ದೇಶದಲ್ಲೇ ಎಲೆಕ್ಟ್ರಿಕ್, ಹೈಬ್ರಿಡ್ ಬಸ್ ನಿರ್ಮಿಸಲಿರುವ ಲೇಲ್ಯಾಂಡ್

By Nagaraja

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಓಗೊಟ್ಟಿರುವ ದೇಶದ ಮುಂಚೂಣಿಯ ವಾಣಿಜ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಅಶೋಕ್ ಲೇಲ್ಯಾಂಡ್ ಮುಂದಿನ ವರ್ಷದಿಂದಲೇ ದೇಶದಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಬಸ್ಸುಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.

ಇದರಂತೆ ಬ್ರಿಟನ್‌ ಮೂಲದ ತನ್ನ ಪಾಲುದಾರಿಕೆ ಸಂಸ್ಥೆಯಾಗಿರುವ ಒಪ್ಟೆರ್ ಅನ್ನು ಭಾರತಕ್ಕೆ ಪರಿಚಯಿಸುವ ಯೋಜನೆಯನ್ನು ಲೇಲ್ಯಾಂಡ್ ಹೊಂದಿದೆ. ಇವೆಲ್ಲವೂ ದೇಶದಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

ದೇಶದಲ್ಲೇ ಎಲೆಕ್ಟ್ರಿಕ್, ಹೈಬ್ರಿಡ್ ಬಸ್ ನಿರ್ಮಿಸಲಿರುವ ಲೇಲ್ಯಾಂಡ್

ವಿದ್ಯುತ್ ಚಾಲಿತ ಹಾಗೂ ಮಿಶ್ರ ತಳಿಯ ಹೈಬ್ರಿಡ್ ಬಸ್ಸುಗಳನ್ನು ಪರಿಚಯಿಸುವುದು ಲೇಲ್ಯಾಂಡ್ ಇರಾದೆಯಾಗಿದೆ. ನಿಮ್ಮ ಮಾಹಿತಿಗಾಗಿ, ಬ್ರಿಟನ್‌ನಲ್ಲಿ ಒಪ್ಟೆರ್ ವಾರ್ಷಿಕವಾಗಿ 100 ಎಲೆಕ್ಟ್ರಿಕ್ ಬಸ್‌ಗಳನ್ನು ಮಾರಾಟ ಮಾಡುತ್ತಿದೆ.

ದೇಶದಲ್ಲೇ ಎಲೆಕ್ಟ್ರಿಕ್, ಹೈಬ್ರಿಡ್ ಬಸ್ ನಿರ್ಮಿಸಲಿರುವ ಲೇಲ್ಯಾಂಡ್

ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಬಸ್ಸುಗಳು ಎರಡರಿಂದ ಮೂರು ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ. ಇದು 200 ಕೀ.ಮೀ. ವರೆಗೆ ಓಡುವ ಸಾಮರ್ಥ್ಯ ಹೊಂದಿದೆ. ಇದರ ನಿರ್ಮಾಣ ದುಬಾರಿಯಾಗಿರುವುದರಿಂದ ಸರಕಾರ ಸಬ್ಸಿಡಿ ನೀಡುವುದು ಅಗತ್ಯವಾಗಿದೆ ಎಂದು ಲೇಲ್ಯಾಂಡ್ ವಿವರಿಸಿದೆ.

ದೇಶದಲ್ಲೇ ಎಲೆಕ್ಟ್ರಿಕ್, ಹೈಬ್ರಿಡ್ ಬಸ್ ನಿರ್ಮಿಸಲಿರುವ ಲೇಲ್ಯಾಂಡ್

ಸಂಸ್ಥೆಯ ಪ್ರಕಾರ ನಿರ್ಮಾಣ ಸಾಮರ್ಥ್ಯ ಒಂದು ಸಮಸ್ಯೆಯಲ್ಲ. ಆದರೆ ಬ್ಯಾಟರಿ ತಂತ್ರಜ್ಞಾನಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಾಗಿದೆ. ಯಾಕೆಂದರೆ ಇನ್ನು ಬ್ರಿಟನ್, ಅಮೆರಿಕ ಅಥವಾ ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ ಎಂದಿದೆ.

ದೇಶದಲ್ಲೇ ಎಲೆಕ್ಟ್ರಿಕ್, ಹೈಬ್ರಿಡ್ ಬಸ್ ನಿರ್ಮಿಸಲಿರುವ ಲೇಲ್ಯಾಂಡ್

ದೇಶದಲ್ಲಿ ಅಲ್ವಾರ್ ಮತ್ತು ತಿರಿಚ್ಚಿಯಲ್ಲಿ ಅಶೋಕ್ ಲೇಲ್ಯಾಂಡ್ ನಿರ್ಮಾಣ ಘಟಕಗಳಿವೆ. ಮುಂದಿನ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಬಸ್ಸುಗಳು ಈ ಘಟಕಗಳಲ್ಲೇ ನಿರ್ಮಾಣವಾಗಲಿದೆ.

ದೇಶದಲ್ಲೇ ಎಲೆಕ್ಟ್ರಿಕ್, ಹೈಬ್ರಿಡ್ ಬಸ್ ನಿರ್ಮಿಸಲಿರುವ ಲೇಲ್ಯಾಂಡ್

ಭಾರತದಲ್ಲಿ ವಿದ್ಯುತ್ ಚಾಲಿತ ಹಾಗೂ ಹೈಬ್ರಿಡ್ ಬಸ್ಸುಗಳಿಗೆ ಬೇಡಿಕೆಯಿದಯೇ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಲೇಲ್ಯಾಂಡ್, 20 ವರ್ಷಗಳ ಹಿಂದೆ ನಾವು ಸಿಎನ್‌ಜಿ ಬಸ್ಸುಗಳನ್ನು ಪರಿಚಯಿಸಿದ್ದೆವು. ಅಂದು ಸಿಎನ್‌ಜಿ ಲಭ್ಯವಿರಲಿಲ್ಲ. ಆದರೆ ಮಾರುಕಟ್ಟೆ ಲೀಡರ್ ಆಗಿರುವ ಹಿನ್ನಲೆಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಲು ಇದುವೇ ಸೂಕ್ತ ಸಮಯವಾಗಿದೆ ಎಂದಿದೆ.

Most Read Articles

Kannada
English summary
Ashok Leyland is planning to start manufacturing and marketing its electric and hybrid buses in India from next year. 
Story first published: Friday, October 17, 2014, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X