ಎ. 3ರಂದು ಬಿಎಂಡಬ್ಲ್ಯು ಎಂ ಗ್ರ್ಯಾನ್ ಕೂಪೆ ಲಾಂಚ್

By Nagaraja

ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಭಾರತ ಪ್ರವೇಶಕ್ಕೆ ಕಾಲ ಸನ್ನಿಹಿತವಾಗಿದೆ. ಹೌದು, ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಮುಂಬರುವ ಎಪ್ರಿಲ್ 3ರಂದು ಈ ದುಬಾರಿ ಕಾರನ್ನು ದೇಶಕ್ಕೆ ಪರಿಚಯಿಸಲಿದೆ.

ಈ ಸಂಬಂಧ ಅಧಿಕೃತ ಘೋಷಣೆಯನ್ನು ಬಿಎಂಡಬ್ಲ್ಯು ಹೊರಡಿಸಿದೆ. ಅಂದ ಹಾಗೆ ಕಂಪ್ಲೀಟ್ ಬಿಲ್ಡ್ ಯುನಿಟ್ (ಯುಬಿಯು) ಮುಖಾಂತರ ಬಿಎಡಬ್ಲ್ಯು ದೇಶಕ್ಕೆ ಪರಿಚಯವಾಗಲಿದೆ.

BMW M6 Gran Coupe

ಅಷ್ಟಕ್ಕೂ ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ದರ ಎಷ್ಟು ಅಂತೀರಾ? ಬರೋಬ್ಬರಿ ಒಂದು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ. ಇದರಿಂದಲೇ ಕಾರಿನಲ್ಲಿರುವ ಐಷಾರಾಮಿ ವೈಶಿಷ್ಟ್ಯಗಳ ಬಗ್ಗೆ ಮನದಲ್ಲೇ ಲೆಕ್ಕ ಹಾಕಬಹುದಾಗಿದೆ.

6 ಸಿರೀಸ್ ಗ್ರ್ಯಾನ್ ಕೂಪೆ ತಲಹದಿಯಲ್ಲಿ ನಿರ್ಮಾಣವಾಗಿರುವ ಎಂ6 ಗ್ರ್ಯಾನ್ ಕೂಪೆ, ತನ್ನ ನಿರ್ವಹಣೆಗೆ ಹೆಚ್ಚು ಹೆಸರುವಾಸಿಯಾಗಿದೆ. ಇದು 4.4 ಲೀಟರ್ ವಿ8 ಎಂಜಿನ್ ಪಡೆದುಕೊಳ್ಳಲಿದೆ. ಜತೆಗೆ ಎಂ ಟ್ವಿನ್ ಪವರ್ ಟರ್ಬೊ ಇರಲಿದೆ. ಇದು ಕೇವಲ 4.2 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕೀ.ಮೀ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

Most Read Articles

Kannada
English summary
BMW had earlier displayed their M6 Gran Coupe at the 2014 Auto Expo in India. The German car manufacturer has officially announced that it will be launching the M6 Gran Coupe in India on the 3rd of April.
Story first published: Tuesday, April 1, 2014, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X