ಐಷಾರಾಮಿ ಬಿಎಂಡಬ್ಲ್ಯು ಕಾರಿಗೂ ತಟ್ಟಿದ ಏರ್‌ಬ್ಯಾಗ್ ಸಮಸ್ಯೆ

By Nagaraja

ಏರ್ ಬ್ಯಾಗ್ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ತನ್ನ ನಿರ್ದಿಷ್ಟ ಮಾದರಿಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಬಿಎಂಡಬ್ಲ್ಯು ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ 3 ಸಿರೀಸ್ ಮಾದರಿಯಲ್ಲಿ ಇಂತಹದೊಂದು ಸಮಸ್ಯೆ ಕಂಡುಬಂದಿದೆ. 1999ನೇ ಸಾಲಿನ ಮೇ ತಿಂಗಳಿಂದ 2006 ಆಗಸ್ಟ್ ವರೆಗೆ ನಿರ್ಮಾಣವಾದ ವಾಹನಗಳಲ್ಲಿ ತೊಂದರೆಗಳು ಕಾಣಿಸಿಕೊಂಡಿದೆ.

BMW

ಪ್ರಯಾಣಿಕ ಬದಿಯ ಏರ್‌ಬ್ಯಾಗ್‌ನಲ್ಲಿ ತೊಂದರೆ ಎದುರಾಗಿದ್ದು, ಜಾಗತಿಕವಾಗಿ 1.6 ದಶಲಕ್ಷ ವಾಹನಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಆದರೆ ಇದುವರೆಗೆ ಯಾವುದೇ ಅಪಾಯ ಎದುರಾಗಿಲ್ಲ. ಬದಲಾಗಿ ಮುಂಜಾಗ್ರತಾ ಕ್ರಮವಾಗಿ ವಾಹನಗಳನ್ನು ರಿಕಾಲ್ ಮಾಡಲಾಗುತ್ತಿದೆ.

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸಂಸ್ಥೆಯು, ಕಳೆದ ವರ್ಷ 2.40 ಲಕ್ಷ ಯುನಿಟ್‌ಗಳನ್ನು ಹಿಂಪಡೆಯಲಾಗಿದ್ದು, ಸಮಸ್ಯೆ ಸರಿಪಡಿಸಿ ಕೊಡಲಾಗಿದೆ. ಇದರ ಮುಂದುವರಿದ ಭಾಗವೆಂಬಂತೆ ಮತ್ತೆ ವಾಹನಗಳನ್ನು ಹಿಂಪಡೆಯಲಾಗುತ್ತಿದೆ ಎಂದಿದೆ. ಈ ಮೂಲಕ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

Most Read Articles

Kannada
English summary
German luxury car manufacturer BMW will be recalling its popular vehicle the 3 Series. The model in question are the ones manufactured between May, 1999 to August, 2006. The recall concerns a potential defect in its passenger side airbag.
Story first published: Friday, July 18, 2014, 11:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X