ವೇತನ ಪರಿಷ್ಕೃರಣೆ; ಮುಷ್ಕರ ಆರಂಭಿಸಿದ ಬಾಷ್ ನೌಕರರು

By Nagaraja

ಜರ್ಮನಿಯ ಪ್ರಮುಖ ವಾಹನ ಬಿಡಿಭಾಗ ತಯಾರಕ ಸಂಸ್ಥೆಯಾಗಿರುವ ಬಾಷ್, ಜಗತ್ತಿನ ಹಲವು ರಾಷ್ಟ್ರಗಳ ವಾಹನ ಘಟಕಗಳ ಬೇಡಿಕೆಗಳಿಗೆ ಆಸರೆಯಾಗಿದೆ. ಅಷ್ಟೇ ಅಲ್ಲದೆ ವಾಹನಗಳಲ್ಲಿ ಬಳಕೆಯಾಗುತ್ತಿರುವ ಸ್ಪಾರ್ಕ್ ಪ್ಲಗ್ ಮತ್ತು ಫ್ಲೂಯಲ್ ಇಂಜೆಕ್ಷನ್ ಪಂಪ್ ನಿರ್ಮಾಣದ ಮುಂಚೂಣಿಯ ಸಂಸ್ಥೆಯು ಇದಾಗಿದೆ.

ಭಾರತದಲ್ಲಿ ಮಹಾರಾಷ್ಟ್ರ, ರಾಜಸ್ತಾನ ಮತ್ತು ಕರ್ನಾಟಕ (ಎರಡು ಘಟಕ) ರಾಜ್ಯಗಳಲ್ಲಾಗಿ ಒಟ್ಟು ನಾಲ್ಕು ಘಟಕಗಳನ್ನು ಹೊಂದಿರುವ ಬಾಷ್ ಸಂಸ್ಥೆಯು ಇದೀಗ ನೌಕರರ ಮುಷ್ಕರ ಸಮಸ್ಯೆ ಎದುರಿಸುತ್ತಿದೆ.

Bosch India

ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಿಬ್ಬಂದಿಗಳು ಅಸಮಾಧಾನ ಹೊಂದಿರುವುದೇ ಇದಕ್ಕಿರುವ ಪ್ರಮುಖ ಕಾರಣವಾಗಿದೆ. ಬೆಂಗಳೂರಿನ ಘಟಕದಲ್ಲಿ 2014 ಸೆಪ್ಟೆಂಬರ್ 16ರಿಂದಲೇ ನೌಕರರು ಮುಷ್ಕರ ಹೂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಾಷ್ ಸಂಸ್ಥೆಯ ಪ್ರಕಾರ, ವಿನಾ ಕಾರಾ ನೌಕರರು ವೇತನ ಹೆಚ್ಚಳಕ್ಕೆ ಬಯಸುತ್ತಿದ್ದಾರೆ. ಇದು ಕಾನೂನುಬದ್ಧ ಹಾಗಾಗಿ ಮುಷ್ಕರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದೆ.

ಎರಡು ವಾರಗಳ ಮುಂಚಿತವಾಗಿ ಬಾಷ್ ಇಂಡಿಯಾ ನೌಕರರು ಮುಷ್ಕರ ಹೂಡುವುದಾಗಿ ಎಚ್ಚರಿಸಿದ್ದರು. ಇದರಂತೆ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಷ್ಕರ ಆರಂಭಿಸಿದ್ದಾರೆ.

Most Read Articles

Kannada
English summary
Bosch is a German auto component manufacturer, they provided various components across the globe. They are one of the leading manufacturers of spark plugs and fuel injection pumps that are used in automobiles.
Story first published: Thursday, September 18, 2014, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X