಿ 2014 ಸನ್ನಿ ಆಗಮನವಾಗಲಿದೆ. ಈ ಪೈಕಿ ಐದು ಮಾದರಿಗಳು ಡೀಸೆಲ್ ಹಾಗೂ ಇನ್ನುಳಿದ ಮೂರು ವೆರಿಯಂಟ್‌ಗಳು ಪೆಟ್ರೋಲ್ ವರ್ಷನ್ ಆಗಿರಲಿದೆ. ಇವೆಲ್ಲದರ ಜೊತೆಗೆ ಹೊಸ ಬಣ್ಣಗಳ ಆಯ್ಕೆಯಲ್ಲೂ ಹೊಸ ಸನ್ನಿ ಲಭ್ಯವಾಗಲಿದೆ.

2014 nissan sunny

ಸುಧಾರಿತ ಇಸಿಯು ತಂತ್ರಜ್ಞಾನದ ಮುಖಾಂತರ ಗರಿಷ್ಠ ಇಂಧನ ಕ್ಷಮತೆ ಲಭ್ಯವಾಗಲಿದೆ. ಇದರ ಪೆಟ್ರೋಲ್ ನಿಯಂತ್ರಿತ ಸನ್ನಿ ಮಾದರಿಯು 1.5 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ (99 ಅಶ್ವಶಕ್ತಿ) ಹೊಂದಿರಲಿದೆ. ಅದೇ ಹೊತ್ತಿಗೆ ಎಕ್ಸ್ ಟ್ರಾನಿಕ್ ಸಿವಿಟಿ ವೆರಿಯಂಟ್ ಗರಿಷ್ಠ 101 ಅಶ್ವಶಕ್ತಿ ಪಡೆಯಲಿದೆ. ಇವೆರಡು 134 ಎನ್‌ಎಂ ಟಾರ್ಕ್ ನೀಡಲಿದೆ.

ಅಂತೆಯೇ 1.5 ಲೀಟರ್ ಡೀಸೆಲ್ ಎಂಜಿನ್ 86 ಅಶ್ವಶಕ್ತಿ (200 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 22.71 ಹಾಗೂ 21.64 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

Most Read Articles

Kannada
English summary
Japanese automobile manufacturer Nissan will be launching the updated version of its Sunny sedan. They had showcased the new model at the 2014 Auto Expo held in New Delhi. The facelifted version of the sedan will sport a host of upgrades.
Story first published: Friday, June 27, 2014, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X