ಬೆಂಗಳೂರಿನಲ್ಲಿ ಮಿಂಚಿನ ದಾಳಿ; 450 ರಿಕ್ಷಾಗಳ ಮುಟ್ಟುಗೋಲು

By Nagaraja

ಬೆಂಗಳೂರು ಪೊಲೀಸ್ ನಡೆಸಿರುವ ಮಿಂಚಿನ ದಾಳಿಯಲ್ಲಿ 450 ಆಟೋ ರಿಕ್ಷಾಗಳನ್ನು ಮುಟ್ಟುಗೋಲು ಮಾಡಿರುವ ಬಗ್ಗೆ ವರದಿಯಾಗಿದೆ.

ಇವನ್ನೂ ಓದಿ: ರಿಕ್ಷಾದಲ್ಲಿ ಕನ್ನಡಿಗರ ಭಾಷಾ ಪ್ರೇಮ

ಏನಿದು ಪ್ರಕರಣ?
ಬೆಂಗಳೂರು ಮಿರರ್‌ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಬೆಂಗಳೂರು ಆಟೋ ಚಾಲಕರ ವಿರುದ್ದ ಪದೇ ಪದೇ ಕೇಳಿಬರುತ್ತಿರುವ ಮಿತಿಮೀರಿದ ವೆಚ್ಚ ಈಡು ಮಾಡುವುದು, ನಿಗದಿತ ಪ್ರದೇಶಗಳಿಗೆ ತೆರಳಲು ಅಸಮ್ಮತಿ ಸೂಚಿಸುವುದು ಹಾಗೂ ಪ್ರಯಾಣಿಕರ ಮೇಲಿನ ಅನುಚಿತ ವರ್ತನೆಯ ಹಿನ್ನಲೆಯಲ್ಲಿ ವೇಷ ಮರೆಯಿಸಿಕೊಂಡಿದ್ದ ಬೆಂಗಳೂರು ಟ್ರಾಫಿಕ್ ಪೊಲೀಸರು ಆಟೋ ಚಾಲಕರ ನಿಷ್ಠೆಯ ಪರೀಕ್ಷೆಗಾಗಿ 15 ತಾಸಿನ ಮಿಂಚಿನ ಕಾರ್ಯಾಚರಣೆ ನಡೆಸಿದೆ.

ಬೆಂಗಳೂರಿನಲ್ಲಿ ಮಿಂಚಿನ ದಾಳಿ; 450 ರಿಕ್ಷಾಗಳ ಮುಟ್ಟುಗೋಲು

ಸಿನೆಮಾ ಶೈಲಿಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. 100 ಮಹಿಳಾ ಪೊಲೀಸ್ ಸೇರಿದಂತೆ 700ರಷ್ಟು ಪೊಲೀಸ್ ಪೇದೆಗಳು ತಮ್ಮ ವೇಷಭೂಷಣ ಬದಲಿಸಿ ಸಾಮಾನ್ಯ ಪ್ರಯಾಣಿಕರಂತೆ ಆಟೋವನ್ನೇರಿದ್ದರು.

(ಸಾಂದರ್ಭಿಕ ಚಿತ್ರ ಬಳಕೆ)
ಬೆಂಗಳೂರಿನಲ್ಲಿ ಮಿಂಚಿನ ದಾಳಿ; 450 ರಿಕ್ಷಾಗಳ ಮುಟ್ಟುಗೋಲು

ಇದರಂತೆ ನಡೆಸಿರುವ ಕಾರ್ಯಾಚರಣೆಯಲ್ಲಿ 450 ಆಟೋಗಳವನ್ನು ತಪ್ಪಿತ್ತಸ್ಥವೆಂದರು ಗುರುತಿಸಿಕೊಂಡಿದ್ದು ಮುಟ್ಟುಗೋಲು ಹಾಕಲಾಗಿದೆ. ಹಾಗೆಯೇ 3350 ಆಟೋ ರಿಕ್ಷಾಗಳಿಗೆ ದಂಡ ಹೇರಲಾಗಿದೆ.

(ಸಾಂದರ್ಭಿಕ ಚಿತ್ರ ಬಳಕೆ)
ಬೆಂಗಳೂರಿನಲ್ಲಿ ಮಿಂಚಿನ ದಾಳಿ; 450 ರಿಕ್ಷಾಗಳ ಮುಟ್ಟುಗೋಲು

ಕನ್ನಡ ಭಾಷೆ ಬಾರದವರಂತೆ ನಟಿಸಿದ್ದ ಪೊಲೀಸ್ ಪೇದೆಗಳು ನಗರದ್ಯಾಂತ ತ್ವರಿತ ಕಾರ್ಯಾಚರಣೆ ನಡೆಸಿದ್ದರು. ಬೆಳಗ್ಗೆ 6 ಗಂಟೆಗೆ ಆರಂಭವಾದ ಮಿಂಚಿನ ದಾಳಿಯು ನಿರಂತರ 15 ತಾಸುಗಳ ಕಾಲ ಮುಂದುವರಿದಿತ್ತು.

(ಸಾಂದರ್ಭಿಕ ಚಿತ್ರ ಬಳಕೆ)
ಬೆಂಗಳೂರಿನಲ್ಲಿ ಮಿಂಚಿನ ದಾಳಿ; 450 ರಿಕ್ಷಾಗಳ ಮುಟ್ಟುಗೋಲು

ಬೆಂಗಳೂರಿನ 40 ಟ್ರಾಫಿಕ್ ಪೊಲೀಸ್ ಠಾಣೆಗಳ ತಲಾ 20ರಷ್ಟು ಪೊಲೀಸ್ ಪೇದೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇತ್ತೀಚೆಗಿನ ದಿನಗಳಲ್ಲಿ ಸವಾರರ ಮೇಲಿನ ಆಟೋ ಚಾಲಕರ ಹಿಂಸಾಚಾರ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿರುವುದು ತ್ವರಿತ ಕಾರ್ಯಾಚರಣೆಗೆ ಕಾರಣವಾಗಿದೆ.

(ಸಾಂದರ್ಭಿಕ ಚಿತ್ರ ಬಳಕೆ)
ಬೆಂಗಳೂರಿನಲ್ಲಿ ಮಿಂಚಿನ ದಾಳಿ; 450 ರಿಕ್ಷಾಗಳ ಮುಟ್ಟುಗೋಲು

ಮೂಲಗಳ ಪ್ರಕಾರ, ಕನ್ನಡದಲ್ಲಿಯೇ ಮಾತನಾಡಿದರೆ ಆಟೋ ಚಾಲಕರು ಯಾವುದೇ ತಗಾದೆ ಎತ್ತುವುದಿಲ್ಲ. ಅದೇ ವೇಳೆ 'ಬೈಯಾ' ಇತ್ಯಾದಿ ಹಿಂದಿ ಅಥವಾ ಇಂಗ್ಲಿಷ್ ಪದಗಳನ್ನು ಬಳಕೆ ಮಾಡಿದ್ದಲ್ಲಿ ಆಟೋ ಚಾಲಕರು ಸುಲಿಗೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.

(ಸಾಂದರ್ಭಿಕ ಚಿತ್ರ ಬಳಕೆ)
ಬೆಂಗಳೂರಿನಲ್ಲಿ ಮಿಂಚಿನ ದಾಳಿ; 450 ರಿಕ್ಷಾಗಳ ಮುಟ್ಟುಗೋಲು

ಒಟ್ಟಾರೆಯಾಗಿ ಈ ಘಟನೆಯು ಸಭ್ಯ ಆಟೋ ಚಾಲಕರ ಮೇಲೂ ದುಷ್ಫಾರಿಣಾಮ ಬೀರುವಂತಾಗಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

(ಸಾಂದರ್ಭಿಕ ಚಿತ್ರ ಬಳಕೆ)
ದೂರು ಸಲ್ಲಿಸುವ ವಿಧಾನ

ದೂರು ಸಲ್ಲಿಸುವ ವಿಧಾನ

24 ತಾಸಿನ ಸೇವೆ - 080-22868444/22868550

ಇ ಮೇಲ್ - [email protected]

ಎಸ್‌ಎಂಎಸ್ - 5225 ವಿಧಾನ - AUTO REF (ರಿಜಿಸ್ಟ್ರೇಶನ್ ನಂಬರ್) (ಸ್ಥಳ, ಎಲ್ಲಿಂದ ಎಲ್ಲಿಗೆ) (ದಿನಾಂಕ ಹಾಗೂ ಸಮಯ) ಉದಾ: AUTO REF KA01A1000 Malleswaram to Navrang 3:30 pm, 1 July, 2014

ಮಿತಿಮೀರಿದ ಚಾರ್ಜಿಂಗ್ ಈಡು ಮಾಡಿದ್ದಲ್ಲಿ: AUTO OVC (ರಿಜಿಸ್ಟ್ರೇಶನ್ ನಂಬರ್) (ಸ್ಥಳ, ಎಲ್ಲಿಂದ ಎಲ್ಲಿಗೆ) (ದಿನಾಂಕ ಹಾಗೂ ಸಮಯ)

ಮೂಲ: ಬೆಂಗಳೂರು ಮಿರರ್

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X