ಬಿಎಂಡಬ್ಲ್ಯು 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಆಗಮನಕ್ಕೆ ಕ್ಷಣಗಣನೆ

By Nagaraja

ಇದೀಗಷ್ಟೇ 2014 ಎಕ್ಸ್5 ಎಸ್‌ಯುವಿ ಮಾದರಿಯನ್ನು ಪರಿಚಯಿಸಿರುವ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಸದ್ಯದಲ್ಲೇ 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಕಾರನ್ನು ದೇಶಕ್ಕೆ ಪರಿಚಯಿಸಲಿದೆ.

ವರದಿಗಳ ಪ್ರಕಾರ ಬಿಎಂಡಬ್ಲ್ಯು 7 ಸಿರೀಸ್ ಆಕ್ಟಿವ್‌ಹೈಬ್ರಿಡ್ ಜುಲೈ ತಿಂಗಳಲ್ಲಿ ಲಾಂಚ್ ಆಗಲಿದೆ. ಇದು ಬಿಎಂಡಬ್ಲ್ಯು ಸಂಸ್ಥೆಯಿಂದ ದೇಶಕ್ಕೆ ಪರಿಚಯವಾಗುತ್ತಿರುವ ಮೊದಲ ಹೈಬ್ರಿಡ್ ವಾಹನವಾಗಿದೆ.

BMW 7 Series

ಈಗ ದೇಶದ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ 7 ಸಿರೀಸ್ ಸೆಡಾನ್ ಕಾರಿಗೆ ಸಮಾನವಾದ ವಿನ್ಯಾಸವನ್ನು ಆಕ್ಟಿವ್ ಹೈಬ್ರಿಡ್ ಪಡೆದುಕೊಳ್ಳಲಿದೆ. ಇದರಲ್ಲಿ ಎಲೆಕ್ಟ್ರಿಕ್ ಮೋಟಾರು ಸಹ ಇರಲಿದ್ದು, ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಹೊಂದಿರುವ ಬಿಎಂಡಬ್ಲ್ಯು, 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಮಾದರಿಯಲ್ಲಿ 3.0 ಲೀಟರ್ ಸಿಕ್ಸ್ ಸಿಲಿಂಡರ್ ಎಂಜಿನ್ ಆಳವಡಿಸಿದೆ. ಇದು 320 ಅಶ್ವಶಕ್ತಿ (450 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಇದರ ವಿದ್ಯುತ್ ಚಾಲಿತ ಮೋಟಾರು ಹೆಚ್ಚುವರಿ 55 ಅಶ್ವಶಕ್ತಿ (210 ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಇನ್ನು ವೇಗವರ್ಧನೆಯ ವಿಚಾರದಲ್ಲಿ ಬಿಎಂಡಬ್ಲ್ಯು 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಕೇವಲ 5.7 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಬಿಎಂಡಬ್ಲ್ಯು, ಎಕ್ಸ್3 ಎಸ್‌ಯುವಿ, ಎಂ3 ಸ್ಪೋರ್ಟ್ಸ್ ಸೆಡಾನ್ ಹಾಗೂ ಎಂ4 ಕೂಪೆ ಮತ್ತು 2015 ಮಿನಿ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

Most Read Articles

Kannada
English summary
BMW India recently launched its 2014 X5 in India now according to the German manufacturers plan to launch nine models in India for 2014.
Story first published: Monday, June 2, 2014, 15:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X