ಬಿಎಂಡಬ್ಲ್ಯು ಶಕ್ತಿಶಾಲಿ ಎಂ3, ಎಂ4 ಬಿಡುಗಡೆಗೆ ಸಿದ್ಧ

By Nagaraja

ಪ್ರೀಮಿಯಂ ಕಾರು ವಿಭಾಗಗಳಲ್ಲಿ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಬಹುನಿರೀಕ್ಷಿತ ಎಂ3 ಮತ್ತು ಎಂ4 ಮಾದರಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ವರದಿಗಳ ಪ್ರಕಾರ ಬಿಎಂಡಬ್ಲ್ಯು ಎಂ3 ಮತ್ತು ಎಂ4 ಕಾರುಗಳು 2014 ನವೆಂಬರ್ 26ರಂದು ಬಿಡುಗಡೆಯಾಗಲಿದೆ. ಈ ಪೈಕಿ ಎಂ3 ಸೆಡಾನ್ ಹಾಗೂ ಎಂ4 ಕೂಪೆ ಕಾರಾಗಿರಲಿದೆ. ಇವೆರಡು ಭಾರತದಲ್ಲಿ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದು, ನಿರ್ವಹಣಾ ಕಾರು ವಿಭಾಗದಲ್ಲಿ ನೂತನ ಪೈಪೋಟಿ ಸೃಷ್ಟಿಸಲಿದೆ.


ನಿರೀಕ್ಷೆ ಏನು?
ಅಚ್ಚರಿಯೆಂದರೆ ಎಂ3 ಮತ್ತು ಎಂ4 ಸಮಾನವಾದ ಬಿಎಂಡಬ್ಲ್ಯು ಎಂಜಿನ್‌ಗಳನ್ನು ಹಂಚಿಕೊಳ್ಳುತ್ತಿದೆ. ಇದು ಇನ್‌ಲೈನ್ ಸಿಕ್ಸ್ ಸಿಲಿಂಡರ್ 3.0 ಲೀಟರ್ ಎಂಜಿನ್ ಹೊಂದಿದೆ. ಹಾಗೆಯೇ 7 ಸ್ಪೀಡ್ ಎಂ ಡಬಲ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ನಿಮ್ಮ ಮಾಹಿತಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಐಚ್ಛಿಕ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಲಭ್ಯವಿರುತ್ತದೆ. ಆದರೆ ಭಾರತದಲ್ಲಿ ಇದರ ಕೊರತೆ ಕಾಡಲಿದೆ.

ಈ ಎರಡು ಎಂ ಶ್ರೇಣಿಯ ವಾಹನಗಳು 425 ಅಶ್ವಶಕ್ತಿ (550 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಗರಿಷ್ಠ ವೇಗವನ್ನು ಗಂಟೆಗೆ 250 ಕೀ.ಮೀ.ಗಳಿಗೆ ವಿದ್ಯುನ್ಮಾನವಾಗಿ ಹೊಂದಾಣಿಸಲಾಗಿದೆ. ಹಾಗೆಯೇ ಕೇವಲ 4.1 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.


ವಿಶಿಷ್ಟತೆಗಳೇನು?
ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಜೊತೆಗೆ ಕಂಫರ್ಟ್, ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಪ್ಲಸ್ ವಿಧಗಳನ್ನು ಹೊಂದಿರಲಿದೆ. ಹಾಗೆಯೇ ಅಡಾಪ್ಟಿವ್ ಎಂ ಸಸ್ಫೆಷನ್ ಪ್ರಮುಖವಾಗಿರಲಿದೆ. ಇದರಲ್ಲಿ ಐಚ್ಛಿಕ ಕಾರ್ಬನ್ ಸೆರಾಮಿಕ್ ಬ್ರೇಕ್ ಕೂಡಾ ಇರಲಿದೆ.
bmw M3 & M4

ನಿಮ್ಮ ಮಾಹಿತಿಗಾಗಿ...
ಬಿಎಂಡಬ್ಲ್ಯು ಎಂ ಶ್ರೇಣಿಯ ಕಾರುಗಳನ್ನು ಪ್ರಾರಂಭದಲ್ಲಿ ಬಿಎಂಡಬ್ಲ್ಯು ರೇಸಿಂಗ್ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗುತ್ತಿತ್ತು. ಇದು 1960 ಹಾಗೂ 1970ರ ದಶಕಗಳಲ್ಲಿ ಅತ್ಯಂತ ಹೆಚ್ಚು ಯಶಸ್ವಿ ಕಂಡಿತ್ತು. ಆದರೆ ಬರ ಬರುಬರುತ್ತಾ ವಿಶೇಷವಾಗಿ ಪರಿಷ್ಕೃತ ಇಂತಹ ಕಾರುಗಳು ಗ್ರಾಹಕರನ್ನು ತಲುಪತೊಡಗಿತ್ತು. ಸಾಮಾನ್ಯವಾಗಿ ಎಂ ಬ್ಯಾಡ್ಜ್ ಕಾರುಗಳು ಪರಿಷ್ಕೃತ ಎಂಜಿನ್, ಟ್ರಾನ್ಸ್‌ಮಿಷನ್, ಸಸ್ಪೆಷನ್, ಒಳಮೈ, ಏರೋಡೈನಾಮಿಕ್ ಮತ್ತು ಹೊರಮೈ ಪರಿಷ್ಕರಣೆಗಳನ್ನು ಪಡೆದುಕೊಳ್ಳುತ್ತವೆ.
Most Read Articles

Kannada
English summary
German luxury car manufacturer BMW has introduced several new and exciting products in India during 2014. The Bavarian Motor Works has announced that it will be launching its M3 and M4 vehicles in India on the 26th of November, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X