ಕೇಂದ್ರ ಬಜೆಟ್; ವಾಹನೋದ್ಯಮದ ಮೇಲಿನ ಪರಿಣಾಮ ಏನು?

By Nagaraja

ನಿರೀಕ್ಷೆಯಂತೆಯೇ 2014ರ ಕೇಂದ್ರ ಬಜೆಟ್ ವಾಹನೋದ್ಯಮದ ಮೇಲೆ ಅಷ್ಟೊಂದು ಕೆಟ್ಟ ಪರಿಣಾಮವನ್ನುಂಟು ಮಾಡಿಲ್ಲ. ಅಬಕಾರಿ ಸುಂಕ ರಿಯಾಯಿತಿ ಡಿಸೆಂಬರ್ ವರೆಗೆ ಮುಂದುವರಿಸಿರುವುದು ವಾಹನೋದ್ಯಮದ ಪುನಶ್ಚೇತನಕ್ಕೆ ಸಹಕಾರಿಯಾಗುವ ಭರವಸೆಯಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2014-15ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಉಳಿತಾಯ ಆಯ್ಕೆಯನ್ನು ಹೆಚ್ಚಿಸಿರುವುದು ವಾಹನ ಜಗತ್ತಿನ ಮೇಲೆ ಸಕರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದ್ದು, ಕಾರು ಹಾಗೂ ಬೈಕ್ ಮಾರಾಟದಲ್ಲಿ ಹೆಚ್ಚಳ ಕಂಡುಬರುವ ನಿರೀಕ್ಷೆಯಿದೆ.

arun jetley

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಯಾಮ್ ಸಹ ನಿರ್ದೇಶಕ ಸುಗಾಟೊ ಸೆನ್, 'ತೆರಿಗೆದಾರರಿಗೆ ಉಳಿತಾಯ ಮಾಡುವ ಆಯ್ಕೆಯನ್ನು ತೆರೆಯುವ ಮೂಲಕ ವಾಹನಗಳ ಖರೀದಿಗೆ ಉತ್ತೇಜನ ತುಂಬಿದಂತಾಗಿದೆ' ಎಂದಿದ್ದಾರೆ.

ವಾಹನಗಳ ಮೇಲಿನ ಅಬಕಾರಿ ಸುಂಕ ರಿಯಾಯಿತಿಯನ್ನು ಮುಂದಿನ ಆರು ತಿಂಗಳ ವರೆಗೆ ಮುಂದುವರಿಸಿರುವುದರಿಂದ ಜುಲೈ ತಿಂಗಳಲ್ಲಿ ಯಾವುದೇ ದರ ಏರಿಕೆ ಕಂಡುಬದಿಲ್ಲ. ಇದು ಸಹ ವಾಹನಗಳ ಮಾರಾಟ ಏರಿಕೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಬಜೆಟ್ ಮುಂಗಡ ಪತ್ರದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ 37,880 ಕೋಟಿ ರು. ಮೀಸಲಿಡಲಾಗಿದೆ. ಇದಲ್ಲದೆ ಪ್ರಧಾನ್ ಮಂತ್ರಿ ಗ್ರಾಮ್ ಸಡಕ್ ಯೋಜನೆಯಂಗವಾಗಿ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ 14,389 ಕೋಟಿ ರು.ಗಳನ್ನು ಬಿಡುಗಡೆಗೊಳಿಸಿತ್ತು.

ಏತನ್ಮಧ್ಯೆ ಪ್ರತಿಕ್ರಿಯಿಸಿರುವ ಮರ್ಸಿಡಿಸ್ ಬೆಂಝ್ ಎಂಡಿ ಹಾಗೂ ಸಿಇಒ ಎಬೆರ್‌ಹಾರ್ಡ್ ಕೆರ್ನ್, ಒಟ್ಟಾರೆ ಬೆಳವಣಿಗೆಗೆ ಬಜೆಟ್ ಪ್ರಸ್ತಾಪಿಸಲಾಗಿದೆ. ಮೂಲಸೌಲಭ್ಯ ಅಭಿವೃದ್ಧಿಗಳಿಗೆ ಅನೇಕ ಗಮನಾರ್ಹ ಯೋಜನೆಗಳನ್ನು ಪ್ರಕಟಿಸಲಾಗಿದೆ. ಈ ಎಲ್ಲ ವಿಚಾರಗಳು ದೀರ್ಘಾವಧಿಯಲ್ಲಿ ವಾಹನೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ. ಇವೆಲ್ಲದರ ನಡುವೆ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ತುಂಬಲು 24 ಕೋಟಿ ರು. ಮೀಸಲಿಡಲಾಗಿದೆ.

Most Read Articles

Kannada
English summary
Auto industry welcomes budget, expects boost in demand
Story first published: Friday, July 11, 2014, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X